More

    ನ್ಯಾಯಾಂಗದ ಘನತೆ ಉಳಿಸಿ ಬೆಳೆಸಿ

    ಧಾರವಾಡ: ಯಾವುದೇ ವೃತ್ತಿಯ ಯಶಸ್ಸು ಶ್ರದ್ಧೆ, ಪರಿಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನದ ಮೇಲೆ ಅವಲಂಬಿತವಾಗಿರುತ್ತದೆ. ವಕೀಲರು ನ್ಯಾಯಾಂಗದ ಘನತೆ ಉಳಿಸಿ ಬೆಳೆಸಬೇಕು ಎಂದು ಹೈಕೋಟ್ ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ ಹೇಳಿದರು.
    ನಗರದ ವಕೀಲರ ಸಂಘದ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ವಕೀಲರ ವೆಲ್‌ೇರ್ ಂಡ್ ಟ್ರಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು.
    ವಕೀಲ ವೃತ್ತಿ ಅತ್ಯಂತ ಗೌರವಯುತವಾದುದು. ಜನರು ನ್ಯಾಯಾಂಗದ ಮೇಲೆ ಅಪಾರ ನಂಬಿಕೆ ಇರಿಸಿದ್ದಾರೆ. ನಿರಂತರ ಅಧ್ಯಯನ, ಪ್ರಾಮಾಣಿಕತೆ ಮತ್ತು ಕಕ್ಷಿದಾರರೊಂದಿಗೆ ಮಾನವೀಯ ನೆಲೆಯಲ್ಲಿ ವ್ಯವಹರಿಸುವ ಕ್ಷಮತೆ ಇದ್ದರೆ ವಕೀಲ ವೃತ್ತಿಯಲ್ಲಿ ಯಶಸ್ಸು  ಸಾಧ್ಯ. ಸಂಕಷ್ಟದಲ್ಲಿರುವ ವಕೀಲರ ಹಿತದೃಷ್ಟಿಯಿಂದ ವೆಲ್‌ೇರ್ ಂಡ್ ಟ್ರಸ್ಟ್ ಆರಂಭಿಸಿರುವುದು ಉತ್ತಮ ನಡೆ ಎಂದರು.
    ಇದೇವೇಳೆ ವಕೀಲರ ದೂರವಾಣಿ ಡೈರಿ ಬಿಡುಗಡೆಗೊಳಲಿಸಿದರು.
    ರಾಜ್ಯ ವಕೀಲರ ಪರಿಷತ್ ಸದಸ್ಯರಾದ ವಿ.ಡಿ. ಕಾಮರೆಡ್ಡಿ, ಆನಂದ ಮಗುದುಮ್, ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಿ.ಎಸ್. ಪೊಲೀಸ್‌ಪಾಟೀಲ, ಎನ್.ಆರ್. ಮಟ್ಟಿ, ಸದಾನಂದ ಮುಂದಿನಮನಿ, ಆರ್.ಎ್. ಚಿನ್ನಣ್ಣವರ, ಎ.ಎ. ದೊಡ್ಡಮನಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts