More

    ಎಳ್ಳು-ಬೆಲ್ಲದ ಹಬ್ಬಕ್ಕೆ ಮಲೆನಾಡು ಸಜ್ಜು

    ಶಿವಮೊಗ್ಗ: ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಸಂಭ್ರಮಕ್ಕೆ ಮಲೆನಾಡು ಶಿವಮೊಗ್ಗದಲ್ಲಿ ಭರದಿಂದ ಸಿದ್ಧತೆಗಳು ನಡೆದವು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ಸಂಕ್ರಾಂತಿ ಮುನ್ನಾ ದಿನವಾದ ಭಾನುವಾರವೇ ಹಬ್ಬದ ಆಚರಣೆಗೆ ಜಿಲ್ಲೆಯಾದ್ಯಂತ ಜನರು ಮಾರುಕಟ್ಟೆಗಳಿಗೆ ತೆರಳಿ ವಿವಿಧ ಸಾಮಗ್ರಿಗಳ ಖರೀದಿಸಿದರು.

    ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳ ಮಾರುಕಟ್ಟೆಗಳು, ಪ್ರಮುಖ ರಸ್ತೆ, ವೃತ್ತಗಳಲ್ಲಿ ರೈತರು ಮತ್ತು ವ್ಯಾಪಾರಿಗಳು ಕಬ್ಬು, ಮಾವು(ಎಲೆ) ಸೇರಿ ಹೂವು-ಹಣ್ಣುಗಳನ್ನಿಟ್ಟು ಭರ್ಜರಿ ವ್ಯಾಪಾರ-ವಹಿವಾಟು ನಡೆಸಿದರು. ವಿಶೇಷವಾಗಿ ಸಂಕ್ರಾಂತಿಗೆ ಲೋಡ್‌ಗಟ್ಟಲೆ ಕಬ್ಬು ಮಾರುಕಟ್ಟೆಗೆ ಬಂದಿತ್ತು. ಕೊಂಚು ದುಬಾರಿ ಎನಿಸಿದರೂ ಸಾರ್ವಜನಿಕರು ಖರೀದಿಸಿ ಮನೆಗಳಲ್ಲಿ ರಾಶಿ ಪೂಜೆಗೆ ಅಣಿಯಾದರು.
    ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಹೂವು ಹಣ್ಣಿನ ವ್ಯಾಪಾರ ಭರಾಟೆ ಜೋರಾಗಿತ್ತು. ಕಬ್ಬಿನ ಜತೆಗೆ ಹೂವು-ಹಣ್ಣುಗಳ ಖರೀದಿಗೆ ಜನರು ಮುಂದಾದರು. ಅದರಲ್ಲೂ ಕೆಲವರು ಹೊಸ ಬಟ್ಟೆ ಖರೀದಿ, ದಿನಸಿ ಖರೀದಿಗೆ ಜನ ಬಂದಿದ್ದರಿಂದ ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ಶಿವಮೊಗ್ಗದ ನಗರದ ಮಾರುಕಟ್ಟೆಗಳು ಹಾಗೂ ಮಳಿಗೆಗಳಲ್ಲೂ ಗ್ರಾಹಕರು ಹೆಚ್ಚಿದ್ದರು. ಗಾಂಧಿಬಜಾರ್, ನೆಹರು ರಸ್ತೆ ದುರ್ಗಿಗುಡಿ, ಲಕ್ಷ್ಮೀಟಾಕೀಸ್, ಪೊಲೀಸ್ ಚೌಕಿ, ಬಿ.ಎಚ್.ರಸ್ತೆ ಸೇರಿ ವಿವಿಧ ಪ್ರದೇಶಗಳು ಗ್ರಾಹಕರಿಂದ ಗಿಜಿಗುಡುತ್ತಿದ್ದವು.
    ಎಳ್ಳು-ಬೆಲ್ಲ ಹಾಗೂ ಸಕ್ಕರೆ ಅಚ್ಚನ್ನು ಗ್ರಾಹಕರು ಖರೀದಿಸಿದರು. ಎಲ್ಲ ಬಗೆಯ ಹೂವು ಮತ್ತು ಹಣ್ಣುಗಳ ಬೆಲೆಗಳೂ ಗಗನಕ್ಕೇರಿದ್ದವು. ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ಸೇವಂತಿಗೆ ಕೆಜಿಗೆ 180ರಿಂದ 200 ರೂ., ಕಾಕಡ ಮಾರಿಗೆ 80 ರೂ. ಇತ್ತು. ಕಿತ್ತಲೆ ಒಂದೂವರೆ ಕೆಜಿಗೆ 100 ರೂ., ಸೇಬು ಕೆಜಿಗೆ 160ರಿಂದ 180 ರೂ., ದ್ರಾಕ್ಷಿ 120ರಿಂದ 140 ರೂ. ಇದ್ದರೆ, ದಾಳಿಂಬೆ ಮಾತ್ರ ಗರಿಷ್ಠ 200 ರೂ. ದಾಟಿತ್ತು. ಕಬ್ಬು ಪ್ರತಿ ಜಲ್ಲೆಗೆ 50 ರೂ. ಇತ್ತು. ಬಾಳೆ ಹಣ್ಣು ಕೆಜಿಗೆ 80-100 ರೂ. ಇತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts