More

    ರೈಲಿನ ಬಾಗಿಲಿಗೆ ಶಿರ ಬಾಗಿ ನಮಸ್ಕರಿಸಿ ಹತ್ತಿದ ಪ್ರಯಾಣಿಕ; ಯಾಕೆ?

    ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಒಮ್ಮೆ ಸಂಸತ್ತಿಗೆ ಪ್ರವೇಶಿಸುವಾಗ ಮೆಟ್ಟಿಲಿಗೆ ಶಿರಬಾಗಿ ಒಳಹೋಗಿದ್ದು ರಾಷ್ಟ್ರದ ಗಮನವನ್ನೇ ಸೆಳೆದಿತ್ತು. ಅದನ್ನು ನೆನಪಿಸುವಂಥದ್ದೇ ಒಂದು ಘಟನೆ ಮುಂಬೈನ ರೈಲ್ವೇ ನಿಲ್ದಾಣವೊಂದರಲ್ಲಿ ನಡೆದಿದೆ. ಪ್ರಯಾಣಿಕನೊಬ್ಬ ಇಲ್ಲಿನ ಲೋಕಲ್ ಟ್ರೇನ್​ ಒಂದರ ಬಾಗಿಲಿಗೆ ಶಿರ ಬಾಗಿ ನಮಿಸಿಯೇ ಪ್ರವೇಶಿಸಿದ್ದಾನೆ.

    ಫೆಬ್ರವರಿ 1ರಂದು ಇಂಥದ್ದೊಂದು ದೃಶ್ಯ ಇಲ್ಲಿ ಕಾಣಿಸಿದ್ದು, ಹೀಗೆ ನಮಸ್ಕರಿಸಿ ಒಳಹೋದ ವ್ಯಕ್ತಿ ಆ ದಿನ ಸೆಂಟರ್ ಆಫ್ ಅಟ್ರ್ಯಾಕ್ಷನ್​ ಆಗಿದ್ದಾನೆ. ಆ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಬಹಳಷ್ಟು ಮಂದಿ ಆ ವ್ಯಕ್ತಿಯ ಕುರಿತು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಮುಂಬೈನಲ್ಲಿ ಲೋಕಲ್​ ಟ್ರೇನ್​ನ ಮಹತ್ವವನ್ನೂ ಉಲ್ಲೇಖಿಸಿದ್ದಾರೆ.

    ಕೋವಿಡ್​ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ರೈಲು ಸಂಚಾರ ಕೊನೆಗೂ ಆರಂಭವಾದ ಕಾರಣ ಕೃತಜ್ಞತಾಪೂರ್ವಕವಾಗಿ ಈ ವ್ಯಕ್ತಿ ಹೀಗೆ ನಮಿಸಿದ್ದಾನೆ. ಕರೊನಾ ಸೋಂಕು ವಿಕೋಪಕ್ಕೆ ಹೋಗಿದ್ದ ಕಾರಣ ಕಳೆದ ಮಾರ್ಚ್​ 22ರಂದು ಇಲ್ಲಿನ ಲೋಕಲ್ ಟ್ರೇನ್​ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈಗ 11 ತಿಂಗಳ ಬಳಿಕ ಕೊನೆಗೂ ರೈಲು ಸಂಚಾರ ಪುನಃ ಆರಂಭಗೊಂಡಿದ್ದಕ್ಕೆ ಈ ವ್ಯಕ್ತಿ ಹೀಗೆ ಶಿರಬಾಗಿದ್ದಾನೆ. ಉದ್ಯಮಿ ಆನಂದ್ ಮಹೀಂದ್ರ ಸೇರಿ ಹಲವರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದ ಮುಂಬೈನಲ್ಲಿ ಲೋಕಲ್ ಟ್ರೇನ್​ಗಳಿಗೂ ಸಾರ್ವಜನಿಕರಿಗೂ ಇರುವ ಅನುಬಂಧದ ಅನಾವರಣವೂ ಆಗಿದೆ ಎಂದು ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಯುವರಾಜ್ ದುಡ್ಡು ವಾಪಸ್ ಕೊಟ್ಟ ರಾಧಿಕಾ; ಪತ್ನಿ ಹೆಸರಲ್ಲೂ ಅಪಾರ ಆಸ್ತಿ ಮಾಡಿರುವ ಸ್ವಾಮಿ!

    ಈ ಹಿಂದೆ 1974ರಲ್ಲಿ ಟ್ರೇಡ್​ ಯೂನಿಯನ್​ನಿಂದ ಮುಷ್ಕರವಾಗಿದ್ದಾಗ 20 ದಿನಗಳ ಕಾಲ ರೈಲು ಸಂಚಾರ ರದ್ದಾಗಿದ್ದು ಬಿಟ್ಟರೆ, ನಂತರ ಈಗ ಕರೊನಾ ಅವಧಿಯಲ್ಲೇ ಮುಂಬೈನಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದ್ದು ಎನ್ನಲಾಗಿದೆ. ಸೋಮವಾರ ರೈಲು ಸಂಚಾರ ಪುನಃ ಆರಂಭವಾದ ಮೊದಲ ದಿನವೇ 26 ಲಕ್ಷ ಮಂದಿ ಪ್ರಯಾಣಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. (ಏಜೆನ್ಸೀಸ್​)

    ಮಕ್ಕಳಾಗಲಿ ಎಂದು ವಿಶೇಷ ಪೂಜೆ ಮಾಡಲಿಕ್ಕೆ ದೇವಸ್ಥಾನಗಳ ಮೂರ್ತಿಗಳನ್ನು ಕದ್ದ ದಂಪತಿ!; ಗಂಡ ಸಿಕ್ಕಿಬಿದ್ದರೂ ಹೆಂಡತಿ ಸಿಕ್ಕಿಲ್ಲ..

    ಈ ವಾತಾವರಣದಲ್ಲಿ ಕೆಲಸ ಮಾಡಿದ್ರೆ ಸ್ತನಕ್ಯಾನ್ಸರ್ ಸಾಧ್ಯತೆ ಕಡಿಮೆ ಅಂತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts