More

    ಮಲೇಬೆನ್ನೂರು ಪುರಸಭೆ ಗದ್ದುಗೆಗೆ ಗುದ್ದಾಟ

    ಟಿ.ಎಚ್.ಶಿವಕುಮಾರ್ ಮಲೇಬೆನ್ನೂರು: ಮಲೇಬೆನ್ನೂರು ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಿದ್ದು, ಈ ಬಾರಿ ಆಯ್ಕೆಯಾದ ಸದಸ್ಯರ ಪೈಕಿ ಒಂದು ಡಜನ್ ಮಹಿಳಾ ಸದಸ್ಯರಿದ್ದು, ಎಲ್ಲರೂ ಅಧಿಕಾರದ ಆಕಾಂಕ್ಷಿಗಳೇ ಆಗಿದ್ದು ಕಣದಲ್ಲಿ ತೀವ್ರ ಪೈಪೋಟಿ ಎದುರಾಗಿದೆ.

    23 ವಾರ್ಡ್‌ಗಳಿರುವ ಪುರಸಭೆಗೆ ಜೆಡಿಎಸ್-5, ಕಾಂಗ್ರೆಸ್-8, ಬಿಜೆಪಿ-7, ಪಕ್ಷೇತರ ಮೂವರು ಸದಸ್ಯರಿದ್ದಾರೆ. ಈ ಪೈಕಿ 12 ಮಹಿಳಾ ಸದಸ್ಯರಿದ್ದು, ನಾಲ್ವರು ಕಾಂಗ್ರೆಸ್, ಮೂವರು ಬಿಜೆಪಿ, ಇಬ್ಬರು ಜೆಡಿಎಸ್ ಹಾಗೂ ಒಬ್ಬರು ಪಕ್ಷೇತರರಾಗಿದ್ದಾರೆ.

    ಬಿಜೆಪಿ ಹಾಗೂ ಪಕ್ಷೇತರ ಸದಸ್ಯರ ಬೆಂಬಲದಿಂದ ಮೊದಲ ಅವಧಿಯ ಎರಡೂವರೆ ವರ್ಷ ಪುರಸಭೆ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್, ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿ ಹಂಚಿಕೊಂಡಿದ್ದವು.

    ಪರಿಶಿಷ್ಟ ಜಾತಿಯ ಮಹಿಳೆ ಡಿ.ಕೆ.ಅಂಜಿನಮ್ಮ ವಿಜಯಕುಮಾರ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಸಾಮಾನ್ಯ ವರ್ಗದ ಬಿಎಂ ಚನ್ನೇಶ್‌ಸ್ವಾಮಿ ಆಯ್ಕೆಯಾಗಿದ್ದರು.

    ಎರಡನೇ ಅವಧಿಗೆ ಮೀಸಲು ಪ್ರಕಟವಾಗಿದ್ದು, ಸಾಮಾನ್ಯವರ್ಗಕ್ಕೆ ಮೀಸಲಿರುವ ಅಧ್ಯಕ್ಷ ಸ್ಥಾನಕ್ಕೆ 10 ಮಹಿಳಾ ಸದಸ್ಯರು, ಎಸ್ಸಿ ಮಹಿಳೆಗೆ ಮೀಸಲಿರುವ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಆಕಾಂಕ್ಷಿಗಳಿದ್ದಾರೆ. ಈ ಪೈಕಿ ಅಧಿಕಾರ ಯಾರ ಪಾಲಿಗೆ ಒಲಿಯಲಿದೆ ಎಂಬುದು ನ.6ರಂದು ಚುನಾವಣಾ ಸಭೆಯಲ್ಲಿ ನಿರ್ಧಾರಗೊಳ್ಳಲಿದೆ.

    ಮೀಸಲು ವಿವಾದ ಕೋರ್ಟ್ ಮೆಟ್ಟಿಲೇರಿದ್ದರಿಂದ ಎರಡು ವರ್ಷ ಜನಪ್ರತಿನಿಧಿಗಳಿಲ್ಲದೇ ಆಡಳಿತಾಧಿಕಾರಿ ಕಾರ್ಯನಿರ್ವಹಿಸಿದ್ದರು. ಇನ್ನುಳಿದ ಆರು ತಿಂಗಳ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ.

    ಮೊದಲ ಅವಧಿ ವೇಳೆ ಹರಿಹರ ತಾಪಂ 5 ವರ್ಷ ಬಿಜೆಪಿಗೆ, ಮಲೇಬೆನ್ನೂರು ಪುರಸಭೆ 5 ವರ್ಷ ಜೆಡಿಎಸ್‌ಗೆ ಎಂದು ಒಪ್ಪಂದವಾಗಿತ್ತು. ಕೊನೆ ಪಕ್ಷ ಒಂದು ವರ್ಷವಾದರೂ ಬಿಜೆಪಿಗೆ ಮಲೇಬೆನ್ನೂರು ಪುರಸಭೆ ಅಧ್ಯಕ್ಷ ಸ್ಥಾನ ನೀಡುವಂತೆ ಕೋರಲಾಗಿತ್ತು.

    ಆ ಸಂದರ್ಭ ಬಂದರೆ ನೋಡುತ್ತೇವೆ ಎಂದು ಜೆಡಿಎಸ್ ನಾಯಕರು ತಿಳಿಸಿದ್ದರು.ಆದರೆ ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯು ಜೆಡಿಎಸ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿತ್ತು.

    ಸ್ಥಳೀಯ ಬಿಜೆಪಿ ಮುಖಂಡರು ಜೆಡಿಎಸ್ ಜಿಲ್ಲಾಧ್ಯಕ್ಷರು ಮಧ್ಯಪ್ರವೇಶಿಸಿ ಮೈತ್ರಿ ಗಟ್ಟಿಗೊಳಿಸಿದ್ದರು. ಈಗಲೂ ಒಂದು ಹಂತದ ಮಾತುಕತೆ ನಡೆದಿರುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಬಿಜೆಪಿಯ ಭಾನುವಳ್ಳಿ ಜಿಪಂ ಸದಸ್ಯ ವಾಗೀಶ ಸ್ವಾಮಿ ವಿಜಯವಾಣಿಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts