More

    ಖರ್ಗೆ ಪ್ರಧಾನಿ ಅಭ್ಯರ್ಥಿ, ಪುತ್ರನ ಪರೋಕ್ಷ ಸಹಮತ

    ಕಲಬುರಗಿ: ಮುಖ್ಯಮಂತ್ರಿ, ಪ್ರಧಾನ ಮಂತ್ರಿ ವಿಷಯಕ್ಕೆ ಬಂದಾಗ ಸಮಾಜಕ್ಕೆ ಲೇಪನ ಹಚ್ಚುವುದು ತಪ್ಪು. ಅವರ ಸಾಮರ್ಥ್ಯದ ಮೇಲೆ, ಅವರ ಕಾರ್ಯಶಕ್ತಿಯನ್ನು ನೋಡಬೇಕು. ಮೋದಿ ಅವರಿಗೆ ಪ್ರಧಾನಿ ಸ್ಥಾನ ನೀಡುವಾಗ ಜಾತಿ ಕೇಳಿಲ್ಲ, ಎಷ್ಟು ಸಮರ್ಥ ಎಂಬುದು ೧೦ ವರ್ಷದಿಂದ ನೋಡಿದ್ದೇ ಎಂದು ಹೇಳುವ ಮೂಲಕ ಡಾ.ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಎಂಬ ಮಾತಿಗೆ ಪರೋಕ್ಷವಾಗಿ ಸಹಮತವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ವ್ಯಕ್ತಪಡಿಸಿದರು.
    ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ದೇಶದ ಪ್ರಧಾನಿ, ಉಪ ಪ್ರಧಾನಿಯ ಸವಾಲು, ಪ್ರಶ್ನೆ ನಮ್ಮ ಮುಂದೆ ಇಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಸಂಸದರನ್ನು ಗೆಲ್ಲಿಸಿ ಕಳುಹಿಸುವುದು ನಮ್ಮ ಉದ್ದೇಶ. ಕಾಂಗ್ರೆಸ್ ಸ್ವಂತ ಬಲದ ಮೇಲೆ ೨೦೦ರಿಂದ ೨೫೦ ಸ್ಥಾನ ಗೆಲ್ಲಲ್ಲಿದ್ದು, ಮೈತ್ರಿಕೂಟದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಸತ್ತಿಗೆ ಕಳುಹಿಸುವುದು ನಮ್ಮ ಆದ್ಯತೆ ಎಂದು ಹೇಳಿದರು.
    ಬಿಜೆಪಿ ಸಂಸದರಿಗೆ ಬುದ್ಧಿ ಇಲ್ಲ. ಪ್ರಧಾನಿ ಗಂಭೀರ ವಿಚಾರ ಎಂದಿದ್ದಾರೆ. ೧೪೧ ಸಂಸದರು ಅಮಾನತ್ ಆಗಿದ್ದಾರೆ. ಸಂಸತ್ತಿಗೆ ನುಗ್ಗಿದ್ದ ನಾಲ್ವರಲ್ಲಿ ಇನ್ನಿಬ್ಬರಿಗೆ ಪಾಸ್ ಕೊಟ್ಟವರು ಯಾರು ಎಂಬುದು ಬಹಿರಂಗಪಡಿಸಲಿ. ಪಾಸ್ ನೀಡಿದ ಸಂಸದ ಪ್ರತಾಪ್ ಸಿಂಹ ಅವರನ್ನು ವಿಚಾರಣೆ ಮಾಡಿದ್ರಾ? ಎಂಬುದು ಬಹಿರಂಗ ಪಡಿಸಲಿ ಎಂದು ಹೇಳಿದರು.
    ಬಿಜೆಪಿ- ಜೆಡಿಎಸ್ ಮನಗೆ ಬೆಂಕಿ ಹತ್ತಿದೆ. ಬಿಜೆಪಿಯವರದ್ದು ಮನೆಯೊಂದು ಮೂರು ಬಾಗಿಲು ಎಂಬುದು ಬೆಳಗಾವಿಯಲ್ಲಿ ನೋಡಿz್ದÉÃವೆ. ಒಂದು ಬಾಗಿಲಲ್ಲಿ ಯತ್ನಾಳ ಆ್ಯಂಡ್ ಕಂಪನಿ. ಇನ್ನೊಂದು ಬಾಗಿಲಲ್ಲಿ ಅಶೋಕ ಆ್ಯಂಡ್ ಕಂಪನಿ, ಮತ್ತೊಂದು ಬಾಗಿಲಲ್ಲಿ ವಿಜಯೇಂದ್ರ ಆ್ಯಂಡ್ ಕಂಪನಿ ಕಾಯುತ್ತಿದೆ. ಸಮನ್ವಯತೆ ಇಲ್ಲ. ಬರ ಚರ್ಚಿಸಿ ಎಂದರೆ ತೆಲಂಗಾಣ ಚುನಾವಣಾ ಚರ್ಚಿಸುತ್ತಾರೆ. ಒಬ್ಬರು ಹೊರಗೆ ಎಂದರೆ ಮತ್ತೊಬ್ಬರು ಸದನದ ಬಾವಿಗೆ ಇಳಿಬೇಕು ಎನ್ನುತ್ತಾರೆ. ಮೂರಲ್ಲ ನೂರು ಬಾಗಿಲು ಆಗಿದೆ ಎಂದು ವ್ಯಂಗ್ಯವಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts