More

    VIDEO: ಮದ್ಯ ಮಾರಾಟ ಮಾಡುತ್ತಾ ಬಂದ ಆಟೋ ರಿಕ್ಷಾ; ಈ ಆಲ್ಕೋಹಾಲ್ ಕುಡಿದರೆ ಹೆಂಡತಿಯೊಂದಿಗೆ ಭಯವಿಲ್ಲದೆ ಮಾತನಾಡಬಹುದಂತೆ!

    ಉತ್ತರ ಪ್ರದೇಶ: ಮನೆಮನೆಗೆ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡಿಕೊಂಡು ಬರುವುದನ್ನು ನೋಡಿದ್ದೇವೆ. ಇಂದಿಗೂ ಕೂಡ ಸೊಪ್ಪು ತರಕಾರಿ, ಹಣ್ಣು ಹಂಪಲು, ದಿನ ಬಳಕೆಯ ಸಾಮಾಗ್ರಿಗಳನ್ನು ಮಾರಾಟ ಮಾಡಿಕೊಂಡು ಸಣ್ಣ ವ್ಯಾಪಾರಸ್ಥರು ಮನೆ ಮುಂದೆ ಬರುತ್ತಾರೆ. ಆದರೆ ಇದೀಗ ಮುಜಾಫರ್​ಪುರದಲ್ಲಿ ಇ-ರಿಕ್ಷಾವೊಂದು ಗ್ರಾಮ ಪ್ರವೇಶಿಸಿದೆ. ಈ ರಿಕ್ಷಾ ಆಗಮಿಸಿರುವುದು ಮದ್ಯ ಮಾರಾಟ ಮಾಡಲು.

    ಅಚ್ಚರಿಯಾದರೂ ಇದು ಸತ್ಯ! ಧ್ವನಿ ವರ್ಧಕ ಬಳಸಿ, ಮದ್ಯಪಾನ ಮಾರಾಟ ಮಾಡುತ್ತಾ ರಿಕ್ಷಾವೊಂದು ಗ್ರಾಮಕ್ಕೆ ಬಂದಿದೆ. ಈ ವೇಳೆ ಊರಿನ ವ್ಯಕ್ತಿಯೊಬ್ಬ ಗೊಂದಲಗೊಂಡು ಏನಿದು ಎಂದು ಕೇಳಿದಾಗ, ಮದ್ಯಪಾನ ಎಂದಿದ್ದಾನೆ ಆಟೋ ಚಾಲಕ.

    https://twitter.com/Cong_Ki_Baat/status/1597852472793784320

    ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ ಈ ಆಟೋದಲ್ಲಿ ಬ್ಯಾನರ್ ಅಳವಡಿಸಲಾಗಿದೆ. ಅದರಲ್ಲಿ ಆಲ್ಕೋಹಾಲ್ ಸೇವಿಸಿದ ನಂತರ ಯಾವುದೇ ವಾಹನವನ್ನಾದರೂ ಸುಲಭವಾಗಿ ಓಡಿಸಬಹುದು, ಇಂಗ್ಲೀಷ್​ನಲ್ಲಿ ನಿರರ್ಗಳವಾಗಿ ಮಾತನಾಡಬಹುದು ಮತ್ತು ಹೆಂಡತಿಯೊಂದಿಗೆ ಯಾವುದೇ ಭಯವಿಲ್ಲದೆ ಮಾತನಾಡುವ ಧೈರ್ಯವನ್ನು ಹೊಂದಬಹುದು ಎಂದು ಬರೆದುಕೊಂಡಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts