More

    VIDEO| ರಜಿನಿಯ ಮ್ಯಾನ್​ ವರ್ಸಸ್​ ವೈಲ್ಡ್ ಕಾರ್ಯಕ್ರಮದ ಮೋಷನ್​ ಪೋಸ್ಟರ್​ ವಿಡಿಯೋ ರಿಲೀಸ್! ​​

    ನವದೆಹಲಿ: ಕಳೆದ ತಿಂಗಳಷ್ಟೇ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸೂಪರ್​ ಸ್ಟಾರ್​ ರಜಿನಿಕಾಂತ್​ ಮತ್ತು ವನ್ಯ ಜೀವಿ ಸಾಹಸ ನಿರ್ದೇಶಕ ಬೇರ್​ ಗ್ರೀಲ್ಸ್ ಅವರು ಮ್ಯಾನ್​ ವರ್ಸಸ್​ ವೈಲ್ಡ್​ ಕಾರ್ಯಕ್ರಮದ ಶೂಟಿಂಗ್​ ನಡೆಸಿದ್ದು ಭಾರಿ ಸುದ್ದಿಯಾಗಿತ್ತು.

    ಶೂಟಿಂಗ್​ ಏನೋ ಮುಗಿಯಿತು ಮತ್ತೆ ಕಾರ್ಯಕ್ರಮ ಯಾವಾಗ ಎಂಬ ಕುತೂಹಲ ಎಲ್ಲರಲ್ಲೂ ಸಹ ಮೂಡಿದೆ. ಇದೀಗ ಸ್ವತಃ ಬೇರ್​ ಗ್ರೀಲ್ಸ್​ ಅವರೇ ಉತ್ತರ ನೀಡಿದ್ದು, ಕಾರ್ಯಕ್ರಮದ ಮೋಷನ್​ ಪೋಸ್ಟರ್​ ವಿಡಿಯೋವನ್ನು ಬಿಡುಗಡೆ ಮಾಡಿ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದಿದ್ದಾರೆ.

    ತಮ್ಮ ಟ್ವಿಟರ್​ ಖಾತೆಯಲ್ಲಿ ಮೋಷನ್​ ಪೋಸ್ಟರ್​ ವಿಡಿಯೋ ಶೇರ್​ ಮಾಡಿಕೊಂಡಿದ್ದು, ವೈಲ್ಡ್​ ವಿತ್ ಬೇರ್​ ಗ್ರೀಲ್ಸ್​ ಕಾರ್ಯಕ್ರಮ ಮೂಲಕ​ ರಜಿನಿಕಾಂತ್​ ಅವರ ಕಿರುತೆರೆ ಪಾದರ್ಪಣೆಯ ಬ್ಲಾಕ್​ಬಸ್ಟರ್​ ಕಾರ್ಯಕ್ರಮದ ತಯಾರಿ ನಡೆಯುತ್ತಿದೆ. ಅದರ ಮೋಷನ್​ ಪೋಸ್ಟರ್​​ ಝಲಕ್​ ಇದಾಗಿದ್ದು, ಜಾಗತಿಕವಾಗಿ ನಾನು ಸಾಕಷ್ಟು ನಟರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ, ರಜಿನಿ ನನಗೆ ತುಂಬಾ ವಿಶೇಷ. ಲವ್​ ಇಂಡಿಯಾ ಎಂದು ಬರೆದು #ThalaivaOnDiscovery ಎಂದು ಹ್ಯಾಶ್​ಟ್ಯಾಗ್ ನೀಡಿದ್ದಾರೆ.​

    ಈಗಾಗಲೇ ಮೋಷನ್​ ಪೋಸ್ಟರ್​ ವಿಡಿಯೋವನ್ನು 1.95 ಲಕ್ಷ ಮಂದಿ ವೀಕ್ಷಣೆ ಮಾಡಿದ್ದು, ಏಳು ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್​ ಮಾಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts