More

    ಮಕ್ಕಳ ಸ್ನೇಹಿಯಾಗಲಿ ಗ್ರಂಥಾಲಯಗಳು

    ಮುಂಡರಗಿ: ಈಗಿನ ಗ್ರಂಥಾಲಯಗಳು ಡಿಜಿಟಲ್​ವುಯವಾಗಿವೆ. ಅವು ಮಕ್ಕಳ ಸ್ನೇಹಿ ಗ್ರಂಥಾಲಯ ಆಗಬೇಕು. ಗ್ರಂಥಾಲಯ ಮೇಲ್ವಿಚಾರಕರು ಸರಿಯಾಗಿ ಕಾರ್ಯನಿರ್ವಹಿಸಿ ಸರ್ಕಾರದ ಯೋಜನೆ ಯಶಸ್ವಿಗೊಳಿಸಬೇಕು. ತರಬೇತಿಯಲ್ಲಿ ಪಡೆದ ಮಾಹಿತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಾಪಂ ಇಒ ಡಾ. ಯುವರಾಜ ಹನಗುಂಡಿ ಹೇಳಿದರು.

    ಪಟ್ಟಣದ ತಾ.ಪಂ. ಸಾಮರ್ಥ್ಯಸೌಧದಲ್ಲಿ ಅಬ್ದುಲ್​ನಜೀರ್​ಸಾಬ್ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು, ಜಿ.ಪಂ. ಗದಗ, ತಾ.ಪಂ. ಮುಂಡರಗಿ ಸಹಯೋಗದಲ್ಲಿ ಮಕ್ಕಳ ಸ್ನೇಹಿ ಗ್ರಾಮೀಣ ಗ್ರಂಥಾಲಯ ಕುರಿತು ಗ್ರಂಥಾಲಯದ ಮೇಲ್ವಿಚಾರಕರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಕೈಪಿಡಿ ವಿತರಿಸಿ ಅವರು ಮಾತನಾಡಿದರು.

    ತಾ.ಪಂ .ಸಹಾಯಕ ನಿರ್ದೇಶಕ ವಿಶ್ವನಾಥ ಹೊಸಮನಿ ಹಾಗೂ ಮಂಜುಳಾ ಬಾರಕೇರ ಅವರು ತರಬೇತಿ ಆಯೋಜನೆ, ರೂಪುರೇಷ, ಉದ್ದೇಶ ಹಾಗೂ ಗ್ರಂಥಾಲಯ ಮಹತ್ವ ಕುರಿತು ಮಾತನಾಡಿದರು.

    ತರಬೇತಿ ಸಂಯೋಜಕ ಮಂಜುನಾಥ ಮುಧೋಳ, ಮಕ್ಕಳ ಸ್ನೇಹಿ ಗ್ರಂಥಾಲಯದ ಪರಿಕಲ್ಪನೆ ಮತ್ತು ಮಹತ್ವ, ಮಾನವ ಸಂಪನ್ಮೂಲ, ಓದುವ ಸಂಪನ್ಮೂಲ ಸಂಗ್ರಹ, ಚಟುವಟಿಕೆಗಳು, ಪತ್ರ ಬರೆಯುವುದು, ಗಟ್ಟಿ ಓದು, ಕಟ್ಟು ಕಟ್ಟು ಕಥೆ ಕಟ್ಟು, ಪುಸ್ತಕ ಜೋಡಣೆ ಮತ್ತು ಪ್ರದರ್ಶನ ಮಕ್ಕಳ ಹಕ್ಕುಗಳು, ಕಾಯ್ದೆಗಳು ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

    ಸಂಯೋಜಕಿ ಕೀರ್ತಿ ದೇಸಾಯಿ ಮಾತನಾಡಿದರು. ವಿಷಯ ನಿರ್ವಾಹಕ ಸಿ.ಬಿ. ಪಾಟೀಲ ಹಾಗೂ ಗ್ರಂಥಾಲಯ ಮೇಲ್ವಿಕಾರಕರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts