More

    ಕೃತಕ ಬುದ್ಧಿಮತ್ತೆಯಿಂದ ಚಿತ್ರೋದ್ಯಮಕ್ಕೆ ಸಂಕಷ್ಟ

    ಉಡುಪಿ: ಕೃತಕ ಬುದ್ಧಿಮತ್ತೆಯಿಂದಾಗಿ ಹೆಚ್ಚಿನ ಸಂಖ್ಯೆಯ ಚಲನಚಿತ್ರ ಕಲಾವಿದರು ಉದ್ಯೋಗ ಕಳೆದುಕೊಳ್ಳಬಹುದು. ಇದು ಚಲನಚಿತ್ರೋದ್ಯಮದಲ್ಲಿ ಕೃತಕ ಬುದ್ಧಿಮತ್ತೆಯನ್ನು ‘ನೈತಿಕವಾಗಿ ಬಳಕೆ’ ಮಾಡಬೇಕಾದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಚಲನಚಿತ್ರ ನಿಮಾರ್ಪಕ ಅಭಯ ಸಿಂಹ ಹೇಳಿದರು.

    ಮಾಹೆಯ ಗಾಂಧಿಯನ್​ ಸೆಂಟರ್​ ಫಾರ್​ ಫಿಲಾಸಫಿಕಲ್​ ಆರ್ಟ್ಸ್​ ಅಂಡ್​ ಸೈನ್ಸಸ್​ ಆಶ್ರಯದಲ್ಲಿ ಫಿಲಂ ಎಸ್ಥೆಟಿಕ್ಸ್​ ಬಿಯಾಂಡ್​ ಕರಿಕ್ಯುಲಮ್​ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

    ಚಲನಚಿತ್ರವು ಅರ್ಥದ ಬಹು ಸಾಧ್ಯತೆಗಳನ್ನು ಹೊಂದಿರುವ ದೃಶ್ಯ ಮಾಧ್ಯಮವಾಗಿದೆ. ಹೊಸ ತಂತ್ರಜ್ಞಾನವು ಅದರ ಸೌಂದರ್ಯ ಮತ್ತು ಅನುಭವದ ಮೇಲೆ ಪರಿಣಾಮ ಬೀರುತ್ತದೆ. ನೈತಿಕ ಮಾನದಂಡಗಳನ್ನು ಹಿಡಿದುಕೊಂಡು ಅರ್ಥಪೂರ್ಣ ಸಿನಿಮಾ ಮಾಡುವುದು ಚಿತ್ರ ನಿಮಾರ್ಪಕರಿಗೆ ಸವಾಲಾಗಿದೆ. ಚಲನಚಿತ್ರಗಳು ಮಹಿಳೆ ಮತ್ತು ಹಿಂಸೆಯನ್ನು ಚಿತ್ರಿಸುವಲ್ಲಿ ಹೆಚ್ಚು ಸಂವೇದನಾಶೀಲವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ಜಿಸಿಪಿಎಎಸ್​ ಮುಖ್ಯಸ್ಥ ಪ್ರೊ.ವರದೇಶ್​ ಹಿರೇಗಂಗೆ, ಲೇಖಕರಾದ ಪ್ರೊ.ಮುರಳೀಧರ ಉಪಾದ್ಯ, ಪ್ರೊ.ಫಣಿರಾಜ್​, ನಟಿ ಮಾನಸಿ ಸುಧೀರ್​ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts