More

    ಮನುಷ್ಯರಂತೆಯೇ ನಡೆಯಿತು ನಾಯಿಗೂ ಪುಣ್ಯಸ್ಮರಣೆ, ಪ್ರತಿಮೆಯ ಸ್ಥಾಪನೆ..

    ಹೈದರಾಬಾದ್​: ‘ಎವೆರಿ ಡಾಗ್ ಹ್ಯಾಸ್​ ಇಟ್ಸ್​ ಡೇ’ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ಏಕೆಂದರೆ ಇಲ್ಲೊಂದು ನಾಯಿಗೆ ಮನುಷ್ಯರಂತೆಯೇ ಪುಣ್ಯಸ್ಮರಣೆ ನಡೆದಿದೆ, ಪ್ರತಿಮೆ ಕೂಡ ಸ್ಥಾಪನೆಯಾಗಿದೆ. ನಾಯಿ ಸತ್ತ ಐದು ವರ್ಷಗಳ ಬಳಿಕವೂ ಇವೆಲ್ಲ ನಡೆದಿರುವುದು ಬಹಳಷ್ಟು ಜನರ ಗಮನ ಸೆಳೆದಿದೆ.

    ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ಶ್ವಾನವೊಂದರ ಐದನೇ ವರ್ಷದ ಪುಣ್ಯತಿಥಿ ಸಕಲ ವಿಧಿ-ವಿಧಾನಗಳೊಂದಿಗೆ ನಡೆದಿದೆ. ಜ್ಞಾನಪ್ರಕಾಶ್ ಎಂಬವರು ತಮ್ಮ ಅತ್ಯಂತ ಪ್ರೀತಿಯ ಸಾಕುನಾಯಿಯ ಸಲುವಾಗಿ ಇಷ್ಟೆಲ್ಲ ಮಾಡಿದ್ದಾರೆ.

    ನಾಯಿಯ ನೆನಪಿಗಾಗಿ ಪ್ರತಿವರ್ಷವೂ ಅದರ ಪುಣ್ಯತಿಥಿ ಆಚರಿಸುತ್ತಿರುವ ಇವರು ಈ ಸಲ ಐದನೇ ವರ್ಷ ಎಂಬ ಕಾರಣಕ್ಕೆ ಪ್ರತಿಮೆಯನ್ನೂ ಮಾಡಿಸಿ ಸ್ಥಾಪಿಸಿದ್ದಾರೆ. ಸಾಮಾನ್ಯ ನಾಯಿಯಷ್ಟೇ ಗಾತ್ರದಲ್ಲಿ ಇದನ್ನು ಮಾಡಿಸಲಾಗಿದೆ. ಮಾತ್ರವಲ್ಲ, ಸಮಾರಂಭ ರೀತಿಯಲ್ಲೇ ಇದನ್ನು ಮಾಡಿರುವ ಇವರು ಗ್ರಾಮಸ್ಥರನ್ನೆಲ್ಲ ಆಹ್ವಾನಿಸಿ ಊಟವನ್ನೂ ಹಾಕಿಸಿದ್ದಾರೆ. (ಏಜೆನ್ಸೀಸ್)

    ಮಾಮೂಲಿ ಕೊಡದ್ದಕ್ಕೆ ಸುಳ್ಳು ಕೇಸ್ ದಾಖಲಿಸಿದ್ದ ಲೇಡಿ ಇನ್​ಸ್ಪೆಕ್ಟರ್, ಸಬ್​ ಇನ್​ಸ್ಪೆಕ್ಟರ್ ಸೇರಿ ಮೂವರ ಸಸ್ಪೆಂಡ್

    ಬ್ಲೂ ಫಿಲ್ಮ್​ ಕೇಸ್​ನಲ್ಲಿ ಪತಿ ಅರೆಸ್ಟ್​; ನಟಿ ಶಿಲ್ಪಾ ಶೆಟ್ಟಿ ‘ಚಾಪ್ಟರ್​’ ಕ್ಲೋಸ್​?

    ಟ್ವಿಟರ್​ನಲ್ಲಿ ಮುಟ್ಟಿದ್ರೇನೆ ‘ಲವ್’: ಇನ್ಮುಂದೆ ಹಾಗಾಗದಂತೆ ನಡೆಯುತ್ತಿದೆ ಹೊಸ ಪ್ರಯೋಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts