More

    `ಭಗವಾನ ಮಹಾವೀರರ ಜೀವನ- ಸಂದೇಶಗಳ ಚಿಂತನ

    ಧಾರವಾಡ: ಭಗವಾನ ಮಹಾವೀರ ಜೈನ ಪರಂಪರೆಯ ೨೪ನೇ ತೀರ್ಥಂಕರರು. ಅವರಗಿಂತ ಪೂರ್ವದಲ್ಲಿ ವೃಷಭನಾಥ, ನೇಮಿನಾಥ, ಪಾರ್ಶ್ವನಾಥರು ತಮ್ಮ ಉಪದೇಶಗಳ ಮೂಲಕ ಧರ್ಮವನ್ನು ಪ್ರವಧÀðಮಾನಗೊಳಿಸಿದರು. ಕ್ಷಮೆ, ವಿನಯ, ಸರಳತೆ ಮತ್ತು ಶುದ್ಧತೆಗಳು ಸಜ್ಜನರ ಸದ್ಗುಣಗಳಾಗಿವೆ ಎಂದು ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಹೇಳಿದರು.
    ಧಾರವಾಡ ಜೈನ ಮಿಲನ ವತಿಯಿಂದ ಡಿಮಾನ್ಸ್ನಲ್ಲಿ ಭಗವಾನ ಮಹಾವೀರ ಜಯಂತಿ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ `ಭಗವಾನ ಮಹಾವೀರರ ಜೀವನ ಮತ್ತು ಸಂದೇಶಗಳ ಕುರಿತು ಚಿಂತನ ಮತ್ತು ಚಿಕಿತ್ಸಾರ್ಥಿಗಳಿಗೆ ನೆನಪಿನ ಕಾಣಿಕೆ ವಿತರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ವಿಶೇಷ ಉಪನ್ಯಾಸ ನೀಡಿದ ಡಾ. ಭರಮಪ್ಪ ಭಾವಿ, ಕ್ರಿಸ್ತ ಪೂರ್ವ ೬ನೇ ಶತಮಾನ ಜಗತ್ತಿನ ಇತಿಹಾಸದಲ್ಲಿ ಹೊಸ ಮನ್ವಂತರದ ಕಾಲ. ಬುದ್ಧ ಸೇರಿ ೭ ಜನ ವಿಭೂತಿ ಪುರುಷರು ಭಾರತದ ನೆಲದಲ್ಲಿ ದರ್ಶನ ಮಾರ್ಗಗಳನ್ನು ಪ್ರಚುರಪಡಿಸಿದರು. ಮಹಾವೀರರು ತನ್ನಿಂದ ಕಿತ್ತುಕೊಳ್ಳಬಹುದಾದ ಎಲ್ಲವನ್ನೂ ತಾವೇ ತ್ಯಜಿಸಿದರು. ಮೋಕ್ಷ ಮಾರ್ಗವನ್ನು ತೋರಿಸುತ್ತ ಸ್ವತಃ ಅದೇ ಮಾರ್ಗದಲ್ಲಿ ನಡೆದರು ಎಂದರು.
    ಡಿಮ್ಹಾನ್ಸ್ ನಿರ್ದೇಶಕ ಡಾ. ಅರುಣಕುಮಾರ ಸಿ. ಮಾತನಾಡಿ, ಮಹಾವೀರರ ಸಂದೇಶಗಳಾದ ಸತ್ಯ, ಶಾಂತಿ ಮತ್ತು ಕರುಣೆಗಳು ಸಾರ್ವಕಾಲಿಕ ಸತ್ಯಗಳಾಗಿವೆ. ಅವುಗಳನ್ನು ಗಾಂಽÃಜಿ ಪಾಲಿಸುತ್ತಿದ್ದರು ಎಂದರು.
    ಜೆಎಸ್‌ಎಸ್ ಐಟಿಐ ಕಾಲೇಜ್ ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಕನ್ನಡ ಉಪನ್ಯಾಸಕ ಡಾ. ಜಿನದತ್ತ ಹಡಗಲಿ, ಧಾರವಾಡ ಜೈನ ಮಿಲನನ ಅಧಕ್ಷೆ ಸುಜಾತಾ ಹಡಗಲಿ, ಪದಾಽಕಾರಿಗಳಾದ ವಾಣಿಶ್ರೀ ಪ್ರಸಾದ, ಸುನಂದಾ ವರೂರ, ಸಂಗೀತಾ ಉಪಾಧ್ಯೆ, ಡಿಮ್ನಾನ್ಸ್ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts