More

    ಆಸ್ಟ್ರೇಲಿಯಾದ ಮಹಿಳಾ ಬಿಬಿಎಲ್‌ನಲ್ಲಿ ದಾಖಲೆ ನಿರ್ಮಿಸಿದ ಸ್ಮತಿ ಮಂದನಾ

    ಮೆಕ್‌ಕೇ: ಎಡಗೈ ಆರಂಭಿಕ ಬ್ಯಾಟರ್ ಸ್ಮತಿ ಮಂದನಾ (114*ರನ್, 64 ಎಸೆತ, 14 ಬೌಂಡರಿ, 3 ಸಿಕ್ಸರ್) ಆಸ್ಟ್ರೇಲಿಯಾದ ಮಹಿಳಾ ಬಿಗ್ ಬಾಷ್ ಲೀಗ್ ಟಿ20 ಟೂರ್ನಿಯಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯರೆನಿಸಿದ್ದಾರೆ. ಇದರ ಹೊರತಾಗಿಯೂ ಸಿಡ್ನಿ ಥಂಡರ್ಸ್‌ ತಂಡ ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧ 4 ರನ್‌ಗಳಿಂದ ವೀರೋಚಿತ ಸೋಲು ಕಂಡಿತು.

    ಮೊದಲು ಬ್ಯಾಟಿಂಗ್ ಮಾಡಿದ ಮೆಲ್ಬೋರ್ನ್, ಭಾರತದ ಮತ್ತೋರ್ವ ಆಟಗಾರ್ತಿ ಹರ್ಮಾನ್‌ಪ್ರೀತ್ ಕೌರ್ (81*ರನ್, 55 ಎಸೆತ, 11 ಬೌಂಡರಿ, 2 ಸಿಕ್ಸರ್) ಬಿರುಸಿನ ಆಟದಿಂದ 4 ವಿಕೆಟ್‌ಗೆ 175 ರನ್ ಪೇರಿಸಿತು. ಪ್ರತಿಯಾಗಿ ಸ್ಮತಿ ಸಾಹಸದ ನಡುವೆಯೂ ಸಿಡ್ನಿ, 2 ವಿಕೆಟ್‌ಗೆ 171 ರನ್ ಗಳಿಸಲಷ್ಟೇ ಶಕ್ತವಾಯಿತು.

    ಕೊನೇ ಓವರ್‌ನಲ್ಲಿ 13 ರನ್ ಬೇಕಿದ್ದಾಗ ಹರ್ಮಾನ್‌ಪ್ರೀತ್ (27ಕ್ಕೆ 1) 8 ರನ್ ಮಾತ್ರ ಬಿಟ್ಟುಕೊಟ್ಟರು. ಕೊನೇ ಎಸೆತದಲ್ಲಿ 6 ರನ್ ಬೇಕಿದ್ದಾಗ ಸ್ಮತಿ, ದೇಶಬಾಂಧವೆಯ ಎದುರು 1 ರನ್ ಕಸಿಯಲಷ್ಟೇ ಯಶಸ್ವಿಯಾದರು. ಈ ಜಯದೊಂದಿಗೆ ರೆನೆಗೇಡ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದು, ಪ್ರಶಸ್ತಿ ಸುತ್ತಿಗೆ ನೇರಅರ್ಹತೆ ಸಂಪಾದಿಸುವ ಅವಕಾಶ ವೃದ್ಧಿಸಿಕೊಂಡಿದೆ.

    ಅಭ್ಯಾಸದ ವೇಳೆ ನೆಟ್ಸ್‌ನಲ್ಲಿ ಪಾಕ್ ಧ್ವಜ ಹಾರಾಟ, ಬಾಂಗ್ಲಾದೇಶ ಪ್ರವಾಸದಲ್ಲಿ ಕಿರಿಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts