More

    ಅಡಕೆಗೆ ಎಲೆಚುಕ್ಕಿ ರೋಗ ಮಾರಕವಲ್ಲ: ಡಾ. ಪ್ರಕಾಶ್

    ಶಿವಮೊಗ್ಗ: ಅಡಕೆಗೆ ಬರುವ ಎಲೆಚುಕ್ಕಿ ರೋಗ ಮಾರಕವಲ್ಲ. ವೈಜ್ಞಾನಿಕ ಕ್ರಮ ಅನುಕರಣೆಯಿಂದ ರೋಗವನ್ನು ಹತೋಟಿಗೆ ತರಬಹುದು. ಹಾಗಾಗಿ ರೈತರು ಎಲೆಚುಕ್ಕಿ ರೋಗದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ. ಪ್ರಕಾಶ್ ಹೇಳಿದರು.
    ತೀರ್ಥಹಳ್ಳಿ ತಾಲೂಕಿನ ಮಳಲೂರು ಗ್ರಾಮದಲ್ಲಿ ತೀರ್ಥಹಳ್ಳಿ ತೋಟಗಾರಿಕೆ ಇಲಾಖೆ, ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಅಡಕೆ ಬೆಳೆಯ ಎಲೆ ಚುಕ್ಕಿ ರೋಗದ ಹತೋಟಿ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಚ್ಚಿನ ಮಾಹಿತಿಗಾಗಿ ರೈತರು ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದರು.
    ಶಿವಮೊಗ್ಗ ಅಡಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ನಾಗರಾಜಪ್ಪ ಅಡಿವಪ್ಪರ ಮಾತನಾಡಿ, ಕೊಲೆಟೊಟ್ಟ್ರೆಕಮ್, ಪೆಸ್ಟಲೋಷಿಯಾ ಮತ್ತು ಫಿಲ್ಲೊಸ್ಟಿಕ್ವಾ ಎಂಬ ಶಿಲೀಂಧ್ರಗಳಿಂದ ಅಡಕೆಗೆ ಎಲೆಚುಕ್ಕೆ ರೋಗ ತಗುಲುತ್ತದೆ. ಶೇ.90ರಷ್ಟು ಪ್ರಮಾಣ ಹೆಚ್ಚು ಮಳೆ, ಕಡಿಮೆ ತಾಪಮಾನ ರೋಗ ಉಲ್ಬಣವಾಗಲು ಕಾರಣವಾಗಿದೆ. ಹತೋಟಿಗೆ ಶೇ. 1ರ ಬೋರ್ಡೋ ಅಥವಾ ಸಾಫ್ 2 ಗ್ರಾಂ/ಲೀ ಅಥವಾ ಹೆಕ್ಸಕೋನೋಜೋಲ್ 1 ಮೀ.ಲೀ. ಸಿಂಪಡಿಸುವುದರಿಂದ ರೋಗವನ್ನು ಹತೋಟಿಗೆ ತರಬಹುದು ಎಂದರು.
    ಮಣ್ಣು ಪರೀಕ್ಷೆ, ಬೋರ್ಡೋ ದ್ರಾವಣ ತಯಾರಿ ಹಾಗೂ ಪೋಷಕಾಂಶದ ನಿರ್ವಹಣೆ ಬಗ್ಗೆ ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ರವಿಕುಮಾರ ತಿಳಿಸಿದರು. ಗ್ರಾಪಂ ಅಧ್ಯಕ್ಷ ಭಾಸ್ಕರ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ನಿರ್ದೇಶಕ ಶಾಂತಿಲಾಲ್ ಗಾಂಧಿ, ಸಹಾಯಕ ಕೋಟಗಾರಿಕೆ ಅಧಿಕಾರಿಗಳಾದ ಯು.ಪ್ರೇಮ್ ಚಂದ್, ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 60 ರೈತರು ಭಾಗವಹಿಸಿದ್ದರು. ಅಲ್ಲದೇ, ಕ್ಷೇತ್ರವನ್ನು ರೈತರೊಂದಿಗೆ ಭೇಟಿ ಮಾಡಿ ರೋಗ ಪೀಡಿತ ತೋಟದಲ್ಲಿ ಹತೋಟಿ ಕ್ರಮಗಳ ಮಾಹಿತಿ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts