More

    ಈತನ ಕೈಯಲ್ಲಿವೆ ಒಂದಲ್ಲಾ ಎರಡಲ್ಲಾ ಬರೋಬ್ಬರಿ ಆರು ಹಾವು; ಹಾವುಗಳು ವಿಷಕಾರಿ ಎಚ್ಚರ ಎಂದ್ರು ನೆಟ್ಟಿಗರು

    ನವದೆಹಲಿ: ಸಾಮಾನ್ಯವಾಗಿ ಹಾವಿನ ಹೆಸರು ಕೇಳಿದರೆ ಭಯದಿಂದ ಓಡುತ್ತೇವೆ. ಹಾವು ತುಂಬಾ ವಿಷಕಾರಿ.. ಕಚ್ಚಿದರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ ಇಲ್ಲೊಬ್ಬ ಯುವಕ ಹಾವುಗಳೊಂದಿಗೆ ಆಟವಾಡಿದ್ದಾನೆ.  ಸರಿಸುಮಾರು 6 ಹಾವುಗಳನ್ನು ಕೈಯಲ್ಲಿ ಹಿಡಿದಿದ್ದಾನೆ. ಈ ವಿಡಿಯೋ ವೈರಲ್​ ಆಗಿದೆ.

    ಉದ್ದೇಶಪೂರ್ವಕವಾಗಿ ಮಾಡಿದ್ದಾರೋ.. ಅಥವಾ ವೈರಲ್ ಆಗಲು ಮಾಡಿದ್ದಾರೋ ಗೊತ್ತಿಲ್ಲ. ಆದರೆ, ಯುವಕನೊಬ್ಬ ಮಾಡಿದ ಸ್ನೇಕ್ ಸ್ಟಂಟ್ ವೈರಲ್ ಆಗುತ್ತಿದೆ. ವ್ಯಕ್ತಿಯೊಬ್ಬ ಸುಮಾರು ಆರು ಹಾವುಗಳನ್ನು ತನ್ನ ಕೈಗಳಿಂದ ಹಿಡಿದಿದ್ದಾನೆ.  ಹಾವುಗಳ ಬಗ್ಗೆ ಕೆಲವರು ಎಚ್ಚರಿಕೆ ನೀಡುತ್ತಿದ್ದರೆ. ಕೆಲ ನೆಟಿಜನ್‌ಗಳು ಹಾವುಗಳನ್ನು ಈ ರೀತಿ ಹಿಂಸಿಸುವುದು ಒಳ್ಳೆಯದಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

    ಈ ಘಟನೆಯ ದಿನಾಂಕ ಮತ್ತು ಸ್ಥಳವನ್ನು ದೃಢೀಕರಿಸಲಾಗಿಲ್ಲ ಆದರೆ ವಿಡಿಯೋವನ್ನು  ಇನ್​ಸ್ಟಾಗ್ರಾಮ್​​ ನ  ‘sarpmitra_royal_yogya’ ಹ್ಯಾಂಡಲ್ ಅಡಿಯಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟ್‌ಗೆ “ರಾಟ್ ಸ್ನೇಕ್” ಎಂದು ಶೀರ್ಷಿಕೆ ನೀಡಲಾಗಿತ್ತು.

    ವೈರಲ್ ಆಗಿರುವ ಈ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಹಾವುಗಳು ವಿಷಕಾರಿ.. ಇಂತಹವುಗಳ ಬಗ್ಗೆ ಎಚ್ಚರದಿಂದಿರಿ ಎಂದು ಸಲಹೆ ನೀಡಿದರು. ಇಂತಹ ಸ್ಟಂಟ್‌ಗಳು ಅಪಾಯಕಾರಿ, ‘ಪ್ರಾಣಿ ಹಿಂಸೆ’ ಮಾಡಿದ ವ್ಯಕ್ತಿಯನ್ನು ಶಿಕ್ಷಿಸಿ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts