More

    ಯೂಟ್ಯೂಬ್ ಪ್ರಾಂಕ್ಸ್​ ಸೋಗಿನಲ್ಲಿ ಎಲ್ಲೆಲ್ಲೋ ಮುಟ್ತಿದ್ದ… ಮಾಡಿದ್ದೆಲ್ಲ ದುಡ್ಡಿಗಾಗಿ !

    ಮುಂಬೈ: ಕರೊನಾ ಹಿನ್ನೆಲೆಯ ಲಾಕ್​ಡೌನ್ ಸಂದರ್ಭದಲ್ಲಿ ದುಡ್ಡು ಸಂಪಾದಿಸಲು ಕೆಲವರು ಹೇಯ ಕೃತ್ಯಗಳನ್ನು ಎಸಗುವ ವಿಚಿತ್ರ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಹಾಗಾಗಿ ಇತ್ತೀಚೆಗೆ ಲೈಂಗಿಕ ಕಿರುಕುಳ ಸಂಬಂಧಿತ ಸೈಬರ್​ ಕ್ರೈಂಗಳು ಹೆಚ್ಚಾಗುತ್ತಿವೆ ಎಂಬುದು ಮುಂಬೈ ಪೊಲೀಸರ ಅಂಬೋಣ.

    ಅಶ್ಲೀಲ ನಡವಳಿಕೆ ಮತ್ತು ಮಾತುಗಳಿಂದ ತುಂಬಿದ ವೀಡಿಯೋಗಳನ್ನು ಮಾಡುವುದು, ಹೆಚ್ಚು ವೀಕ್ಷಣೆಗಳನ್ನು ಗಳಿಸಿ ಯೂಟ್ಯೂಬ್​ನಿಂದ ಹಣ ಪಡೆಯುವುದು – ಇದು ಕೆಲವು ಖದೀಮರು ಕಂಡುಕೊಂಡಿರುವ ಹೊಸ ಮಾರ್ಗ ಎನ್ನಲಾಗಿದೆ. ಈ ರೀತಿ ಕೆಟ್ಟ ಅಭಿರುಚಿಯ ವೀಡಿಯೋಗಳನ್ನು ಮಾಡಿ ಪೋಸ್ಟ್​ ಮಾಡುವ 17 ಚಾನೆಲ್​ಗಳು ಯೂಟ್ಯೂಬ್ ಮತ್ತು ಫೇಸ್​ಬುಕ್​ನಲ್ಲಿ ಕಂಡುಬಂದಿವೆ. ಅವುಗಳು ಸಂಪಾದಿಸಿರುವ ಹಣ 2 ಕೋಟಿ ರೂಪಾಯಿಗಳು ಎಂದು ಮುಂಬೈ ಪೊಲೀಸ್ ಜಂಟಿ ಕಮಿಷನರ್ ಮಿಲಿಂದ್ ಭರಂಬರೆ ಹೇಳಿದ್ದಾರೆ.

    ಇದನ್ನೂ ಓದಿ: ಪಿಎನ್​ಬಿ ಹಗರಣ : ನೀರವ್ ಮೋದಿಯನ್ನು ಭಾರತಕ್ಕೆ ಒಪ್ಪಿಸಲು ಇಂಗ್ಲೆಂಡ್ ಕೋರ್ಟ್ ಅನುಮತಿ

    ಇಂಥದೇ ಒಂದು ಕೇಸಿನಲ್ಲಿ 29 ವರ್ಷದ ಮುಕೇಶ್ ಗುಪ್ತ ಮತ್ತು ಇತರ ಈರ್ವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 2008 ರಲ್ಲಿ 10 ನೇ ತರಗತಿಯಲ್ಲಿ ಟಾಪರ್ ಆಗಿದ್ದ ಗುಪ್ತ, ಜೀವನೋಪಾಯಕ್ಕಾಗಿ ಟ್ಯೂಷನ್ ನಡೆಸುತ್ತಿದ್ದ. ಇದೀಗ ಸ್ವಲ್ಪ ಕಾಲದಿಂದ ಯೂಟ್ಯೂಬ್​ನಲ್ಲಿ ಪ್ರಾಂಕ್​ ವೀಡಿಯೋಗಳನ್ನು ಮಾಡುವ ಸೋಗಿನಲ್ಲಿ ಹೊಸದೊಂದು ಅಪರಾಧಕ್ಕೆ ಕೈಹಾಕಿದ್ದ ಎನ್ನಲಾಗಿದೆ.

    ಯೂಟ್ಯೂಬ್​ನಲ್ಲಿ ಪ್ರಾಂಕ್ ವೀಡಿಯೋ ಮಾಡುವ ಹೆಸರಲ್ಲಿ ಯುವತಿಯರನ್ನು ಎಲ್ಲೆಲ್ಲೋ ಹೇಗ್ಹೇಗೋ ಮುಟ್ಟುವುದು ಮತ್ತು ಅಶ್ಲೀಲ ಮಾತುಗಳನ್ನಾಡುವುದು ಗುಪ್ತನ ಪರಿಪಾಠವಾಗಿತ್ತು. ಇಂಥ ವೀಡಿಯೋಗಳಿಗೆ ಆತ ಕೆಲವು ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳನ್ನು ಆಹ್ವಾನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹಲವಾರು ಮಹಿಳೆಯರು ಈ ವೀಡಿಯೋಗಳ ಬಗ್ಗೆ ದೂರು ನೀಡಿ ಸಹಾಯ ಕೋರಿದ ಮೇಲೆ, ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಈಗ ಗುಪ್ತ ಮೇಲೆ ಪೋಕ್ಸೋ ಕಾಯ್ದೆ ಮತ್ತು ಐಪಿಸಿ ಕೆಳಗೆ ಕೇಸು ದಾಖಲಿಸಲಾಗಿದೆ.

    ಇದನ್ನೂ ಓದಿ: ಲೈಂಗಿಕ ಶಕ್ತಿ ವೃದ್ಧಿಗೆ ಆಂಧ್ರದಲ್ಲಿ ಕತ್ತೆಗಳ ಮಾರಣಹೋಮ: ಅಳಿವಿನಂಚಿಗೆ ಸಾಗುತ್ತಿರುವ ಮೂಕ ಪ್ರಾಣಿ!

    ತನಿಖೆಯ ವೇಳೆಯಲ್ಲಿ ಕರೊನಾ ಲಾಕ್ಡೌನ್ ಸಮಯದಲ್ಲಿ 300 ಕ್ಕೂ ಹೆಚ್ಚು ಇಂಥ ವೀಡಿಯೋಗಳನ್ನು ಮಾಡಿ, ಯೂಟ್ಯೂಬ್​ನಲ್ಲಿ ಹಾಕಿರುವುದು ಬೆಳಕಿಗೆ ಬಂದಿದೆ. ಈ ವೀಡಿಯೋಗಳನ್ನು ತೆಗೆದುಹಾಕಲು ಯೂಟ್ಯೂಬ್​ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಕರೊನಾ ಲಸಿಕೆ ಬಗ್ಗೆ ‘ಹೇಟ್ ಸ್ಪೀಚ್’ : ಯೂಟ್ಯೂಬರ್ ಅಬು ಫೈಸಲ್ ಬಂಧನ

    2ನೇ ಹಂತದ ಕರೊನಾ ಲಸಿಕೆ ಅಭಿಯಾನ : ಇಲ್ಲಿದೆ, ನಿಮ್ಮ ಪ್ರಶ್ನೆಗಳಿಗೆ ಉತ್ತರ

    ಭಾರತೀಯ ಆಟಿಕೆಗಳಾದ ಬುಗುರಿ, ಕ್ಯಾಟರ್​ಬಿಲ್ಲು ವಿಜ್ಞಾನ ಕಲಿಸುತ್ತವೆ : ಪ್ರಧಾನಿ ಮೋದಿ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts