More

    ಮಕ್ಕಳನ್ನು ಕೆಲಸಕ್ಕೆ ದೂಡಬೇಡಿ: ಸತ್ರ ನ್ಯಾಯಾಧೀಶ ಶಂಕ್ರಪ್ಪ ನಿಂಬಣ್ಣ ಕಲ್ಕುಣಿ ಸಲಹೆ

    ಕನಕಪುರ: ಕಾನೂನು ಸೇವಾಸಮಿತಿ, ವಕೀಲರ ಸಂಘ ಹಾಗು ಕಾರ್ಮಿಕ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಹಾಗೂ ಜಾಗೃತಿ ವಾಹನಕ್ಕೆ ನಗರದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಂಕ್ರಪ್ಪ ನಿಂಬಣ್ಣ ಕಲ್ಕುಣಿ ಮಂಗಳವಾರ ಚಾಲನೆ ನೀಡಿದರು.

    ನಂತರ ಮಾತನಾಡಿದ ಅವರು, ಮಕ್ಕಳನ್ನು ಬಾಲ್ಯದಲ್ಲಿಯೇ ಕೆಲಸಗಳಲ್ಲಿ ತೊಡಗಿಸುವುದು ಅಪರಾಧವಾಗಿದೆ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಕೇವಲ ಬಡತನ ಮುಂದಿಟ್ಟುಕೊಂಡು ವಿದ್ಯೆ ಕಲಿಯಬೇಕಾದ ಮಕ್ಕಳನ್ನು ಕೆಲಸಗಳಿಗೆ ದೂಡುವ ಬದಲು ಉತ್ತಮ ಶಿಕ್ಷಣ ಕೊಡಿಸಿದರೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗುತ್ತಾರೆ. ಆದ್ದರಿಂದ ಯಾರೂ ಸಹ ಮಕ್ಕಳನ್ನು ಕೆಲಸಗಳಿಗೆ ಕಳಿಸದೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.

    ತಾಲೂಕು ಕಾರ್ಮಿಕ ನಿರೀಕ್ಷಕ ಮಂಜುನಾಥ್ ಮಾತನಾಡಿ, ಬಾಲಕಾರ್ಮಿಕ ವಿರೋಧಿ ಪದ್ಧತಿ ಜಾರಿಯಲ್ಲಿದ್ದರೂ ಸಂಪೂರ್ಣವಾಗಿ ಹತೋಟಿಗೆ ತರಲು ಆಗುತ್ತಿಲ್ಲ. ಕರೊನಾ ಹಾವಳಿಯಿಂದ ದೇಶ ತತ್ತರಿಸಿ ಹೋಗಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಇಲಾಖೆಯ ವತಿಯಿಂದ ನಗರ ಮತ್ತು ಹಾರೋಹಳ್ಳಿ ಭಾಗಗಳಲ್ಲಿ ಜಾಗೃತಿ ಕಾರ್ಯ ನಡೆಸಲಾಗುತ್ತಿದೆ. ಕಾರ್ಮಿಕ ಇಲಾಖೆ ನಿಯಮ ಉಲ್ಲಂಘಿಸುವವರಿಗೆ 20 ಸಾವಿರ ರೂ.ವರೆಗೆ ದಂಡ ಹಾಗೂ 6ರಿಂದ 8 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದರು.

    ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ಬಿ.ಆರ್.ದಿನೇಶ್, ಸಿಬ್ಬಂದಿಗಳಾದ ಕೃಷ್ಣಪ್ಪ, ಆನಂದ್‌ಕುಮಾರ್, ಮುತ್ತುರಾಜ್, ಶಿವಣ್ಣ, ಪರಶಿವ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts