More

    ಹೆಂಡತಿ, ಮಗುವನ್ನು ನೋಡುವುದಕ್ಕಾಗಿ ಬಸ್ಸನ್ನೇ ಕದ್ದ! 4 ಜಿಲ್ಲೆ ದಾಟಿದ ನಂತರ ಸಿಕ್ಕಿಹಾಕಿಕೊಂಡಿದ್ದೇ ರೋಚಕ

    ತಿರುವನಂತಪುರಂ: ಕರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಂತೆ ಕೇರಳದಲ್ಲೂ ಲಾಕ್​ಡೌನ್​ ಜಾರಿಯಲ್ಲಿದೆ. ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಈ ಸಮಯದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಮಗುವನ್ನು ನೋಡಲೆಂದು ಖಾಸಗಿ ಬಸ್ಸನ್ನೇ ಕದ್ದಿರುವ ಘಟನೆ ಕೇರಳದಲ್ಲಿ ನಡೆದಿದೆ.

    30 ವರ್ಷದ ದಿನೂಪ್​ ಕಳ್ಳತನ ಮಾಡಿರುವ ವ್ಯಕ್ತಿ. ಆತನ ಹೆಂಡತಿ ಮತ್ತು ಮಗು ಪಥನಮತ್ತಟ್ಟಾ ಜಿಲ್ಲೆಯ ತಿರುವಲ್ಲಾದಲ್ಲಿ ವಾಸವಿದ್ದಾರೆ. ಆದರೆ ಆತನು ಕೆಲಸ ಮಾಡುತ್ತಿದ್ದಿದ್ದು 270 ಕಿಮೀ ದೂರದ ಕೋಜಿಕೋಡ್​ನಲ್ಲಿ. ಲಾಕ್​ಡೌನ್​ನಲ್ಲಿ ಕೋಜಿಕೋಡ್​ನಲ್ಲೇ ಲಾಕ್​ ಆಗಿದ್ದ ದಿನೂಪ್​ ತಿರುವಲ್ಲಾಕ್ಕೆ ತೆರಳಲು ಉಪಾಯವೊಂದನ್ನು ಮಾಡಿದ್ದಾನೆ. ಅಲ್ಲೇ ನಿಲ್ಲಿಸಿದ್ದ ಬಸ್ ಒಂದನ್ನು ಗಮನಿಸಿದ್ದಾನೆ. ಅದರ ಸುತ್ತ ಮುತ್ತ ಯಾರೂ ಇಲ್ಲದನ್ನು ಗಮನಿಸಿ, ಬಸ್ಸು ಹತ್ತಿ, ಅದನ್ನು ಕಷ್ಟ ಪಟ್ಟು ಸ್ಟಾರ್ಟ್​ ಮಾಡಿದ್ದಾನೆ. ಗಾಡಿಯಲ್ಲಿ ಪೂರ್ತಿ ಇಂಧನ ಇದ್ದಿದ್ದರಿಂದ ಅದನ್ನು ಊರಿಗೆ ತೆಗೆದುಕೊಂಡು ಹೋಗಬಹುದು ಎನ್ನುವ ನಂಬಿಕೆಯ ಮೇಲೆ ಗಾಡಿ ಚಲಿಸಿದ್ದಾನೆ.

    ಶನಿವಾರ ರಾತ್ರಿ ಕೋಜಿಕೋಡ್​ನಿಂದ ಹೊರಟು, ಮಲಪ್ಪುರಂ, ತ್ರಿಶೂರ್, ಎರ್ನಾಕುಲಂ ಮೂಲಕ ಓಡಿ ಕೊಟ್ಟಾಯಂ ಜಿಲ್ಲೆಯನ್ನು ಪ್ರವೇಶಿಸಿದ್ದಾನೆ. ಆದರೆ ಅಲ್ಲಿನ ಪ್ರಸಿದ್ಧ ಪ್ರವಾಸಿ ತಾಣವಾದ ಕುಮಾರಕೋಮ್​ನಲ್ಲಿ ಪೊಲೀಸರು ಆತನನ್ನು ತಡೆದಿದ್ದಾರೆ. ಈ ಹಿಂದೆ ನಾಲ್ಕು ಜಿಲ್ಲೆಗಳಲ್ಲಿ ತಾನು ಕಾರ್ಮಿಕರನ್ನು ಪಥನಮತ್ತಟ್ಟಾ ಬೇರೆಡೆ ಸಾಗಿಸಲು ಹೋಗುತ್ತಿರುವುದಾಗಿ, ತನಗೆ ಸರ್ಕಾರವೇ ಈ ಕೆಲಸ ಕೊಟ್ಟಿರುವುದಾಗಿ ಸುಳ್ಳು ಹೇಳಿ ತಪ್ಪಿಸಕೊಂಡಿದ್ದ ದಿನೂಪ್​ ಇಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ.

    ಡ್ರೈವಿಂಗ್​ ಲೈಸೆನ್ಸ್​ ಇಲ್ಲದ ಹಿನ್ನೆಲೆಯಲ್ಲಿ ಆತನ ಮೇಲೆ ಅನುಮಾನ ಬಂದ ಪೊಲೀಸರು ಆರ್​ಟಿಒ ಆ್ಯಪ್​ನಲ್ಲಿ ಗಾಡಿಯ ನಂಬರ್​ ಹೊಡೆದು ಚೆಕ್ ಮಾಡಿದ್ದಾರೆ. ಅದರಲ್ಲಿದ್ದ ಗಾಡಿ ಮಾಲೀಕನ ನಂಬರಿಗೆ ಕರೆ ಮಾಡಿ ಗಾಡಿಯ ಬಗ್ಗೆ ವಿಚಾರಿಸಿದಾಗ ದಿನೂಪ್​ ಸಿಕ್ಕಿಬಿದ್ದಿದ್ದಾನೆ. (ಏಜೆನ್ಸೀಸ್)

    ಮದುವೆಯ ಮಾರನೇ ದಿನವೇ ವರನಿಗೆ ಕರೊನಾ ದೃಢ! ಕುದುರೆ ಮೆರವಣಿಗೆ ಬಂದವನನ್ನು ಹೊತ್ತೊಯ್ದ ಯಮರಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts