More

    ಪಶ್ಚಿಮ ಬಂಗಾಳದಲ್ಲಿ ಅಮಿತ್ ಷಾ ರ‍್ಯಾಲಿಗೆ ಸೇರಲು ಯತ್ನಿಸಿದ್ದ ಗನ್​ ಹಿಡಿದ ವ್ಯಕ್ತಿ!: ಯಾರಾತ?

    ಕೋಲ್ಕತ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತದಲ್ಲಿ ಆಯೋಜಿಸಲಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರ ಸಮಾವೇಶಕ್ಕೆ ವ್ಯಕ್ತಿಯೊಬ್ಬ ಪರವಾನಗಿ ಹೊಂದಿದ್ದ ಗನ್​ ತೆಗೆದುಕೊಂಡು ಒಳಪ್ರವೇಶಿಸಲು ಯತ್ನಿಸಿದ್ದ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ವ್ಯಕ್ತಿಯನ್ನು ಸ್ವಯಂಸೇವಕರು ಹಾಗೂ ಪೊಲೀಸರು ತಡೆದು ವಾಪಸ್​ ಕಳುಹಿಸಿದರು ಎಂದು ತಿಳಿದುಬಂದಿದೆ. ವ್ಯಕ್ತಿಯನ್ನು ದುರ್ಗಾಪುರದ ಮಾಜಿ ಸಿಎಪಿಎಫ್​ ಸಿಬ್ಬಂದಿ ಜಡು ನ್ಯಾಂಡಿ ಎಂದು ಗುರುತಿಸಲಾಗಿದ್ದು, ಈ ವೇಳೆ ತಾನೂಬ್ಬ ಬಿಜೆಪಿ ಬೆಂಬಲಿಗ ಎಂದು ಹೇಳಿಕೊಂಡಿದ್ದಾನೆ.

    ಸಮಾವೇಶ ಸ್ಥಳದಲ್ಲಿನ ವಿಐಪಿ ಪ್ರವೇಶ ದ್ವಾರದ ಮೂಲಕ ಪ್ರವೇಶಿಸಲು ಯತ್ನಿಸಿದ್ದಾನೆ. ರಕ್ಷಣಾತ್ಮಕ ಕಾರಣಗಳಿಂದ ಗನ್​ ತಂದಿದ್ದ ಎಂದು ತಿಳಿದುಬಂದಿದೆ.

    ಅಮಿತ್​ ಷಾ ಅವರು ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ದು, ಇಂದು ಕೋಲ್ಕತಗೆ ಬಂದಿಳಿದಿದ್ದಾರೆ. ಕೋಲ್ಕತ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಬಿಜೆಪಿ ನಾಯಕರು ಬರಮಾಡಿಕೊಂಡರು. ಮೊದಲು ರಾಜರ್ಹತ್​ನಲ್ಲಿನ ರಾಷ್ಟ್ರೀಯ ಭದ್ರತಾ ಸಿಬ್ಬಂದಿ(ಎನ್​ಎಸ್​ಜಿ)ಯ 29 ವಿಶೇಷ ಸಂಯೋಜಿತ ಗುಂಪು ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಮಿತ್​ ಷಾ ಭಾಗವಹಿಸಿದರು. ಬಳಿಕ ಸಿಎಎ ಪರ ನಡೆದ ಸಮಾವೇಶದಲ್ಲಿ ಪಾಲ್ಗೊಂಡರು. ಇದಕ್ಕೂ ಮುನ್ನ ಸಿಎಎ ವಿರೋಧಿ ಪ್ರತಿಭಟಕಾರರು ಅಮಿತ್​ ಷಾ ವಿರುದ್ಧ ಗೋ ಬ್ಯಾಕ್​ ಘೋಷಣೆ ಕೂಗಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts