More

    ಚಿರತೆ ಸೆರೆಗೆ ಇಟ್ಟಿದ್ದ ಬೋನಿನಲ್ಲಿ ಸಿಲುಕಿದ ವ್ಯಕ್ತಿ! ಹೇಗೆ ಅಂತಾ ಗೊತ್ತಾದ್ರೆ ನಿಮ್ಮ ಹುಬ್ಬೇರೋದು ಖಚಿತ

    ಲಖನೌ: ಚಿರತೆಯನ್ನು ಸೆರೆಹಿಡಿಯಲು ಇಟ್ಟಿದ್ದ ಬೋನಿನಲ್ಲಿ ವ್ಯಕ್ತಿಯೊಬ್ಬ ಸಿಲುಕಿದ ಘಟನೆ ಉತ್ತರ ಪ್ರದೇಶದ ಬುಲಂದ್​ಶಹರ್​ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಹುಬ್ಬೇರಿಸಿದೆ.

    ಕೇರಳ, ಕರ್ನಾಟಕ, ಜಾರ್ಖಂಡ್​ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮಾನವ-ಪ್ರಾಣಿ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವು ಕಳವಳಕಾರಿ ಸಂಗತಿಯಾಗಿದೆ. ಬುಲಂದ್​ಶಹರ್​ ಜಿಲ್ಲೆಯ ಗ್ರಾಮದೊಂದರ ಸಮೀಪದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಚಿರತೆ ಸೆರೆಹಿಡಿಯಲು ಸ್ಥಳೀಯ ಅರಣ್ಯಾಧಿಕಾರಿಗಳು ಬೋನ್​ ಇಟ್ಟು, ಅದರೊಳಗೆ ಒಂದು ಕೋಳಿಯನ್ನು ಕಟ್ಟಿದ್ದರು.

    ಇದನ್ನೂ ಓದಿ: ಸಿಡಬ್ಲ್ಯುಸಿ ಸದಸ್ಯತ್ವ: ಖರ್ಗೆಗೆ ಪೂರ್ಣಾಧಿಕಾರ; ಚುನಾವಣೆ ಇಲ್ಲ, ನಾಮ ನಿರ್ದೇಶನಕ್ಕೆ ಅವಕಾಶ

    ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಚಿರತೆ ಇರಬೇಕಾದ ಸ್ಥಳದಲ್ಲಿ ವ್ಯಕ್ತಿಯೊಬ್ಬ ಇರುವುದನ್ನು ಕಂಡ ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ಬೋನ್​ನಲ್ಲಿದ್ದ ಕೋಳಿಯನ್ನು ಹಿಡಿಯಲು ಹೋಗಿ ತಾನೇ ಬೋನಿನ ಒಳಗೆ ಸೆರೆಯಾಗಿದ್ದಾನೆ ಎಂದು ಹೇಳಲಾಗಿದೆ.

    ಬೋನ್​ನಿಂದ ಹೊರಬರಲು ಎಷ್ಟೇ ಪ್ರಯತ್ನ ಮಾಡಿದರೂ ಆತನಿಂದ ಸಾಧ್ಯವಾಗಲಿಲ್ಲ. ಕೊನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಆ ವ್ಯಕ್ತಿಯನ್ನು ಬಿಡುಗಡೆ ಮಾಡಿದರು. ಸದ್ಯ ಬೋನಿನಲ್ಲಿರುವ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗಿದೆ. (ಏಜೆನ್ಸೀಸ್​)

    ಅದಾನಿಗೆ 12 ಲಕ್ಷ ಕೋಟಿ ರೂ. ನಷ್ಟ: ಹಿಂಡನ್​ಬರ್ಗ್ ವರದಿ ಪರಿಣಾಮ, ಕಂಪನಿಗಳ ಷೇರುಗಳಲ್ಲಿ ಕುಸಿತ

    ಖಾಸಗಿ ಫೋಟೋ ಸೋರಿಕೆ: ನಟಿ ಆಲಿಯಾ ಭಟ್ ಆಕ್ರೋಶ, ದೂರು ದಾಖಲಿಸಿ ಎಂದ ಮುಂಬೈ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts