More

    ಸೊಸೆ ಕೈಯಲ್ಲಿ ಮನೆಗೆಲಸ ಮಾಡಿಸುವುದು ಕ್ರೌರ್ಯ ಅಲ್ಲ: ಹೈಕೋರ್ಟ್

    ತಿರುವನಂತಪುರ: ಅತ್ತೆಯಾದವರು ಸೊಸೆ ಕೈಯಲ್ಲಿ ಮನೆಗೆಲಸ ಮಾಡಿಸುವುದು ಸಾಮಾನ್ಯ ಸಂಗತಿ. ಅದೇನು ಅಸಹಜ ಸಂಗತಿಯಲ್ಲ ಎಂದು ಕೇರಳ ಹೈಕೋರ್ಟ್​ ಹೇಳಿದೆ.

    ವ್ಯಕ್ತಿಯೊಬ್ಬ ಪತ್ನಿಯಿಂದ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೇರಳ ಹೈಕೋರ್ಟ್​ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಹಾಗೂ ಆತ ವಿಚ್ಛೇದನ ಕೋರಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದೆ.

    ಅತ್ತೆ ತನ್ನನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ, ಆಕೆಯಿಂದ ಪ್ರತ್ಯೇಕಗೊಂಡು ಬೇರೊಂದು ಮನೆ ಮಾಡುವಂತೆ ಆಕೆ ಗಂಡನ ಮೇಲೆ ಒತ್ತಡ ಹೇರುತ್ತಿದ್ದಳು. ಇದು ಆಕೆ ತನ್ನ ಮೇಲೆ ಎಸಗುತ್ತಿರುವ ಕ್ರೌರ್ಯ ಎಂದು ಹೇಳಿ ಆಕೆಯಿಂದ ವಿಚ್ಛೇದನ ಕೋರಿ ವ್ಯಕ್ತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ.

    ಇದನ್ನೂ ಓದಿ: ಶಾಲಾ ಬಾಲಕಿ ಅಪಹರಿಸಿ, ಅತ್ಯಾಚಾರಗೈದು ಕೊಲೆ ಮಾಡಿದ್ದ ಆರೋಪಿಗೆ ಜಾಮೀನು ಸಿಕ್ಕಿದ್ದು ಹೇಗೆ?

    ಇದಕ್ಕೆ ಪ್ರತಿಯಾಗಿ ಆಕೆ, ತನ್ನ ಅತ್ತೆ ತನ್ನನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು. ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಯಾವುದೋ ಒಂದು ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದಾಗಲೂ ಮನೆಗೆಲಸ ಮಾಡುವಂತೆ ಒತ್ತಡ ಹೇರುತ್ತಿದ್ದರು ಎಂದು ಆರೋಪಿಸಿದ್ದಲ್ಲದೆ, ಪತಿಯ ವಿಚ್ಛೇದನ ಅರ್ಜಿಯನ್ನು ವಿರೋಧಿಸಿದ್ದಳು.

    ತಮ್ಮ ಕುಟುಂಬದಿಂದ ಅತ್ತೆಯನ್ನು ಪ್ರತ್ಯೇಕಿಸಬೇಕು ಎಂಬ ಆಕೆಯ ವಾದದಲ್ಲಿ ಯಾವುದೇ ಹುರುಳು ಕಾಣುತ್ತಿಲ್ಲ. ಪ್ರತ್ಯೇಕವಾಗಿ ಮನೆ ಮಾಡುವಂತೆ ಆಕೆ ಪತಿ ಮೇಲೆ ಹೇರುತ್ತಿದ್ದ ಒತ್ತಡ ನಿಜಕ್ಕೂ ಆತನ ಪಾಲಿಗೆ ಅಸಹನೀಯವಾಗಿ ಪರಿಣಮಿಸಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

    ಯಾವುದೇ ಒಂದು ಕುಟುಂಬದಲ್ಲಿ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಮೂಡುವುದು ಸಹಜ. ಕಿರಿಯರನ್ನು ಹಿರಿಯರು ಬೈಯ್ಯುವುದು, ಹೀಯಾಳಿಸುವುದು ಸಾಮಾನ್ಯ ಸಂಗತಿ. ಸೊಸೆಗೆ ಮನೆಗೆಲಸ ಮಾಡುವಂತೆ ಹೇಳುವುದೂ ಕೂಡ ಸಾಮಾನ್ಯ. ಅದರಲ್ಲಿ ಅಂಥ ಅಸಹಜತೆ ಏನೂ ಇಲ್ಲ ಎಂದು ನ್ಯಾಯಪೀಠ ಹೇಳಿದೆ.

    ಇದನ್ನೂ ಓದಿ: ಕ್ವಾರಂಟೈನ್ ಆಗಲ್ಲ ಎನ್ನುತ್ತಿದ್ದ ಕಾರ್ಪೋರೇಟರ್ ಕೊನೆಗೂ ಆಸ್ಪತ್ರೆಗೆ ರವಾನೆ

    ವಿಚ್ಛೇದನ ಕೋರಿರುವ ವ್ಯಕ್ತಿ ಪ್ರತಿವಾದಿಯನ್ನು 2003ರಲ್ಲಿ ಮದುವೆಯಾಗಿದ್ದ. ಇವರ ದಾಂಪತ್ಯಕ್ಕೆ ಒಂದು ಹೆಣ್ಣುಮಗು ಕೂಡ ಜನಿಸಿತ್ತು. ಆದರೆ ಬಾಣಂತನ ಮುಗಿಸಿಕೊಂಡು ಗಂಡನ ಮನೆಗೆ ಮರಳಿದ ಆಕೆ ಅತ್ತೆ ಹಾಗೂ ಪತಿಯೊಂದಿಗೆ ಜಗಳವಾಡುವುದನ್ನೇ ರೂಢಿ ಮಾಡಿಕೊಂಡಿದ್ದಳು. ಪದೇಪದೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡುತ್ತಿದ್ದಲ್ಲದೆ, ಪೂರಕವಾದ ಸಾಕ್ಷ್ಯಗಳನ್ನೂ ಸಿದ್ಧಪಡಿಸಿಕೊಂಡಿದ್ದಳು.

    ಗಂಡನನ್ನು ನಾಯಿ, ನಾಚಿಕೆ ಇಲ್ಲದವನು ಎಂದು ಆತನ ಸಂಬಂಧಿಕರ ಎದುರೇ ಆಕೆ ಹೀಯಾಳಿಸುತ್ತಿದ್ದಳು. ತನಗೆ ಗಂಡನಾಗಿರಲು ನೀನು ಅರ್ಹನೇ ಅಲ್ಲ ಎಂದು ಅವಮಾನಿಸುತ್ತಿದ್ದಳು. ಅಲ್ಲದೆ, ಆತನೊಂದಿಗೆ ದೈಹಿಕ ಸಂಪರ್ಕ ಹೊಂದಲು ನಿರಾಕರಿಸುತ್ತಿದ್ದಳು. 2011ರಲ್ಲಿ ಆಕೆ ಗಂಡನ ಮನೆ ತೊರೆದು ಹೋಗಿದ್ದಳು. ಈ ಎಲ್ಲ ಕಾರಣಗಳಿಂದಾಗಿ ನೊಂದಿದ್ದ ಆತ ಪತ್ನಿ ತನ್ನ ವಿರುದ್ಧ ಕ್ರೌರ್ಯ ಎಸಗುತ್ತಿರುವುದಾಗಿ ಆರೋಪಿಸಿ ವಿವಾಹ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದ.

    ಆದರೆ ಪತಿಯ ವಿವಾಹ ವಿಚ್ಛೇದನ ಕೋರಿಕೆಯನ್ನು ವಿರೋಧಿಸಿದ್ದ ಆಕೆ, ಅತ್ತೆಯಿಂದ ಬೇರ್ಪಟ್ಟು ಬೇರೊಂದು ಮನೆ ಮಾಡಿದರೆ ಆತನೊಂದಿಗೆ ಸಂಸಾರ ನಡೆಸಲು ಸಿದ್ಧ ಎಂದು ಆಕೆ ವಾದಿಸಿದ್ದಳು, ಕೌಟುಂಬಿಕ ನ್ಯಾಯಾಲಯ ಇದನ್ನು ಮಾನ್ಯ ಮಾಡಿತ್ತು. ಈ ಹಿನ್ನೆಲೆಯಲ್ಲಿ ಆತ ಕೇರಳ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದ.

    ಇದರ ವಿಚಾರಣೆ ನಡೆಸಿದ ಹೈಕೋರ್ಟ್​ ನ್ಯಾಯಪೀಠ, ಅತ್ತೆಯೇ ತನ್ನ ಸಂಸಾರದ ಎಲ್ಲ ಸಮಸ್ಯೆಗಳಿಗೂ ಮೂಲ ಎಂದು ಭಾವಿಸಿ ಆಕೆಯಿಂದ ಬೇರ್ಪಟ್ಟು ಬೇರೊಂದು ಮನೆ ಮಾಡುವುದು ಆಕೆಯ ಉದ್ದೇಶವಾಗಿದೆ. ಮದುವೆಯಾದ ಸಂದರ್ಭದಲ್ಲಿ ಮದ್ಯವನ್ನೂ ಮುಟ್ಟದಿದ್ದ ವ್ಯಕ್ತಿ ಈಗ ಮದ್ಯವ್ಯಸನಿಯಾಗಿದ್ದಾನೆ. ಇದನ್ನು ಗಮನಿಸಿದಾಗ ಆಕೆ ಆತನ ಎಷ್ಟರಮಟ್ಟಿಗೆ ಒತ್ತಡ ಹೇರಿದ್ದಾಳೆ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ, ಪತಿ ಸಲ್ಲಿಸಿರುವ ವಿಚ್ಛೇದನ ಅರ್ಜಿ ಮಾನ್ಯ ಮಾಡಲು ಅರ್ಹವಾಗಿದೆ ಎಂದು ಹೇಳಿ ಪ್ರಕರಣವನ್ನು ಇತ್ಯರ್ಥಪಡಿಸಿತು.

    ಜೂನ್ 30ರವರೆಗೆ ಲಾಕ್‌ಡೌನ್ ವಿಸ್ತರಣೆ; ಜೂನ್ 8ರಿಂದ ದೇವಸ್ಥಾನ, ಹೋಟೆಲ್ ‌ಓಪನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts