More

    ಆರೋಗ್ಯ ಸಂರಕ್ಷಣೆಗೆ ಸಮಯ ಮೀಸಲಿಡಿ

    ವಿಜಯಪುರ: ಆರೋಗ್ಯವೇ ಎಲ್ಲಕ್ಕಿಂತ ದೊಡ್ಡ ಭಾಗ್ಯವಾಗಿದೆ. ಉತ್ತಮ ಹವ್ಯಾಸಗಳಿಂದ ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಲು ಸಮಯ ಮೀಸಲಿಡಬೇಕು ಎಂದು ನಗರದ ಅನುಗ್ರಹ ಕಣ್ಣಿನ ಆಸ್ಪತ್ರೆ ನೇತ್ರತಜ್ಞ, ರಾಜ್ಯಪ್ರಶಸ್ತಿ ಪುರಸ್ಕೃತ ಡಾ.ಪ್ರಭುಗೌಡ ಲಿಂಗದಳ್ಳಿ ಚಬನೂರ ಹೇಳಿದರು.

    ಮಹಾರಾಷ್ಟ್ರದ ಪುಣೆ ನಗರದ ಬೋಸರಿಯ ಅಂಕುಶ ರಾವ್ ಸಭಾಗೃಹದಲ್ಲಿ ಇತ್ತೀಚೆಗೆ ನಮ್ಮವರು ತಂಡ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

    ಸಂಗೀತಗಾರ್ತಿ ನಂದಿನಿರಾವ್ ಗುಜಾರ್ ಬಾರಿಸು ಕನ್ನಡ ಡಿಂಡಿಮವ ಹಾಡುವ ಮೂಲಕ ಜನಮನ ರಂಜಿಸಿದರು. ನಮ್ಮವರು ತಂಡದ ಹೇಮಾ ಮಳಗಿ ಅವರು ರಚಿಸಿದ ಕನ್ನಡ ಕಲಿ ಪುಸ್ತಕವನ್ನು ಶಿವಲಿಂಗ ಧವಳೇಶ್ವರ, ಶ್ರೀಕಾಂತ ಹಾರಕೋಡೆ ಮತ್ತು ಚಂದ್ರಶೇಖರ ಗಾಣಿಗೇರ ಬಿಡುಗಡೆಗೊಳಿಸಿದರು. ಇದಕ್ಕೂ ಮುನ್ನ ನಮ್ಮವರು ತಂಡದ ಅಧ್ಯಕ್ಷ ಡಾ.ಬಸವರಾಜ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿದರು. ಚಲನಚಿತ್ರ ನಟ ನವೀನ ಶಂಕರ್, ನಟಿ ಅರ್ಚನಾ ಜೋಯಿಸ್ ಮತ್ತು ನಿರ್ದೇಶಕ ಶ್ರೀಕಾಂತ ಕಟಗಿ ಅವರನ್ನು ಸನ್ಮಾನಿಸಲಾಯಿತು. ಉಚಿತವಾಗಿ ವಿಶ್ವಾದ್ಯಂತ ಕನ್ನಡ ಕಲಿಸುತ್ತಿರುವ ಶಿಕ್ಷಕರಾದ ಟಿ.ವಿ.ಸದಾನಂದ, ಹೇಮಾ ಮಳಗಿ, ಶಾಂತಲಾ ಬಿರಾದಾರ ಹಾಗೂ ವಿದ್ಯಾ ಮದಲಿ, ವೀರಣಗೌಡ ಪಾಟೀಲ ಅವರನ್ನು ಗೌರವಿಸಲಾಯಿತು.

    ಖ್ಯಾತ ಕಲಾವಿದ ಗುಂಡಣ್ಣ ಡಿಗ್ಗಿ ಹಾಸ್ಯ ಚಟಾಕಿಗಳ ಮೂಲಕ ಜನಮನ ಗೆದ್ದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಹಿಳೆಯರಿಂದ ಜಾನಪದ ನೃತ್ಯ ಹಮ್ಮಿಕೊಳ್ಳಲಾಯಿತು. ಸಂತೋಷ ಹಿರೇಮಠ, ಪದ್ಮನಾಭ ಶೆಟ್ಟಿ, ಅಣ್ಣಾರಾವ್ ಬಿರಾದಾರ, ಗುರುರಾಜ ಚರಂತಿಮಠ, ವಿಲಾಸ ಮಡಿಗೇರಿ, ಬಿಂದುಮಾಧವ ದೇಸಾಯಿ, ಅವನಿ ದೇಸಾಯಿ, ಬಸವರಾಜ ಪಟ್ಟಣಶೆಟ್ಟಿ, ಮುರುಗೇಶ ಗಿರಿಸಾಗರ, ಅಮಿತ ಇನಾಮದಾರ, ಪವನ ನಾಯಕ, ಅನಿಲ ದೇವಸಮುದ್ರ, ಶ್ರೀಧರ ದೊಡ್ಡಮನಿ, ವೇಣು ಡಂಬಳ, ಪ್ರಶಾಂತ ಬಡಿಗೇರ, ಅನಿಲಕುಮಾರ, ಪರಾಗ ಮುಳುಗುಂದ, ಅರುಣ್ ಬಂದ, ಶರತ ಐರಾಣಿ ಇತರರಿದ್ದರು. ಅವಿನಾಶ ಹೊಸಮನಿ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts