More

    ಮ್ಯಾಮ್ಕೋಸ್ ಗುಂಪು ವಿಮೆಯಿಂದ ರೈತರಿಗೆ ನೆರವು

    ಶೃಂಗೇರಿ: ರೈತರ ಹಿತಕ್ಕಾಗಿ ಮ್ಯಾಮ್ಕೋಸ್ ನಿರಂತರ ದುಡಿಯುತ್ತ ಬಂದಿದ್ದು, ಕರೊನಾ ಸಂಕಷ್ಟದಲ್ಲೂ ಮಾರುಕಟ್ಟೆಯಲ್ಲಿ ಅಡಕೆ ಧಾರಣೆ ಸುಸ್ಥಿರವಾಗಿಡಲು ಸಂಸ್ಥೆ ಶ್ರಮಿಸಿದೆ ಎಂದು ಉಪಾಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ ತಿಳಿಸಿದರು.

    ಪಟ್ಟಣದಲ್ಲಿ ಶುಕ್ರವಾರ ಮ್ಯಾಮ್ಕೋಸ್ ಆಯೋಜಿಸಿದ್ದ ಗುಂಪು ವಿಮಾ ಯೋಜನೆ ಫಲಾನುಭವಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ತೋಟಗಳ ಕಾರ್ವಿುಕರು ಹಾಗೂ ಮಾಲೀಕರ ನಡುವೆ ಅವಿನಾಭಾವ ಸಂಬಂಧ ಇರಬೇಕು. ಕಾರ್ವಿುಕರ ಸಂಕಷ್ಟಕ್ಕೆ ಪರಿಹಾರ ದೊರಕಿಸುವ ಗುರುತರ ಜವಾಬ್ದಾರಿ ಮಾಲೀಕನಿಗೆ ಇರಬೇಕು. ಸಂಸ್ಥೆಯ ಗುಂಪು ವಿಮಾ ಯೋಜನೆಯಿಂದ ಮಲೆನಾಡಿನ ಕೃಷಿಕರು ಆರ್ಥಿಕ ಸಹಾಯ ಪಡೆದುಕೊಂಡಿದ್ದಾರೆ ಎಂದರು.

    ಪ್ರಸ್ತುತ ರೈತರ ಆರೋಗ್ಯ ದೃಷ್ಟಿಯಿಂದ ಆರೋಗ್ಯ ವಿಮಾ ಯೋಜನೆ ಪ್ರಾರಂಭಿಸಲಾಗಿದೆ. ಸಂಸ್ಥೆಯಿಂದ ಸಸ್ಯಚೈತನ್ಯ ಸಾವಯವ ಗೊಬ್ಬರ ಲಭ್ಯವಿದೆ. ಈ ಗೊಬ್ಬರವು ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಬರ ಪರಿಸ್ಥಿತಿ, ವ್ಯತಿರಿಕ್ತ ಹವಾಮಾನ ತಡೆದುಕೊಳ್ಳುವ ಸಾಮರ್ಥ್ಯ ವೃದ್ಧಿಸುತ್ತದೆ. ಎಲ್ಲ ಬೆಳೆಗಳಿಗೆ ಶಕ್ತಿ ಮತ್ತು ಚೈತನ್ಯ ನೀಡುವಲ್ಲಿ ಗೊಬ್ಬರ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

    ವರ್ಷಕ್ಕೆ 4,100 ರೂ. ಪಾವತಿಸಿ ವಿಮಾದಾರರಾದರೆ ಷೇರುದಾರ ರೈತ ಮತ್ತು ಪತ್ನಿಗೆ ಮಾತ್ರ ವಾರ್ಷಿಕ 4 ಲಕ್ಷ ರೂ. ವರೆಗೆ ಆಸ್ಪತ್ರೆ ಚಿಕಿತ್ಸೆ ವೆಚ್ಚ ಭರಿಸಲಾಗುವುದು. ವೈಯಕ್ತಿಕವಾಗಿ ಅವಿವಾಹಿತರು, ವಿಧವಾ ಸದಸ್ಯರು ಕೂಡ ಈ ಸೌಲಭ್ಯ ಪಡೆಯಬಹುದು. ವಿಮಾದಾರರ ಸಂಖ್ಯೆ 8 ಸಾವಿರ ದಾಟಿದರೆ ವಿಮಾ ಕಂತು ಕೂಡ ಕಡಿಮೆಯಾಗಲಿದೆ ಎಂದು ಆರೋಗ್ಯ ವಿಮಾ ಯೋಜನೆ ಅಧಿಕಾರಿ ನಾಗರಾಜ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts