More

    VIDEO| ಹಾಡು ಕೇಳುವಾಗ ಕಿವಿಯಲ್ಲಿ ಕಚಗುಳಿ: ಹೆಡ್​ಫೋನ್​ ತೆರೆದು ನೋಡಿದವನಿಗೆ ಕಾದಿತ್ತು ಶಾಕ್​!

    ಪರ್ತ್​: ಹೆಡ್​ಫೋನ್​ನಿಂದ ಹಾಡು ಕೇಳುವಾಗ ಕಿವಿಯಲ್ಲಿ ಕಚಗುಳಿಯ ಅನುಭವಾಗಿ ಹೆಡ್​ ಫೋನ್​ ತೆಗೆದು ನೋಡಿದ ಆಸ್ಟ್ರೇಲಿಯಾ ಮೂಲದ ಪ್ಲಂಬರ್​ಗೆ ಶಾಕ್​ ಒಂದು ಎದುರಾಗಿತ್ತು. ಏನದು ಆ ಶಾಕ್​ ಎಂಬ ಕುತೂಹಲವಿದ್ದರೆ ಮುಂದೆ ಓದಿ.

    ಪರ್ತ್​ ಮೂಲದ ಪ್ಲಂಬರ್ ಕಿವಿಗೆ ಹೆಡ್​ಫೋನ್​ ಹಾಕಿಕೊಂಡು ಹಾಡು ಕೇಳುತ್ತಾ ತನ್ನ ಕೆಲಸದಲ್ಲಿ ನಿರತನಾಗಿದ್ದ. ಹೀಗಿರುವಾಗ ಕೆಲಸದ ನಡುವೆ ಕಿವಿಯಲ್ಲಿ ಕಚಗುಳಿಯ ಅನುಭವವಾಗುತ್ತಿತ್ತು. ಇದರಿಂದ ಕೆಲಸಕ್ಕೂ ತೊಂದರೆಯಾಗುತ್ತಿತ್ತು. ಸರಿ ಏನಿರಬಹುದು ಎಂಬ ಕುತೂಹಲದಿಂದ ಹೆಡ್​ಫೋನ್​ ತೆಗೆದು ನೋಡಿದ ಪ್ಲಂಬರ್​ಗೆ ಹೆಡ್​ಫೋನ್​ನಲ್ಲಿನ ಸಾಫ್ಟ್​ ಪ್ಯಾಡಿಂಗ್​ನಲ್ಲಿ ಜೇಡವೊಂದು ಆಶ್ರಯ ಪಡೆದುಕೊಂಡಿದ್ದನ್ನು ನೋಡಿ ಗಾಬರಿಯಾಯಿತು.

    ಇದನ್ನೂ ಓದಿ: ದಲಿತ ಯುವಕನ ಹತ್ಯೆ ಖಂಡಿಸಿ ಪ್ರತಿಭಟನೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಹಿಂದು ಜಾಗರಣಾ ವೇದಿಕೆ ಪಟ್ಟು

    ಬಳಿಕ ಜೇಡವನ್ನು ಹೆಡ್​ಫೋನ್​ನಿಂದ ಹೊರಗಾಕಲು ಎಷ್ಟೇ ಪ್ರಯತ್ನಿಸಿದಾದರೂ ಜೇಡ ಮಾತ್ರ ಜಪ್ಪಯ್ಯ ಅಂದ್ರೂ ಜಗ್ಗಲಿಲ್ಲ. ಆ ಸಾಫ್ಟ್​ ಪ್ಯಾಡಿಂಗ್​ ಅನುಭವ ಜೇಡಕ್ಕೆ ತುಂಬಾ ಹೊಂದಿಕೊಂಡಿತು ಎನ್ನಲಾಗಿದೆ. ಹೀಗಾಗಿ ಅದರಿಂದ ಹೊರಬರಲು ಜೇಡ ಒಪ್ಪಲಿಲ್ಲ ಎನ್ನುತ್ತಾರೆ ಪ್ಲಂಬರ್​.

    ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ. ಸಾಕಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಹೆಡ್​ಫೋನ್​ ಅದಕ್ಕೆ ಸೂಕ್ತ ಸ್ಥಳ ಎನಿಸಿರಬಹುದು. ಹೀಗಾಗಿ ಅದನ್ನು ಬಿಟ್ಟು ಹೊರಬರುತ್ತಿಲ್ಲ ಎಂದು ಕಮೆಂಟಿಸಿದ್ದಾರೆ. (ಏಜೆನ್ಸೀಸ್​)

    "I felt something tickling my ear": Huntsman spider found hiding in earmuffs

    NOOOPE! 😱🕷️Perth plumber Olly Hurst got the fright of his life when he took off his earmuffs to find a huntsman spider hiding inside.He said he could feel something tickling his ear 😲Is this what nightmares are made of? What would you do if this happened to you?📹 Olly Hurst

    Posted by ABC Perth on Friday, October 9, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts