More

    ಕರೊನಾ ಮುಕ್ತ ಗ್ರಾಮವೆಂಬ ಹೆಗ್ಗಳಿಕೆ ಪಡೆದಿದ್ದ ಮುತ್ತತ್ತಿಯಲ್ಲೀಗ 20 ಪ್ರಕರಣಗಳು ಪತ್ತೆ

    ಮಂಡ್ಯ: ಕೆಲವು ದಿನಗಳ ಹಿಂದೆ ಕರೊನಾ ಮುಕ್ತ ಗ್ರಾಮವೆಂಬ ಹೆಗ್ಗಳಿಕೆ ಪಡೆದಿದ್ದ ಮಳವಳ್ಳಿ ತಾಲೂಕಿನ ಮುತ್ತತ್ತಿ ಗ್ರಾಮದಲ್ಲೀಗ 20 ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ.

    ಮೇ 24ರವರೆಗೂ ಗ್ರಾಮದಲ್ಲಿ ಒಂದೇ ಒಂದು ಸೋಂಕು ಕಾಣಿಸಿಕೊಂಡಿರಲಿಲ್ಲ. ಈ ಸಮಯದಲ್ಲಿ ರಾಜ್ಯದಲ್ಲಿ ಎರಡನೇ ಅಲೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಹೀಗಿದ್ದರೂ ಮುತ್ತತ್ತಿ ಗ್ರಾಮಸ್ಥರು ಸೋಂಕಿನಿಂದ ಪಾರಾಗಿದ್ದರು.

    ಒಟ್ಟು 320 ಜನಸಂಖ್ಯೆ ಇರುವ ಗ್ರಾಮದಲ್ಲಿ ಯಾರೊಬ್ಬರಿಗೂ ಸೋಂಕು ತಗುಲಿರಲಿಲ್ಲ. ಮಂಡ್ಯ ಜಿಲ್ಲಾಡಳಿತ ಗಮನ ಸೆಳೆದಿದ್ದ ಮುತ್ತತ್ತಿ, ಕರೊನಾ ಸೋಂಕು ಮುಕ್ತ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

    ದಟ್ಟ ಅರಣ್ಯದ ಮಧ್ಯೆ ಇರುವ ಮುತ್ತತ್ತಿ ಗ್ರಾಮ, ಪ್ರವಾಸಿಗರ ಪ್ರೇಕ್ಷಣೀಯ ಸ್ಥಳ. ಇದೀಗ ಒಂದೇ ಕುಟುಂಬದ ನ್ವಾಲ್ವರಲ್ಲಿ ಸೋಂಕು ದೃಢಪಟ್ಟಪಟ್ಟಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕಿತರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಒಂದೇ ಕುಟುಂಬದ 6 ಜನ ಸೇರಿದಂತೆ ಮತ್ತೆ 13 ಮಂದಿಗೆ ಸೋಂಕು ದೃಢವಾಗಿದೆ.

    ಮುತ್ತತ್ತಿ ಸಮೀಪದ ಜಂಗಲ್ ಲಾಡ್ಜ್​ನ 7 ಜನರಿಗೆ ಸೋಂಕು ದೃಢವಾಗಿದೆ. ಹೀಗಾಗಿ ಮುತ್ತತ್ತಿ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಿಸಲು‌ ಮಳವಳ್ಳಿ ತಾಲೂಕು ಆಡಳಿತ ಮುಂದಾಗಿದೆ. (ದಿಗ್ವಿಜಯ ನ್ಯೂಸ್​)

    ಇದಪ್ಪಾ ಅದೃಷ್ಟ ಅಂದ್ರೆ! ಲಾಕ್​ಡೌನ್​ ಮಧ್ಯೆಯೂ ಒಂದೇ ದಿನದಲ್ಲಿ ಲಕ್ಷಾಧಿಪತಿಯಾದ ರೈತ

    VIDEO| ನಾಗಾಲ್ಯಾಂಡ್​-ಅಸ್ಸಾಂ ಗಡಿಯಲ್ಲಿ ಕಾಂಗ್ರೆಸ್​ ಶಾಸಕನ ಮೇಲೆ ಗುಂಡಿನ ದಾಳಿ: ವಿಡಿಯೋ ವೈರಲ್​

    ವೈರಲ್​ ಆಯ್ತು ಸುಶೀಲ್​ ಕುಮಾರ್​ ದಾಳಿಯ ವಿಡಿಯೋ: ಕುಸ್ತಿಪಟು ಮೇಲಿನ ಹಲ್ಲೆ ಹಿಂದಿನ ಉದ್ದೇಶ ಬಯಲು​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts