More

    ಲಾಡಿಯಂತಿದೆಯಲ್ಲ ಎಂದು ಎಳೆದವನ ಕೈಗೆ ಬಂತು 17 ಅಡಿ ಉದ್ದದ ಹುಳು!

    ಬ್ಯಾಂಕಾಕ್​: ತೀವ್ರತರವಾದ ಹೊಟ್ಟೆನೋವು ತಾಳದೆ ವ್ಯಕ್ತಿಯೊಬ್ಬ ಮಲವಿಸರ್ಜನೆಗೆ ತೆರಳಿದ. ಇದೇನೋ ಲಾಡಿಯಂತಿದೆಯಲ್ಲ ಎಂದು ಎಳೆದವನ ಕೈಗೆ 17 ಅಡಿ ಉದ್ದದ ಹಳದಿ ಬಣ್ಣದ ಲಾಡಿ ಹುಳ ಕೈಗೆ ಬಂದಿತ್ತು! ಇಂತಹ ವಿಲಕ್ಷಣ ಆರೋಗ್ಯ ಸಮಸ್ಯೆ ಎದುರಿಸಿದಾತ ಥಾಯ್ಲೆಂಡ್​ನ ನಕೋನ್ ಸಾವನ್ ಎಂಬಲ್ಲಿಯ ದೌಂಗ್ ಚಾನ್​ ದಚ್ಯೊಡ್ಡೆ (43).

    ಮಲವಿಸರ್ಜನೆ ಆದರೂ ಇದೇನೋ ಲಾಡಿಯಂತೆ ನೇತಾಡುತ್ತಿದೆಯಲ್ಲ ಎಂದು ಆತ ಎಳೆಯುತ್ತ ಹೋದಾಗ ಕೈಗೆ 17 ಅಡಿ ಉದ್ದದ ಹಳದಿ ಬಣ್ಣದ ಲಾಡಿಹುಳು ಬಂದಿತ್ತು. ಬೆಚ್ಚಿಬಿದ್ದ ದಚ್ಯೊಡ್ಡೆ, ಅದನ್ನೆತ್ತಿಕೊಂಡು ಡಾಕ್ಟರ್ ಬಳಿಗೋಡಿದ್ದ. ಅವರು ಅದನ್ನು ಗುರುತಿಸಿ ಹಳದಿ ಲಾಡಿಹುಳು ಎಂಬುದನ್ನು ಆತನಿಗೆ ಮನವರಿಕೆ ಮಾಡಿಕೊಟ್ಟರು. ಇದಾದ ಬಳಿಕ ದಚ್ಯೊಡ್ಡೆ, ತನಗೆ ಈಗ ಹೊಟ್ಟೆನೋವು ಇಲ್ಲ. ಈಗ ಎಷ್ಟೋ ಆರೋಗ್ಯವಾಗಿರುವಂತೆ ಭಾಸವಾಗುತ್ತಿದೆ ಎಂದು ಹೇಳಿಕೊಂಡಿದ್ದಾನೆ.

    ಇದನ್ನೂ ಓದಿ: ತನಿಖಾ ಸಂಸ್ಥೆಗಳ ಅವಸ್ಥೆ ! ; ವಿಶೇಷ ಟೀಂಗಳಿಗೆ ನೂರೆಂಟು ಕಷ್ಟ

    ಕಳೆದ ವರ್ಷವೂ ಥಾಯ್ಲೆಂಡ್​ನಲ್ಲಿ ಇಂಥ ಘಟನೆ ನಡೆದಿತ್ತು. ಈಶಾನ್ಯ ಥಾಯ್ಲೆಂಡ್​ನ ಉಡೋನ್ ಥನಿಯ ಕ್ರಿಟ್ಸದ ರಾಟ್​ಪ್ರಚೂಮ್​ (44) ಎಂಬಾತ ಭಯಾನಕ 32 ಅಡಿ ಉದ್ದದ ಲಾಡಿಹುಳವನ್ನು ಹೊರತೆಗೆದಿದ್ದ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್)

    ಪಾಣಿಪತ್ ತ್ರಿಬ್ಬಲ್ ಮರ್ಡರ್ ಕೇಸ್ ಇತ್ಯರ್ಥ- ಕೊಲೆಗಾರ ನೂರ್​ಹಸನ್ ಬಹಿರಂಗ ಪಡಿಸಿದ್ದ ಶಾಕಿಂಗ್ ವಿಚಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts