More

    ಸಿಬಿಎಸ್​​ಇ ಹೊಸ ಪಠ್ಯಕ್ರಮ: ಪ್ರಮುಖ ವಿಷಯಗಳನ್ನು ಕೈಬಿಟ್ಟಿರುವುದಕ್ಕೆ ಮಮತಾ ಬ್ಯಾನರ್ಜಿ ಆಕ್ಷೇಪ

    ಕೋಲ್ಕತ: ಕೋವಿಡ್ -19 ಬಿಕ್ಕಟ್ಟಿನ ಈ ಅವಧಿಯಲ್ಲಿ ಪಠ್ಯಕ್ರಮವನ್ನು ತರ್ಕಬದ್ಧಗೊಳಿಸುವ ಪ್ರಯತ್ನದಲ್ಲಿ “ಪೌರತ್ವ”, “ಫೆಡರಲಿಸಂ” ಮತ್ತು “ವಿಭಜನೆ” ಮುಂತಾದ ಅಗತ್ಯ ವಿಷಯಗಳನ್ನು ಕೈಬಿಟ್ಟಿರುವ ಸಿಬಿಎಸ್‌ಇ ನಿರ್ಧಾರಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    ಯಾವುದೇ ಕಾರಣಕ್ಕೂ ಪ್ರಮುಖ ಪಾಠಗಳನ್ನು ಮೊಟಕುಗೊಳಿಸದಂತೆ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.

    ಇದನ್ನೂ ಓದಿ: ಪತಿ ಮೇಲೆ ಹಲ್ಲೆ ನಡೆಸಿದ ಪೊಲೀಸ್​​ಗೆ ಮಹಿಳೆ ಕಪಾಳಮೋಕ್ಷ

    “ಈ ಬಿಕ್ಕಟ್ಟಿನ ಸಮಯದಲ್ಲಿ ಸಿಬಿಎಸ್ಇ ಪಠ್ಯಕ್ರಮವನ್ನು ಕಡಿಮೆ ಮಾಡುವ ನೆಪದಲ್ಲಿ ಕೇಂದ್ರ ಸರ್ಕಾರ ಪೌರತ್ವ, ಫೆಡರಲಿಸಂ, ಜಾತ್ಯತೀತತೆ ಮತ್ತು ವಿಭಜನೆಯಂತಹ ವಿಷಯಗಳನ್ನು ಕೈಬಿಟ್ಟಿರುವುದು ಅಘಾತಕ್ಕೀಡುಮಾಡಿದೆ. ನಾವು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಪ್ರಮುಖ ಪಾಠಗಳನ್ನು ಮೊಟಕುಗೊಳಿಸದಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಮಮತಾ ಬ್ಯಾನರ್ಜಿ ಟ್ವೀಟರ್ ನಲ್ಲಿ ಹೇಳಿದ್ದಾರೆ.
    ಕೋವಿಡ್​​1- ನಿಂದಾದ ಶೈಕ್ಷಣಿಕ ಹಾನಿ ಸರಿದೂಗಿಸಲು ಸಿಬಿಎಸ್ಇ 2020-21ರ 9 ರಿಂದ 12 ನೇ ತರಗತಿಗಳ ಪಠ್ಯಕ್ರಮವನ್ನು ಶೇಕಡಾ 30 ರಷ್ಟು ಕಡಿಮೆಗೊಳಿಸಿದೆ. ಈ ತರಗತಿಗಳಿಗೆ ಹೊಸ ಪಠ್ಯಕ್ರಮವನ್ನು ಅದು ಬುಧವಾರ ಪ್ರಕಟಿಸಿದೆ.

    ಸಿಬಿಎಸ್​ಇ ಕೈಬಿಟ್ಟಿರುವ ಪಠ್ಯಗಳು ಇವೇ ನೋಡಿ, ಅದಕ್ಕೆ ವ್ಯಕ್ತವಾಗುತ್ತಿದೆ ಭಾರಿ ಟೀಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts