More

    ‘ಕೊಟ್ಟಿರುವ ಖಾತೆ ನಿಭಾಯಿಸಬೇಕು’ – ನಾಗರಾಜ್, ಸಿಂಗ್​​ಗೆ ಕುಟುಕಿದ ಕೃಷಿ ಸಚಿವ ಪಾಟೀಲ್

    ಬೆಂಗಳೂರು: ನಿರ್ದಿಷ್ಟವಾಗಿ ಇಂತಹುದೇ ಖಾತೆ ಬೇಕು ಎಂಬ ಬೇಡಿಕೆಯಿಟ್ಟು, ಅಸಮಾಧಾನ ವ್ಯಕ್ತಪಡಿಸಿರುವುದು ಸರಿಯಲ್ಲ. ಕೊಟ್ಟಿರುವ ಖಾತೆಯನ್ನು ನಿಭಾಯಿಸಬೇಕು ಎಂದು ಸಚಿವರಾದ ಎಂ.ಟಿ.ಬಿ.ನಾಗರಾಜ್ ಮತ್ತು ಆನಂದ್ ಸಿಂಗ್ ಅವರಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಪರೋಕ್ಷವಾಗಿ ಕುಟುಕಿದ್ದಾರೆ.

    ವಿಕಾಸಸೌಧದಲ್ಲಿ ಕೊಠಡಿ ಪೂಜೆ ಮೂಲಕ ಕಚೇರಿ ಪ್ರವೇಶ ಮಾಡಿದ ಬಳಿಕ ಮಾತನಾಡಿದ ಅವರು, “ಕೆಲವರು ತಮಗೆ ಇಂತಹದ್ದೇ ಖಾತೆ ಬೇಕು ಅಂತಾ ಬಯಸಿರುತ್ತಾರೆ. ಸಿಗದೇ ಇದ್ದಾಗ ಅಸಮಾಧಾನ ಸಹಜ. ಆದರೆ ಕೊಟ್ಟ ಖಾತೆಯಲ್ಲಿ ಕೆಲಸ ಮಾಡಬೇಕು” ಎಂದರು.

    ಇದನ್ನೂ ಓದಿ: ಕರೊನಾ ಹೆಚ್ಚಿರುವ ಗಡಿ ಜಿಲ್ಲೆಗಳಿಗೆ ಸಿಎಂ ಬೊಮ್ಮಾಯಿ ಭೇಟಿ

    ಹದಿನೇಳು ಜನ ಮತ್ತು 105 ಜನ ಅನ್ನೋದೇ ಮುಖ್ಯ ಅಲ್ಲ. ಎರಡೂ ಕೈ ಸೇರಿದರೇನೇ ಚಪ್ಪಾಳೆ. ಹಾಗಾಗಿ ಸರ್ಕಾರ ಬರೋದಕ್ಕೆ 105 ಶಾಸಕರು ಹಾಗೂ 17 ಜನಾನೂ ಕಾರಣ ಎಂದು ಇದೇ ವೇಳೆ ಪಾಟೀಲ್​ ಸ್ಪಷ್ಟಪಡಿಸಿದರು.

    ಸಂಭ್ರಮಾಚರಣೆಗೆ ಸಮರ್ಥನೆ : ಕರೊನಾ ನಿಯಮ ಉಲ್ಲಂಘಿಸಿ ನಡೆದ ಸಂಭ್ರಮಾಚರಣೆಯನ್ನು ಕೃಷಿ ಸಚಿವ ಬಿ.ಸಿ.‌ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ. ಮಾಜಿ ಸಿಎಂ ಎಚ್​​ಡಿಕೆ ಅವರು ನೂತನ ಸಚಿವರಿಂದ ತಮ್ಮ ಜಿಲ್ಲೆಯಲ್ಲಿ ಸಂಭ್ರಮ ಆಚರಣೆ ಬಗ್ಗೆ ಟೀಕೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, “ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರೆ ತಪ್ಪೇನು. ಅವರು ಖುಷಿಯಿಂದ ಬಂದರೆ ನಾವೇನು ತಳ್ಳುವುದಕ್ಕೆ ಆಗುತ್ತಾ?” ಎಂದು ಕೇಳಿದರು.

    ಕರೊನಾ ಹೆಚ್ಚಳವಾಗುವ ಆತಂಕದಿಂದ ಗಡಿ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದ್ದು, ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಅವಧಿ ಒಂದು ತಾಸು ಹೆಚ್ಚಿಸುವ ಮೂಲಕ ಸರ್ಕಾರ ಅಗತ್ಯ ಕ್ರಮ ವಹಿಸಿದೆ ಎಂದು ಬಿ.ಸಿ.ಪಾಟೀಲ್ ಹೇಳಿದರು.

    VIDEO | ನಡುರಸ್ತೆಯಲ್ಲಿ ಡ್ಯಾನ್ಸ್​, ಕ್ಯಾಮೆರಾಗೆ ಪೋಸ್!

    ಹಾಕಿ ಆಟಗಾರ್ತಿಗೆ ಗೌರವಗಳ ಬುತ್ತಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ರಾಯಭಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts