More

    ಅಂಚೆ ಪ್ರಭಾವಿ ಸಂಪರ್ಕ ಮಾಧ್ಯಮ

    ಬೈಲಹೊಂಗಲ: ವಿಶ್ವದಲ್ಲೇ ಭಾರತ ಹೆಚ್ಚು ಅಂಚೆ ಸೇವೆಗಳನ್ನು ಹೊಂದಿರುವ ರಾಷ್ಟ್ರವಾಗಿದ್ದು, ಪ್ರಪಂಚದ ಮೂಲೆ ಮೂಲೆಗೂ ವಿಶ್ವಾಸಾರ್ಹದಿಂದ ಮಾಹಿತಿ ತಲುಪಿಸುವ ಪ್ರಭಾವಿ ಸಂಪರ್ಕ ಮಾಧ್ಯಮವಾಗಿದೆ ಎಂದು ಪ್ರಧಾನ ಅಂಚೆ ಕಚೇರಿ ಅಂಚೆಪಾಲಕ ಸಿ.ಎಂ.ಕೇರಿಮಠ ಹೇಳಿದರು.

    ಪಟ್ಟಣದ ಪ್ರಧಾನ ಅಂಚೆ ಕಚೇರಿಯಲ್ಲಿ ಈಚೆಗೆ ಏರ್ಪಡಿಸಿದ್ದ ವಿಶ್ವ ಅಂಚೆ ದಿನ ಸಪ್ತಾಹದಲ್ಲಿ ಮಾತನಾಡಿ, 1874ರಲ್ಲಿ ಯುನಿವರ್ಸಲ್ ಪೋಸ್ಟಲ್ ಯುನಿಯನ್ ಹೆಸರಿನಿಂದ ಪ್ರಾರಂಭದ ಅಂಚೆ ಇಡೀ ವಿಶ್ವವನ್ನೇ ಆವರಿಸಿದೆ. ಗುಣಮಟ್ಟದೊಂದಿಗೆ ಪಾರದರ್ಶಕತೆ ಕಾಯ್ದುಕೊಂಡು ಗ್ರಾಹಕರ ಸಂತೃಪ್ತಿಗೆ ಕಾರಣವಾಗಿದೆ. ಅಂಚೆ ದಿನ ಪ್ರಯುಕ್ತ ಐದು ದಿನಗಳ ಕಾಲ ಅಂಚೆ ಇಲಾಖೆಯಲ್ಲಿ ಸಿಗುವ ಅತ್ಯವಶ್ಯಕ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

    ಅಂಚೆ ಸಹಾಯಕಿ ಭಾರತಿ ಜೀರೆ ಮಾತನಾಡಿದರು. ಆನಂದ ಮಾರಿಹಾಳಕರ, ಎಚ್.ಕೆ.ಸಿಂಗಣ್ಣವರ, ನಿಂಗಪ್ಪ ನೇಸರಗಿ, ಆರ್.ಜಿ.ಭೂತಾಳೆ, ಮೀನಾಕ್ಷಿ ಸೊಗಲದ, ರಶ್ಮಿ ಹೊಳಿ, ನಾಗೇಶ ತೋಟಗಿ, ಸಿದ್ಧಾರೂಢ ಭದ್ರಿ, ಬುಡೇನಸಾಬ್ ಶಿರಸಂಗಿ, ಎಂ.ಆರ್.ಮರಕಟ್ಟಿ, ಕೃಷ್ಣಮೂರ್ತಿ ಮಂಚಾಲಿ, ಹಣಮಂತ ರಾಜಪ್ಪಗೋಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts