More

    ಪಾರಿವಾಳ ಬಳಸಿ ಡುಪ್ಲೆಕ್ಸ್ ಮನೆ ದೋಚುತ್ತಿದ್ದ ಚಾಲಾಕಿ ಕಳ್ಳ ಅಂದರ್

    ಬೆಂಗಳೂರು: ಮನೆ ಮೇಲಕ್ಕೆ ಪಾರಿವಾಳ ಹಾರಿಬಿಟ್ಟು ಕಳ್ಳತನ ಮಾಡುತ್ತಿದ್ದ ಚಾಲಾಕಿ ಕಳ್ಳನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬ್ಯಾಡ್​ ನಾಗು ಅಲಿಯಾಸ್​​ ನಾಗೇಂದ್ರ ಜಿ. ಎಂಬ ಆರೋಪಿಯು ಎಸಗಿದ್ದ 3 ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ.

    ಇಟ್ಟಮಡು ನಿವಾಸಿ ಸೂರ್ಯನಾರಾಯಣ ರೆಡ್ಡಿ ಎಂಬುವರ ದೂರಿನ ಮೇರೆಗೆ ಚನ್ನಮ್ಮನಕೆರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 4 ಲಕ್ಷ 40 ಸಾವಿರ ರೂಪಾಯಿ ಬೆಲೆ ಬಾಳುವ 100.6 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಈ ಖತರ್​ನಾಕ್​ ಕಳ್ಳ, ಮೊದಲು ಐಷಾರಾಮಿ ಡುಪ್ಲೆಕ್ಸ್ ಮನೆಗಳನ್ನು ಲಿಸ್ಟ್ ಮಾಡಿಕೊಳ್ಳುತ್ತಿದ್ದ. ನಂತರ ಮನೆಯ ಮೇಲೆ ಪಾರಿವಾಳ ಹಾರಿಸಿಬಿಟ್ಟು, ನಿಮ್ಮ ಮನೆ ಮೇಲೆ ಪಾರಿವಾಳ ಕೂತಿದೆ ಅಂತ ಮನೆಯೊಳಗೆ ಎಂಟ್ರಿ ಕೊಡ್ತಿದ್ದ. ಡುಪ್ಲೆಕ್ಸ್ ಮನೆಯೊಳಗಿಂದ ಬಾಲ್ಕನಿ ಟೆರೇಸಿಗೆ ಬರೋ ವೇಳೆಗೆ ಮನೆಯನ್ನೆಲ್ಲ ಕಣ್ಣಲ್ಲೇ ಸ್ಕ್ಯಾನ್ ಮಾಡ್ತಿದ್ದ. ನಂತರ ಯಾರೂ ಇಲ್ಲದ ವೇಳೆ ಅಥವಾ ರಾತ್ರಿ ವೇಳೆ ಮನೆಗೆ ಎಂಟ್ರಿ ಕೊಟ್ಟು ತನ್ನ ಕೈ ಚಳಕ ತೋರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)

    ಮತ್ತೆ ಏರಿತು ಪೆಟ್ರೋಲ್​​ ಬೆಲೆ: ಪ್ರಮುಖ ನಗರಗಳ ಇಂದಿನ ಬೆಲೆ ಹೀಗಿದೆ

    ಯಾವುದೇ ಮಕ್ಕಳಿಗೆ ಶಾಲೆಯಲ್ಲಿ ಸೋಂಕು ತಗುಲಿಲ್ಲ: ಶಿಕ್ಷಣ ಸಚಿವ ನಾಗೇಶ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts