More

    ಮಹಾರಾಷ್ಟ್ರ: ಅಪ್ರಾಪ್ತ ವಯಸ್ಕಳಿಗೆ ಅರೆಬೆತ್ತಲೆ ಫೋಟೋ ಕಳಿಸಿದ ಯುವಕ ಅರೆಸ್ಟ್​​; ಬಾಲಕಿ ನಿರಾಕರಿಸಿದ್ದಳೆಂದು ಆತ್ಮಹತ್ಯೆಗೆ ಯತ್ನ..!

    ಮಹಾರಾಷ್ಟ್ರ: ಮಹಾರಾಷ್ಟ್ರದ ಥಾಣೆ ನಗರದಲ್ಲಿ 13 ವರ್ಷದ ಬಾಲಕಿಗೆ ಕಿರುಕುಳ ನೀಡಿ ಹಿಂಬಾಲಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ವಾಗ್ಲೆ ಎಸ್ಟೇಟ್ ಪ್ರದೇಶದ ನಿವಾಸಿಯಾಗಿರುವ ಬಾಲಕಿ ಕೆಲವು ತಿಂಗಳ ಹಿಂದೆ ತನ್ನ ತಾಯಿಯ ಮೊಬೈಲ್ ಫೋನ್‌ನಲ್ಲಿ ಮೆಸೇಜಿಂಗ್​​ ಅಪ್ಲಿಕೇಶನ್‌ ಖಾತೆಯನ್ನ ತೆರೆದಿದ್ದಳು. ಆರೋಪಿ ಬಾಲಕಿ ತೆರೆದಿದ್ದ ಇನ್ಸ್​​​ಟಾಗ್ರಾಂ ಅಕೌಂಟ್​ಗೆ ಫ್ರೆಂಡ್​​​ ರಿಕ್ಷೆಸ್ಟ್​​​ ಕಳಿಸಿದ್ದಾರೆ.


    ಅತ್ತ ಕಡೆ ಬಾಲಕಿಯೂ ಯುವಕನ ರಿಕ್ಷೆಸ್ಟ್​​ ಅಕ್ಸೆಪ್ಟ್​​ ಮಾಡಿದ್ದಾಳೆ. ನಂತರದಲ್ಲಿ ಇಬ್ಬರ ನಡುವೆಯೂ ಕೆಲ ದಿನಗಳ ಕಾಲ ಚಾಟಿಂಗ್​​ನಡೆದಿದೆ. ವ್ಯಕ್ತಿ ಬಾಲಕಿಗೆ ನಿನ್ನನ್ನು ಪ್ರೀತಿಸುತ್ತಿದ್ದೇನೆ. ನಿನಗೆ 18 ವರ್ಷ ಆದ ತಕ್ಷಣವೇ ನಿನ್ನನ್ನ ಮದುವೆಯಾಗುತ್ತೇನೆ ಎಂದು ಮಾತುಕತೆ ನಡೆಸಿದ್ದ.


    ಕೆಲ ದಿನಗಳ ನಂತರ ಇಬ್ಬರೂ ಒಬ್ಬರನ್ನೊಬ್ಬರು ಭೇಟಿಯಾಗೋಕೆ ಪ್ರಾರಂಭಿಸಿದ್ದರು. ಮದುವೆ ಮಾತುಕತೆಯನ್ನೂ ನಡೆಸಿದ್ದರು. ಆದರೆ ಬಾಲಕಿ ಮದುವೆ ಮತ್ತು ಇನ್ನಿತರ ಮಾತುಕತೆಗೆ ನಿರ್ಲಕ್ಷ ತೋರಿದ್ದು, ಈತ ಆಕೆಗೆ ತನ್ನ ಅರೆಬೆತ್ತಲೆ ಫೋಟೋಗಳನ್ನ ಕಳಿಸಲು ಶುರು ಮಾಡಿದ್ದ. ಆಗಲೂ ಬಾಲಕಿ ಒಪ್ಪದಿದ್ದಾಗ ವ್ಯಕ್ತಿ ತನ್ನ ಕೈಯನ್ನ ಕತ್ತರಿಸಿಕೊಂಡಿದ್ದಾನೆ. ಎಂದು ಥಾಣೆಯ ಶ್ರೀನಗರ ಪೊಲೀಸ್ ಠಾಣೆಯ ಅಧಿಕಾರಿ ಎಫ್‌ಐಆರ್ ಅನ್ನು ಉಲ್ಲೇಖಿಸಿ ತಿಳಿಸಿದ್ದಾರೆ.


    ಭಾನುವಾರದಂದು ಆಕೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ. ಇಂಡಿಯನ್​ ಪಿನಲ್​ ಕೋಡ್​​ ಸೆಕ್ಷನ್​ಗಳಾದ 354ಡಿ ಹಿಂಬಾಲಿಸುವಿಕೆ, 366ಎ , ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಯ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪೋಕ್ಸೊ ಕಾಯ್ದೆಯ ಅಡಿಯಲ್ಲೂ ದೂರು ದಾಖಲಿಸಿಕೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts