More

    VIDEO| ಸ್ಮಗ್ಲರನ್ನು​ ಹಿಡಿದು ಆತನ ಬಳಿ ಇದ್ದ ಕಡಲೆಕಾಯಿ ಬಿಡಿಸಿದ ಸಿಐಎಸ್​ಎಫ್​ ಸಿಬ್ಬಂದಿಗೆ ಕಾದಿತ್ತು ಶಾಕ್​!

    ನವದೆಹಲಿ: ಸ್ಮಗ್ಲಿಂಗ್​ ಮಾಡಲು ಸ್ಮಗ್ಲರ್​ಗಳು ಕಂಡುಕೊಳ್ಳುವಂತಹ ದಾರಿಗಳು ಎಷ್ಟು ಅಚ್ಚರಿಗೊಳಿಸುತ್ತದೆ ಎಂಬುದಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ ನಡೆದ ಪ್ರಕರಣವೊಂದು ಇದಕ್ಕೆ ಉದಾಹರಣೆಯಾಗಿದೆ. ಹಾಗೇ ಕಳ್ಳರು ಚಾಪೆಗೆ ಕೆಳಗೆ ನುಸುಳಿದರೆ ಪೊಲೀಸರು ರಂಗೋಲಿ ಕೆಳಗೇ ನುಸುಳುತ್ತಾರೆ ಎಂಬುದಕ್ಕೂ ಇದು ಸ್ಪಷ್ಟ ನಿದರ್ಶನವಾಗಿದೆ.

    ಸುಮಾರು 45 ಲಕ್ಷ ರೂ. ಮೌಲ್ಯದ ವಿದೇಶಿ ಹಣವನ್ನು ಸ್ಮಗ್ಲಿಂಗ್​ ಮಾಡುತ್ತಿದ್ದ ಪ್ರಯಾಣಿಕನೊಬ್ಬನನ್ನು ಕೇಂದ್ರಿಯ ಕೈಗಾರಿಕ ಭದ್ರತಾ ಪಡೆ(ಸಿಐಎಸ್​ಎಫ್​) ಇಂದು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಆತ ಸ್ಮಗ್ಲಿಂಗ್​ ಮಾಡಲು ಕಂಡುಕೊಂಡು ದಾರಿ ಸಿಐಎಸ್​ಎಫ್ ಸಿಬ್ಬಂದಿಯ ಹುಬ್ಬೇರಿಸಿದೆ.

    ಆರೋಪಿ ಪ್ರಯಾಣಿಕನನ್ನು ಮುರಾದ್​ ಆಲಂ ಎಂದು ಗುರುತಿಸಲಾಗಿದೆ. ಕಡಲೆಕಾಯಿ, ಬಿಸ್ಕೆಟ್​ ಹಾಗೂ ಇತರೆ ಆಹಾರ ಪದಾರ್ಥಗಳ ಜತೆಯಲ್ಲಿ ವಿದೇಶಿ ಹಣ ಸಾಗಿಸುತ್ತಿದ್ದ.

    VIDEO| ಸ್ಮಗ್ಲರನ್ನು​ ಹಿಡಿದು ಆತನ ಬಳಿ ಇದ್ದ ಕಡಲೆಕಾಯಿ ಬಿಡಿಸಿದ ಸಿಐಎಸ್​ಎಫ್​ ಸಿಬ್ಬಂದಿಗೆ ಕಾದಿತ್ತು ಶಾಕ್​!

    ಇದಕ್ಕೆ ಸಂಬಂಧಪಟ್ಟ ವಿಡಿಯೋವನ್ನು ಸಿಐಎಸ್​ಎಫ್​ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ವಿಡಿಯೋದಲ್ಲಿರುವಂತೆ ಕಡಲೆಕಾಯಿಯ ಸಿಪ್ಪೆಯನ್ನು ಬಿಡಿಸಿದರೆ, ಕಡಲೆಬೀಜದ ಬದಲಿಗೆ ಕರೆನ್ಸಿ ನೋಟುಗಳನ್ನು ವೃತ್ತಾಕಾರದಲ್ಲಿ ಸುತ್ತಿ ಇಟ್ಟಿರುವುದನ್ನು ಕಂಡು ಸಿಐಎಸ್​ಎಫ್​ ಸಿಬ್ಬಂದಿ ದಂಗಾಗಿದ್ದಾರೆ.

    ಆಹಾರ ಪದಾರ್ಥಗಳನ್ನು ಬಿಡಿಸಿದಾಗಲೂ ಅದರೊಳಗೆ ಕಪ್ಪು ಹಣವಿರುವುದು ಪತ್ತೆಯಾಗಿದೆ. ದುಬೈಗೆ ಹಾರುತ್ತಿದ್ದ ಆರೋಪಿಯನ್ನು ಸಿಐಎಸ್​ಎಫ್​ ಸಿಬ್ಬಂದಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬಲೆಗೆ ಹಾಕಿಕೊಂಡಿದ್ದಾರೆ. ಆತನನ್ನು ಕಸ್ಟಮ್ಸ್​ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts