More

    ಉಚಿತ ಸೇವೆಗಳ ಸದ್ಬಳಕೆ ಮಾಡಿಕೊಳ್ಳಲಿ

    ರಾಮದುರ್ಗ: ಬಡವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿದ ರಾಜೇಂದ್ರ ಮುತ್ಯಾರು ಅವರ ಕಾರ್ಯ ಶ್ಲಾಘನೀಯ ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.

    ಪಟ್ಟಣದ ಡಾ. ರಾಜೇಂದ್ರ ಮುತ್ಯಾರು ಪುಣ್ಯಾಶ್ರಮ ಟ್ರಸ್ಟ್ ವತಿಯಿಂದ ಸ್ಟೇಟ್ ಸಂಯುಕ್ತ ಪಪೂ ಕಾಲೇಜು ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಹಿರಿಯ ವೈದ್ಯರಿಗೆ ವೈದ್ಯಾಮೃತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿ, ಬಡವರು ಉಚಿತ ಸೇವೆಗಳ ಸದ್ಬಳಕೆ ಮಾಡಿಕೊಂಡಲ್ಲಿ ಕಾರ್ಯಕ್ರಮದ ಉದ್ದೇಶ ಈಡೇರುತ್ತದೆ ಎಂದರು.

    ಸಾನ್ನಿಧ್ಯ ವಹಿಸಿದ್ದ ಡಾ. ರಾಜೇಂದ್ರ ಶಿವಯೋಗಿಗಳು ಮಾತನಾಡಿ, ಹಲವು ವರ್ಷಗಳಿಂದ ಟ್ರಸ್ಟ್ ಸಹಭಾಗಿತ್ವದಲ್ಲಿ ಬಡ ಜನತೆಗೆ ಉಚಿತ ಸಾಮೂಹಿಕ ವಿವಾಹ, ಬಡವರಿಗೆ ಆರ್ಥಿಕ ಸಹಾಯ ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಗುತ್ತಿದೆ ಎಂದರು. ಬಾಗಲಕೋಟೆಯ ಡಾ. ದೇವರಾಜ ಪಾಟೀಲ ಹಾಗೂ ಡಾ. ಶಿವಲೀಲಾ ಕಂಬಿ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿದರು.

    ವೈದ್ಯರಾದ ಡಾ. ಪಿ.ಎಂ ಆಪ್ಟೆ, ಡಾ. ಬಸವರಾಜ ದೊಡಮನಿ, ಡಾ. ಶಶಿಧರ ಪಾವಟೆ, ಡಾ. ಶಿವಲೀಲಾ ಕಂಬಿ, ಡಾ. ರಾಮಚಂದ್ರ ಬೀಳಗಿ, ಡಾ. ಬಸವರಾಜ ಮಾದನ್ನವರ, ಡಾ. ಬಾಪು ಕಾಖಂಡಕಿ, ಡಾ. ಸುಜಾತಾ ಕಾಖಂಡಕಿ, ಡಾ. ಬಸನಗೌಡ ಪಾಟೀಲ, ಡಾ. ಪಿ.ಎಚ್. ಕಲಾದಗಿಮಠ, ಡಾ. ಶಂಕ್ರಯ್ಯ ಬಬಲಾದಿಮಠ ಸೇರಿ ಇತರರಿಗೆ ವೈದ್ಯಾಮೃತ ಪ್ರಶಸ್ತಿ ನೀಡಲಾಯಿತು.

    ಧಾರವಾಡದ ಡಾ. ಜ್ಯೋತಿಪ್ರಕಾಶ ಸುಲ್ತಾನಪುರ, ಪ್ರಭು ಸರಗಣಾಚಾರಿ, ಡಾ. ಮೃತ್ಯುಂಜಯ ಅಣ್ಣಾನವರ, ಟಿಎಚ್‌ಓ ಡಾ. ನವೀನ ನಿಜಗುಲಿ, ಡಾ. ಪ್ರಕಾಶ ರಾಮನಗೌಡರ, ಡಾ. ಅರುಣ ಬೀಳಗಿ, ಡಾ. ಮಂಜುನಾಥ ಕುರುಡಗಿ, ಮಹೇಶ ಬೀಳಗಿ, ಡಾ. ಅಮೂಲ ಧೂತ, ಸಿದ್ಧು ಮೋಟೆ, ಶಿವಯೋಗಿ ಅಣ್ಣಾನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts