More

    ಎರಡನೇ ವಿಶ್ವಯುದ್ಧ ಸಂದರ್ಭದ ಸಜೀವ ಬಾಂಬ್​ ಆನ್​ಲೈನ್ ಮಾರಾಟಕ್ಕಿಟ್ಟ ಭೂಪ; ಕೊನೆಗೇನಾಯ್ತು?

    ನವದೆಹಲಿ: ಎರಡನೇ ವಿಶ್ವಯುದ್ಧ ಸಂದರ್ಭದ ಸಜೀವ ಬಾಂಬ್​ವೊಂದನ್ನು ಇಲ್ಲೊಬ್ಬ ಭೂಪ ಆನ್​ಲೈನ್​ನಲ್ಲಿ ಮಾರಾಟಕ್ಕಿಟ್ಟಿದ್ದ. ಆದರೆ ಅದನ್ನು ಗಮನಿಸಿ ಎಚ್ಚರಿಕೆ ಕೊಟ್ಟ ಅಧಿಕಾರಿಗಳು, ಆತನ ಮನೆಯನ್ನು ಪತ್ತೆ ಹಚ್ಚಿ ಆತನನ್ನು ವಶಕ್ಕೆ ಪಡೆದಿದ್ದಾರೆ.

    51 ವರ್ಷದ ಮಾರ್ಕ್ ವಿಲಿಯಮ್ಸ್​ ಎಂಬ ಈತ ಮೆಟಲ್ ಡಿಟೆಕ್ಟರ್ ಆಗಿದ್ದು, ಇಂಗ್ಲೆಂಡ್​ನ ಹ್ಯಾಂಪ್​ಶೈರ್​ನ ಸ್ವೇಥ್ಲಿಂಗ್​ನಲ್ಲಿರುವ ಸಹೋದರನ ಮನೆ ಬಳಿ ಸಿಕ್ಕ ಈ ಬಾಂಬ್​ಅನ್ನು ಇ-ಬೇನಲ್ಲಿ ಮಾರಾಟಕ್ಕಿಟ್ಟಿದ್ದ. ಇದನ್ನು ಗಮನಿಸಿದ ಅಲ್ಲಿಯ ಸೇನೆಗೆ ಸಂಬಂಧಿತ ಅಧಿಕಾರಿ ರಾಲ್ಫ್​ ಶೆರ್ವಿನ್ ಎಚ್ಚರಿಕೆ ನೀಡಿದ್ದರೂ ಈತ ಅದರ ಮಾರಾಟದಿಂದ ಹಿಂದಕ್ಕೆ ಸರಿದಿರಲಿಲ್ಲ.

    ಶೆರ್ವಿನ್ ಎಂಬಾತ ಇದರ ಖರೀದಿಗೆ ಮುಂದಾಗಿದ್ದು, ಜೀವಂತ ಬಾಂಬ್​ ಎಂಬುದು ಖಚಿತವಾಗುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಪೊಲೀಸರು ಇ-ಬೇ ಮೂಲಕ ಆತನ ಮನೆಯನ್ನು ಪತ್ತೆ ಹಚ್ಚಿ, ಪರಿಣತರೊಂದಿಗೆ ತೆರಳಿ, ಅಲ್ಲಿದ್ದ ಮನೆಯವರನ್ನು ತೆರವುಗೊಳಿಸಿ, ಬಾಂಬ್​ ನಿಷ್ಕ್ರಿಯಗೊಳಿಸಿದ್ದಲ್ಲದೆ ಮಾರಾಟಕ್ಕಿಟ್ಟವನನ್ನು ಬಂಧಿಸಿದ್ದಾರೆ.

    ಕಾಮಗಾರಿ ಹಂತದಲ್ಲಿದ್ದ ಕಟ್ಟಡ ಕುಸಿತ, ಒಬ್ಬ ಸ್ಥಳದಲ್ಲೇ ಸಾವು; ಇನ್ನೊಬ್ಬ ಆಸ್ಪತ್ರೆಗೆ ಕೊಂಡೊಯ್ಯುವಾಗ ನಿಧನ..

    ಕರೊನಾ ಲಸಿಕೆ ಹಾಕಿಸಿಕೊಳ್ಳುವ ಕುರಿತು ನಿಮ್ಮಲ್ಲಿ ಈ ಗೊಂದಲಗಳಿವೆಯೇ? ಹಾಗಿದ್ದರೆ ಇಲ್ಲಿವೆ ನೋಡಿ ಸ್ಪಷ್ಟೀಕರಣ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts