More

    ವಿಶ್ವಕ್ಕೇ ಸಂಸ್ಕಾರ ನೀಡುವ ಕೃತಿ ರಾಮಾಯಣ

    ಶಿವಮೊಗ್ಗ: ಮಹರ್ಷಿ ವಾಲ್ಮೀಕಿ ರಚನೆಯ ರಾಮಾಯಣ ಕೃತಿ ವಿಶ್ವಕ್ಕೇ ಸಂಸ್ಕಾರ ನೀಡುವಲ್ಲಿ ಯಶಸ್ವಿಯಾಗಿದೆ. ಸೂರ್ಯ ಚಂದ್ರರು ಇರುವವರೆಗೂ ವಾಲ್ಮೀಕಿ ಹೆಸರು ಅಜರಾಮರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

    ಜಿಲ್ಲಾಡಳಿತ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಶನಿವಾರ ವಾಲ್ಮೀಕಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಮಾಯಣ ಕೃತಿ ಜಾತಿ, ಭಾಷೆ ಧರ್ಮದ ಎಲ್ಲೆಯನ್ನೂ ಮೀರಿ ವಿಶ್ವದಾದ್ಯಂತ ಪರಿಚಿತಗೊಂಡಿದೆ ಎಂದರು.

    ವಿಶ್ವದ ಯಾವುದೇ ಗ್ರಂಥಾಲಯಗಳಲ್ಲಿ ದೊರೆಯಬಹುದಾದ ವಿರಳ ಕೃತಿಗಳಲ್ಲಿ ಮೌಲಿಕ ಕೃತಿಯಾದ ರಾಮಾಯಣವೂ ಒಂದು. ರಾಮಾಯಣದಲ್ಲಿ ಬರುವ ಪ್ರತಿ ಪಾತ್ರವೂ ವೈಶಿಷ್ಟ್ಯೂರ್ಣ, ಜೀವಂತಿಕೆಯಿಂದ ಕೂಡಿದೆ. ಇಲ್ಲಿನ ಭವ್ಯ ಪರಂಪರೆ, ಸಂಸ್ಕೃತಿಯನ್ನು ವಾಲ್ಮೀಕಿ ವಾಸ್ತವಿಕವಾಗಿ ಚಿತ್ರಿಸಿದ್ದಾರೆ. ಓದುಗರಿಗೆ ಪ್ರತಿ ಸಂದರ್ಭದಲ್ಲೂ ರಾಮಾಯಣ ವಿಶೇಷ ಅನುಭವ ನೀಡುತ್ತದೆ ಎಂದರು.

    ವಾಲ್ಮೀಕಿ ಕೇವಲ ವ್ಯಕ್ತಿ ಮಾತ್ರವಲ್ಲ. ಅವರು ವಿದ್ವತ್ಪೂರ್ಣ ವ್ಯಕ್ತಿಗಳಲ್ಲಿ ಅಗ್ರಗಣ್ಯರು ಎಂದು ದಾಸ ಶ್ರೇಷ್ಟರೇ ಬಣ್ಣಿಸಿದ್ದಾರೆ. ವಾಲ್ಮೀಕಿ ರಾಮಾಯಣದಲ್ಲಿ ಪ್ರಸ್ತಾಪಿಸಿರುವ ವಿಷಯಗಳು ವಿಶ್ವವನ್ನೇ ಒಗ್ಗೂಡಿಸಿವೆ. ರಾಮಾಯಣ ಎಲ್ಲರಲ್ಲೂ ಸಂಸ್ಕಾರ, ಅರಿವು ಹೆಚ್ಚಿಸುವುದಲ್ಲದೆ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ ಎಂದು ಹೇಳಿದರು.

    ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಭದ್ರಾ ಕಾಡಾ ಅಧ್ಯಕ್ಷೆ ಕೆ.ಬಿ.ಪವಿತ್ರಾ ರಾಮಯ್ಯ, ಉಪ ಮೇಯರ್ ಸುರೇಖಾ ಮುರಳೀಧರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಪಂ ಸಿಇಒ ಎಂ.ಎಲ್.ವೈಶಾಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts