More

    ಶವ ಕೊಟ್ಟ ಆಸ್ಪತ್ರೆಯವರೇ ಮೂರು ದಿನದ ಬಳಿಕ ಮೃತನಿಗೆ ಟ್ರೀಟ್​ಮೆಂಟ್​ ಕೊಡ್ಬೇಕು ದಾಖಲಿಸಿ ಅಂದ್ರು!

    ಮಂಡ್ಯ: ಬಹು ಅಂಗಾಂಗ ವೈಫಲ್ಯ ಹಾಗೂ ಕರೊನಾ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಮೂರು ದಿನಕ್ಕೆ ಆಸ್ಪತ್ರೆಗೆ ದಾಖಲಾಗುವಂತೆ ಜಿಲ್ಲಾ ಕೋವಿಡ್ ಕೇಂದ್ರದಿಂದ ಕರೆ ಬಂದಿದೆ!

    ಅನ್ನಪೂಣೇಶ್ವರಿನಗರದ ನಿವಾಸಿ ಶ್ರೀನಿವಾಸಲು ಕಿಡ್ನಿ, ಲಿವರ್ ವೈಫಲ್ಯ, ಶ್ವಾಸಕೋಶ ತೊಂದರೆಯಿಂದಾಗಿ ಆ.19ರಂದು ಮಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಸಾಮಾನ್ಯ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ತೀವ್ರ ನಿಗಾ ಘಟಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಯಿತು. ಈ ಮಧ್ಯೆ ಅವರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಯಿತು. ವರದಿ ಬರುವ ಮುನ್ನವೇ ಚಿಕಿತ್ಸೆ ಫಲಕಾರಿಯಾಗದೆ ಆ.22ರ ಮುಂಜಾನೆ ಆಸ್ಪತ್ರೆಯಲ್ಲೇ ಶ್ರೀನಿವಾಸ್​ ಮೃತಪಟ್ಟರು. ರೋಗಿಯ ಸಂಬಂಧಿಕರು ಗಲಾಟೆ ಮಾಡಿದ ಬಳಿಕ ಸಂಜೆಯ ವೇಳೆಗೆ ಶವ ನೀಡಿದ್ದರು. ತಾಲೂಕಿನ ಸುಂಡಹಳ್ಳಿ ಬಳಿ ಗುರುತಿಸಲಾಗಿದ್ದ ಸ್ಥಳದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಈ ನಡುವೆ ಆ.24ರ ಮಧ್ಯಾಹ್ನ ಮೃತನ ಕುಟುಂಬಕ್ಕೆ ಕರೆ ಮಾಡಿದ ಆಸ್ಪತ್ರೆ ಸಿಬ್ಬಂದಿ, ಶ್ರೀನಿವಾಸಲು ಅವರಿಗೆ ಕರೊನಾ ಸೋಂಕು ತಗುಲಿದೆ. ಆಸ್ಪತ್ರೆಗೆ ದಾಖಲಿಸಿ ಎಂದು ಸೂಚಿಸಿದ್ದಾರೆ.

    ಇದನ್ನೂ ಓದಿರಿ ಅಂತ್ಯಸಂಸ್ಕಾರದ ಬಳಿಕ ಶವ ಕೊಂಡೊಯ್ಯುವಂತೆ ದುಂಬಾಲು ಬಿದ್ದ ಆಸ್ಪತ್ರೆ!

    ಶ್ರೀನಿವಾಸಲು ಸತ್ತದ್ದು ಆಸ್ಪತ್ರೆಯಲ್ಲೇ. ಅಲ್ಲಿಂದಲೇ ಶವ ತಂದು ಅಂತ್ಯಸಂಸ್ಕಾರವನ್ನೂ ಆ ದಿನವೇ ಮುಗಿಸಲಾಗಿದೆ. ಇದಾದ ಮೂರು ದಿನದ ಬಳಿಕ ಆಸ್ಪತ್ರೆಯಿಂದ ಬಂದ ಕರೆ, ‘ಶ್ರೀನಿವಾಸುಲು ಅವರನ್ನು ಆಸ್ಪತ್ರೆಗೆ ದಾಖಲಿಸಿ ಎನ್ನುತ್ತಿದ್ದಂತೆ ಆಕ್ರೋಶಗೊಂಡ ಕುಟುಂಬಸ್ಥರು, ‘ಅವರಾಗಲೇ ಮೃತಪಟ್ಟು ಮೂರು ದಿನ ಕಳೆದಿದೆ. ಈಗ ಎಲ್ಲಿಂದ ತಂದು ಆಸ್ಪತ್ರೆಗೆ ದಾಖಲಿಸೋದು?’ ಎನ್ನುವಷ್ಟರಲ್ಲಿ ಸಿಬ್ಬಂದಿ ಮೊಬೈಲ್ ಸಂಪರ್ಕ ಕಡಿತಗೊಳಿಸಿದ್ದಾರೆ.

    ಕೋವಿಡ್ ಕರ್ತವ್ಯದಲ್ಲಿರುವ ಸಿಬ್ಬಂದಿ ಇನ್ನಾದರೂ ಇಂತಹ ಎಡವಟ್ಟು ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ.

    ಹೆಸರಿಗಷ್ಟೇ ಆಯುರ್ವೇದ ಕೇಂದ್ರ, ಅಲ್ಲಿ ನಡೀತಾಯಿತ್ತು 800 ರೂ. ವೇಶ್ಯಾವಾಟಿಕೆ!

    ಗಂಡನನ್ನು ಮಚ್ಚಿನಿಂದ ಬರ್ಬರವಾಗಿ ಕೊಂದು ಪೊಲೀಸ್​ ಠಾಣೆಗೆ ಬಂದ ಪತ್ನಿ, ಕಾರಣ ಹೀಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts