More

    ಮಾಂಡೌಸ್‌ಗೆ ಮಲೆನಾಡು ಶಿವಮೊಗ್ಗ ಗಡಗಡ

    ಶಿವಮೊಗ್ಗ: ಬಂಗಾಳ ಕೊಲ್ಲಿಯ ಮಾಂಡೌಸ್ ಚಂಡಮಾರುತದ ಪ್ರಭಾವ ಶಿವಮೊಗ್ಗದಲ್ಲೂ ಬೀರುತ್ತಿದ್ದು ಭಾನುವಾರ ಮಳೆ ಆರ್ಭಟದ ಜತೆಗೆ ಇಡೀ ದಿನ ಮೋಡ ಕವಿದಿದ್ದರಿಂದ ಮಲೆನಾಡಿನಾದ್ಯಂತ ಥಂಡಿ ವಾತಾವರಣ ಸೃಷ್ಟಿಯಾಗಿದೆ. ಇದು ರೈತರು ಆತಂಕದಲ್ಲಿ ಕಾಲ ಕಳೆಯುವಂತೆ ಮಾಡಿದೆ.
    ಶನಿವಾರ ಸಂಜೆಯಿಂದಲೇ ಜಿಟಿ ಜಿಟಿ ಮಳೆ ಆರಂಭಗೊಂಡಿತು. ಜಿಲ್ಲೆಯ ಹಲವೆಡೆ ರಾತ್ರಿಯಿಡೀ ಮಳೆ ಮುಂದುವರಿದಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಅಲ್ಪ ಬಿಡುವು ನೀಡಿದ್ದ ವರುಣ ಮಧ್ಯಾಹ್ನದ ಬಳಿಕ ಮಳೆ ಮತ್ತಷ್ಟು ಹೆಚ್ಚಾಯಿತು. ಥಂಡಿ ವಾತಾವರಣದಿಂದ ಜನರು ಮನೆಗಳಿಂದ ಹೊರಬರಲು ಹಿಂದೇಟು ಹಾಕಿದರು.
    ಈಗಾಗಲೇ ಜಿಲ್ಲೆಯ ಹಲವೆಡೆ ಅಡಕೆ, ಮೆಕ್ಕೆಜೋಳ, ಭತ್ತ ಕಟಾವಿಗೆ ಬಂದಿವೆ. ಕೆಲವರು ರೈತರು ಮೆಕ್ಕೆಜೋಳ, ಭತ್ತ ಕಟಾವು ಮಾಡಿದ್ದಾರೆ. ಇದೀಗ ವರ್ಷದ ತುತ್ತಿಗೂ ಸೈಕ್ಲೋನ್ ಪೆಟ್ಟು ನೀಡುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಹಾಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕಟಾವು ಮಾಡಿರುವ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಪರದಾಟ ನಡೆಸುತ್ತಿದ್ದಾರೆ.
    ಡಿ.15ರ ನಂತರ ಮತ್ತೆ ಚಳಿ ಅನುಭವ ಉಂಟಾಗಲಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ 6 ಎಂಎಂ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಭಾನವಾರದಿಂದ ಡಿ.15ರವರೆಗೂ ಮೋಡ ಕವಿದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts