More

    ಮಕ್ಕಳಿಗೆ ವಿಜ್ಞಾನ ಸರಳಿಕೃತಗೊಳಿಸುವ ಉದ್ದೇಶ

    ಅಳವಂಡಿ: ಚಟುವಟಿಕೆಯಾಧಾರಿತ ವಿಜ್ಞಾನ ಪ್ರಯೋಗಗಳನ್ನು ಮಾಡಿ ಮಕ್ಕಳಲ್ಲಿರುವ ವೈಜ್ಞಾನಿಕ ಮನೋಭಾವ ಬೆಳೆಸಿ ವಿಜ್ಞಾನವನ್ನು ಸರಳಿಕೃತಗೊಳಿಸುವದೇ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಟಾನ ಉದ್ದೇಶ ಎಂದು ಸಂಯೋಜಕ ಶಿವಪ್ಪ ಅಕ್ಕಸಾಲಿ ತಿಳಿಸಿದರು.

    ಇದನ್ನೂ ಓದಿ: ಜ್ವರದ ನಿಖರ ಕಾರಣ ಪತ್ತೆಗೆ ಉಪಕರಣ ಆವಿಷ್ಕಾರ; ಹಾಸನ ಮೂಲದ ವಿಜ್ಞಾನಿಯಿಂದ ಸಂಶೋಧನೆ

    ಸಮೀಪದ ನಿಲೋಗಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಟಾನದಿಂದ ಮಕ್ಕಳಿಗೆ 15 ದಿನಗಳ ಕಾಲ ನಡೆಯುವ ಚಳಿಗಾಲ ಶಿಬಿರ ಉದ್ಘಾಟಿಸಿ ಬುಧವಾರ ಮಾತನಾಡಿದರು.

    ಕಠಿಣ ವಿಷಯಗಳನ್ನು ಸರಳವಾಗಿ ತಿಳಿಸಲು ಪ್ರಯೋಗದ ಮೂಲಕ ಅಭ್ಯಾಸ ಮಾಡಿಸುವುದರಿಂದ ಮಕ್ಕಳ ಮನಸ್ಸಿನಲ್ಲಿ ಗಾಢವಾಗಿ ಮೂಡಲಿದೆ. ರಜೆಯ ಸಮಯದಲ್ಲಿ ಇಂತಹ ಶಿಬಿರಗಳ ಉಪಯೋಗ ಪಡೆದುಕೊಳ್ಳಬೇಕು ಎಂದರು.

    ಮುಖ್ಯ ಶಿಕ್ಷಕ ಗುರುರಾಜ ಪಾಟೀಲ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ಪಾಲಕರು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಕೈಜೋಡಿಸಬೇಕು. ವಿವಿಧ ವಿಷಯಗಳ ಬಗ್ಗೆ ಪ್ರಾಯೋಗಿಕ ಶಿಬಿರವನ್ನು ನಡೆಸಿ ಮಕ್ಕಳನ್ನು ಮುಖ್ಯ ವಾಹಿನಿಗೆ ತರಬೇಕಾಗಿದೆ ಎಂದರು.

    ಪಿಡಿಓ ಶೇಖರಪ್ಪ ಮಡಿವಾಳರ, ಪ್ರಮುಖರಾದ ಕೃಷ್ಣಪ್ಪ ಚವಟಗಿ, ಅಂದಪ್ಪ ಮಂಡಲಗೇರಿ, ಪರಮೇಶ್ವರಯ್ಯ ಹಿರೇಮಠ, ಹೊಳಿಯಪ್ಪ, ರವಿ ಮಾಗಳ, ಟಾಟಾ ಸಂಸ್ಥೆಯ ಬಸವರಾಜ ಕಮತರ, ಮುಖ್ಯ ಶಿಕ್ಷಕ ಗುರುರಾಜ ಪಾಟೀಲ, ಶಿಕ್ಷಕರಾದ ವೆಂಕರಡ್ಡಿ ನಾಗರಳ್ಳಿ, ಮುತ್ತು ಬನ್ನಿಕೊಪ್ಪ, ಬಸಪ್ಪ ಜೀರ, ಸಂಗಪ್ಪ ರಾಟಿ, ಗಂಗಮ್ಮ ಗೌಡ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts