More

    ಮಲ್ಲದಗುಡ್ಡದಲ್ಲಿ ಅಯ್ಯಪ್ಪ ತಾತ ಜಾತ್ರೆ ಅದ್ದೂರಿ

    ಕವಿತಾಳ: ಮಲ್ಲದಗುಡ್ಡದಲ್ಲಿ ಆರೂಢ ಅಯ್ಯಪ್ಪ ತಾತ ಅವರ 42ನೇ ಜಾತ್ರಾ ಮಹೋತ್ಸವ ಮತ್ತು ಆರೂಢ ಕರಿಬಸವ ತಾತ ಅವರ 8ನೇ ಪುಣ್ಯಸ್ಮರಣೆ ಕಾರ್ಯಕ್ರಮ ಶುಕ್ರವಾರ ಅದ್ದೂರಿಯಾಗಿ ನಡೆಯಿತು.

    ಜಾತ್ರೆ ಅಂಗವಾಗಿ ಕೊಡೇಕಲ್ ಬಸವೇಶ್ವರ ಅವರ ವಚನಗಳ ಕಟ್ಟುಗಳನ್ನು ಪಲ್ಲಕ್ಕಿಯಲ್ಲಿರಿಸಿ ಗ್ರಾಮದಲ್ಲಿ ಕಳಸ, ಕನ್ನಡಿ, ಡೊಳ್ಳು ಕುಣಿತ, ಪುರವಂತರ ಸೇವೆಯೊಂದಿಗೆ ಮೆರವಣಿಗೆ ನಡೆಸಲಾಯಿತು. ಜಾತ್ರೆ ಅಂಗವಾಗಿ ದೇವಸ್ಥಾನ ಆವರಣದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಒಂಬತ್ತು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ನಂತರ ಪೀಠಾಧಿಪತಿ ಆರೂಢ ಅಯ್ಯಪ್ಪತಾತ ಮತ್ತು ನಂದಿಹಾಳ ಕೊಡೇಕಲ್ ಮಠದ ವೃಷಭೇಂದ್ರ ಸ್ವಾಮಿಗಳ ತುಲಾಭಾರ ಕಾರ್ಯಕ್ರಮ ನಡೆಯಿತು.

    ಮಲ್ಲದಗುಡ್ಡ ಮಠ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜನೆ ಮುಖಾಂತರ ಪ್ರಸಿದ್ಧಿ ಪಡೆದಿದೆ. ಮಠದ ಅಯ್ಯಪ್ಪ ತಾತ ಭಕ್ತರ ಆರಾಧ್ಯ ದೈವವಾಗಿದ್ದಾರೆ. ಶ್ರೀಗಳ ಜತೆ ಸೇರಿ ಗ್ರಾಮದ ಸದ್ಬಕ್ತರು ಕಲ್ಯಾಣ ಕಾರ್ಯಕ್ರಮ ಆಯೋಜಿಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ವೃಷಭೇಂದ್ರಸ್ವಾಮಿ ತಿಳಿಸಿದರು. ಪ್ರಮುಖರಾದ ಸಂಗಯ್ಯಸ್ವಾಮಿ ನಂದಿಹಾಳ ಮಠ, ಶರಣಯ್ಯಸ್ವಾಮಿ ಹುನುಕುಂಟಿ, ಅಯ್ಯಣ್ಣ ತಾತ ಹಾಲಬಾವಿ, ಕಲಿಗಣನಾಥಸ್ವಾಮಿ ಹೆಗ್ಗಡದಿನ್ನಿ, ಅಮರಯ್ಯಸ್ವಾಮಿ ಜಾಲಿಬೆಂಚಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts