More

    ಸಕ್ರಿಯ ಪ್ರಕರಣದಲ್ಲಿ ಮಂಡ್ಯ ಫಸ್ಟ್

    ಮಂಡ್ಯ: ಕರೊನಾ ವೈರಸ್ ಸೋಂಕಿತರು ಹೆಚ್ಚಿರುವ ಜಿಲ್ಲೆಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಮಂಡ್ಯ, ಸಕ್ರಿಯ ಪ್ರಕರಣದ ಪಟ್ಟಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದೆ. ಇದು ಸಾರ್ವಜನಿಕರಲ್ಲಿ ಆತಂಕ ಮೂಡಿಸುತ್ತಿದೆ.
    ರಾಜ್ಯದಲ್ಲಿ ಸೋಂಕು ಕಾಣಿಸಿಕೊಂಡ ಬಳಿಕ ಕೆಲ ದಿನದಲ್ಲಿ ಹತ್ತರ ಸ್ಥಾನದ ಆಸುಪಾಸಿನಲ್ಲಿದ್ದ ಜಿಲ್ಲೆ, ಮುಂಬೈನಿಂದ ಬಂದವರಿಗೆ ಸೋಂಕು ಕಾಣಿಸಿಕೊಂಡ ಬಳಿಕ ಎರಡನೇ ಸ್ಥಾನಕ್ಕೇರಿದೆ.
    ಮಳವಳ್ಳಿ ತಬ್ಲಿಘಿ, ನಂಜನಗೂಡು ನೌಕರರು ಸೋಂಕು ಕಾಣಿಸಿಕೊಂಡ ಬಳಿಕ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲಿವರೆಗೆ ಆತಂಕ ಪಡುವಂತಹ ಸ್ಥಿತಿಯೂ ಇರಲಿಲ್ಲ. ಮೊದಲ ಬಾರಿಗೆ ಮುಂಬೈನಿಂದ ಬಂದವರಿಗೆ ಸೋಂಕು ಕಾಣಿಸಿಕೊಂಡಿತ್ತು. ಇಲ್ಲಿಂದ ಹಂತ ಹಂತವಾಗಿ ಪ್ರಕರಣ ಹೆಚ್ಚಾಗುತ್ತಾ ಹೋಯಿತು. ಜಿಲ್ಲೆಯ ಜನರಿಗೆ ದೊಡ್ಡ ಶಾಕ್ ನೀಡಿತ್ತು. ಮೇ 16ರಂದು 1, ಮೇ 17ರಂದು 22, ಮೇ 18ರಂದು 17, ಮೇ 19ರಂದು 71 ಹಾಗೂ ಮೇ 20ರಂದು 8 ಜನರಲ್ಲಿ, ಮೇ 21ರಂದು 33 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
    ಈ ಮೂಲಕ ಸೋಂಕಿತರು ಹೆಚ್ಚಿರುವ ಸ್ಥಾನದ ಪೈಕಿ ಬೆಂಗಳೂರಿನ ನಂತರದ ಅಂದರೆ ಎರಡನೇ ಸ್ಥಾನದಲ್ಲಿದೆ. ಮೇ 21ರವರೆಗೆ ಬೆಂಗಳೂರಿನಲ್ಲಿ 256 ಜನರು ಸೋಂಕಿತರಿದ್ದರೆ, ಮಂಡ್ಯದಲ್ಲಿ 201 ಸೋಂಕಿತರಿದ್ದಾರೆ. ಕಲಬುರಗಿಯಲ್ಲಿ 134, ಬೆಳಗಾವಿಯಲ್ಲಿ 125, ದಾವಣಗೆರೆಯಲ್ಲಿ 115 ಜನರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಇನ್ನು ಸಕ್ರಿಯ ಪ್ರಕರಣದಲ್ಲಿ ಮಂಡ್ಯ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಮೇ 21ರವರೆಗೆ ಜಿಲ್ಲೆಯಲ್ಲಿ 176 ಪ್ರಕರಣ ಸಕ್ರಿಯವಾಗಿವೆ. ಬೆಂಗಳೂರಿನಲ್ಲಿ 122, ದಾವಣಗೆರೆಯಲ್ಲಿ 97, ಕಲಬುರಗಿಯಲ್ಲಿ 72, ಬೆಳಗಾವಿಯಲ್ಲಿ 60 ಸಕ್ರಿಯ ಪ್ರಕರಣಗಳಿವೆ.
    ಇನ್ನು ಮಂಡ್ಯ ಜಿಲ್ಲೆಯಲ್ಲಿ ಮೇ 21ರವರೆಗೆ 25 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅಂತೆಯೇ, ಬೆಂಗಳೂರಿನಲ್ಲಿ 124, ಬೆಳಗಾವಿಯಲ್ಲಿ 64, ಕಲಬುರಗಿಯಲ್ಲಿ 55, ಮೈಸೂರಿನಲ್ಲಿ 88 ಜನ ಗುಣಮುಖರಾಗಿದ್ದಾರೆ.
    ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರ ನಡುವೆಯೂ ಗುರುವಾರ ಮತ್ತೊಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮಳವಳ್ಳಿ ಪಟ್ಟಣದ ಸೋಂಕಿತ ವ್ಯಕ್ತಿ ಗುಣಮುಖರಾಗಿದ್ದು, ಆಸ್ಪತ್ರೆ ಸಿಬ್ಬಂದಿ ಬೀಳ್ಕೊಡುಗೆ ನೀಡಿದರು.
    ಗುರುವಾರ ಕಂಟಕ: ಜಿಲ್ಲೆಯ ಪಾಲಿಗೆ ಗುರುವಾರದ ಸೋಂಕಿತರ ಸಂಖ್ಯೆ ಮತ್ತಷ್ಟು ಆತಂಕವನ್ನು ಸೃಷ್ಠಿ ಮಾಡಿದೆ. ಬುಧವಾರ 8 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದು ಕೊಂಚ ಸಮಾಧಾನ ಎನ್ನಿಸಿಕೊಂಡಿತ್ತು. ಆದರೆ, ಗುರುವಾರ ಬೆಳಗಿನ ಹೆಲ್ತ್ ಬುಲೆಟಿನ್‌ನಲ್ಲಿ 15, ಸಂಜೆ ಹೆಲ್ತ್ ಬುಲೆಟಿನ್‌ನಲ್ಲಿ 18 ಸೇರಿದಂತೆ ಒಂದೇ ದಿನ 33 ಸೋಂಕು ಕಾಣಿಸಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts