ಚೆಲುವನಾರಾಯಣಸ್ವಾಮಿ ತೆಪ್ಪೋತ್ಸವ ಸಂಭ್ರಮ

blank

ಮೇಲುಕೋಟೆ: ಮೇಲುಕೋಟೆ ಕಲ್ಯಾಣಿಯಲ್ಲಿ ವೈರಮುಡಿ ಬ್ರಹ್ಮೋತ್ಸವಕ್ಕೂ ಪೂರ್ವಭಾವಿಯಾಗಿ ಚೆಲುವನಾರಾಯಣಸ್ವಾಮಿ ಪ್ರಥಮ ತೆಪ್ಪೋತ್ಸವ ಬುಧವಾರ ರಾತ್ರಿ ಸಂಭ್ರಮದಿಂದ ಜರುಗಿತು.


ವೈರಮುಡಿ ಬ್ರಹ್ಮೋತ್ಸವಕ್ಕೆ ಪೂರ್ವಭಾವಿಯಾಗಿ ಕಲ್ಯಾಣಿಯಲ್ಲಿ ಜರುಗಿದ ಸ್ವಾಮಿಯ ಜಲವಿಹಾರದ ವೈಭವವನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು. ಸೆಸ್ಕ್ ಇಂಜಿನಿಯರ್ ಸಲಹೆಯಂತೆ ಮೈಸೂರಿನ ಹನಿ ಎಲೆಕ್ಟ್ರಿಕಲ್ ವತಿಯಿಂದ ಕಲ್ಯಾಣಿಗೆ ಸರಳ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಪಾಂಡವಪುರ ಖಜಾನೆಯಿಂದ ತಂದ ಮೈಸೂರು ಮಹಾರಾಜರು ಅರ್ಪಿಸಿರುವ ಅಮೂಲ್ಯ ಮುತ್ತುಮುಡಿಯೊಂದಿಗೆ ಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಿ ಸಂಜೆ 7ಗಂಟೆಯ ವೇಳೆಗೆ ಮುಹೂರ್ತ ಪಠಣ ನೆರವೇರಿಸಿ ನಂತರ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು. ಕಲ್ಯಾಣಿಯಲ್ಲಿ ಮೂರು ಪ್ರದಕ್ಷಿಣೆಯೊಂದಿಗೆ ಪ್ರಥಮ ತೆಪ್ಪೋತ್ಸವ ರಾತ್ರಿ 8ಗಂಟೆಗೆ ಮುಕ್ತಾಯವಾಯಿತು.


ಚೆಲುವನಾರಾಯಣಸ್ವಾಮಿ ವೈರಮುಡಿ ಜಾತ್ರಾ ಮಹೋತ್ಸವದ ಎಲ್ಲ ಉತ್ಸವ ಮತ್ತು ವಾಹನೋತ್ಸವಗಳಿಗೆ ವಿಶೇಷ ವಾದ್ಯ ತಂಡಗಳ ನಿಯೋಜನೆ ಮಾಡುವ ಸಂಬಂಧ ಅಂದು ಉಪವಿಭಾಗಾಧಿಕಾರಿಯಾಗಿದ್ದ ಈಗಿನ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜ್ ಮಾರ್ಗದರ್ಶನಲ್ಲಿ ಆರಂಭಗೊಂಡ ವಿಶೇಷ ಮಂಗಳವಾದ್ಯ ಕೈಂಕರ್ಯ ನಾದೋಪಾಸನ ಸೇವೆ 9ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದು, ವಿದ್ವಾನ್ ಆನಂದ್ ಅಭಿಲಾಷ್, ಕುಮಾರ್, ಅಶೋಕ್, ಪುಟ್ಟರಾಜು ನಾದಸ್ವರ ನುಡಿಸಿ ಉತ್ಸವಕ್ಕೆ ಮೆರುಗು ನೀಡಿದರು. ಮಾ.17ರಿಂದ 28ರವರೆಗೆ 14 ದಿನಗಳ ಕಾಲ ನುರಿತ ನಾದಸ್ವರ ಕಲಾವಿದರು, ವಿವಿಧ ಉತ್ಸವ, ವಾಹನೋತ್ಸವ, ಅಭಿಷೇಕಗಳಲ್ಲಿ ಮಂಗಳವಾದ್ಯ ನುಡಿಸಲಿದ್ದಾರೆ

Share This Article

ಉಡುಗೆಗೆ ಮ್ಯಾಚ್​ ಆಗುವ ಲಿಪ್​ಸ್ಟಿಕ್​​​ ಆಯ್ಕೆ ಮಾಡುವುದೇಗೆ?; ಇಲ್ಲಿದೆ ಸಿಂಪಲ್​ ಟಿಪ್ಸ್​​ | Beauty Tips

ನಾವು ಮದುವೆಗೆ ಚೆಂದದ ಬಟ್ಟೆಗಳನ್ನು ಆಯ್ಕೆ ಮಾಡುತ್ತೇವೆ. ಆದ್ದರಿಂದ ಯಾರೂ ನಮಗಿಂತ ಹೆಚ್ಚು ಸುಂದರವಾಗಿ ಕಾಣುವುದಿಲ್ಲ.…

ಚಳಿಗಾಲದಲ್ಲಿ ವಿಟಮಿನ್​​ ಡಿ ಕೊರತೆಯೇ?; ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ | Health Tips

ಚಳಿಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆಯಿಂದ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ. ಆದರೆ ಈ ಪೋಷಕಾಂಶವು ಅನೇಕ…

Mushrooms for Cancer: ಅಣಬೆ ತಿಂದರೆ ಯಾವುದೇ ಕ್ಯಾನ್ಸರ್ ಇದ್ರು ಕಂಟ್ರೋಲ್…!

Mushrooms for Cancer : ಕ್ಯಾನ್ಸರ್ ರೋಗ ಅಪಾಯಕಾರಿ. ಕ್ಯಾನ್ಸರ್ ಚಿಕಿತ್ಸೆಯು ತುಂಬಾ ದುಬಾರಿಯಾಗಿದೆ. ಕ್ಯಾನ್ಸರ್​​ನಲ್ಲಿ…