More

    ಉದ್ಧವ್ ಠಾಕ್ರೆ ಹೇಳಿಕೆಗೆ ಆಕ್ರೋಶ

    ವಿಜಯಪುರ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
    ಕರವೇ ನಗರ ಘಟಕದ ಅಧ್ಯಕ್ಷ ಯಾಜ ಕಲಾದಗಿ ಮಾತನಾಡಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬೆಳಗಾವಿ ವಿಚಾರದಲ್ಲಿ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಅನಗತ್ಯವಾಗಿ ಭಾಷಾ ಸಾಮರಸ್ಯ ಕದಡುವ ಕೆಲಸಕ್ಕೆ ಕೈ ಹಾಕುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕುಂಬಾರ ಮಾತನಾಡಿ, ಕನ್ನಡ ನೆಲದಲ್ಲಿ ಎಂಇಎಸ್ ಸಂಘಟನೆಗೆ ಬೆಂಬಲ ನೀಡುತ್ತಿರುವ ಜನಪ್ರತಿನಿಧಿಗಳ ಕ್ರಮ ಸರಿಯಲ್ಲ. ಕನ್ನಡಿಗರು ಹಾಗೂ ಮರಾಠಿಗರ ಮಧ್ಯೆ ಭಾಷಾ ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಕರವೇ ಯುವ ಘಟಕದ ಜಿಲ್ಲಾಧ್ಯಕ್ಷ ಅಶೋಕ ಹಾರಿವಾಳ, ಜಿಲ್ಲಾ ಕಾರ್ಯದರ್ಶಿ ದಸ್ತಗೀರ ಸಾಲೋಟಗಿ, ಮಹಿಳಾ ಘಟಕದ ಮುಖಂಡೆ ಕವಿತಾ ಹಿರೇಮಠ, ಎಚ್.ಎಸ್.ಕಬಾಡೆ, ವಿನೋದ ದಳವಾಯಿ, ರಾಜೇಂದ್ರಸಿಂಗ ಹಜೇರಿ, ಮಲ್ಲು ಮಡಿವಾಳರ, ಸವಿತಾ ಭಜಂತ್ರಿ, ರಂಗಮ್ಮ ಈಳಗೇರಿ, ನಸೀಮ ರೋಜಿಂದಾರ, ಸಾಧಿಕ ಜಾನ್ವೇಕರ, ಬಸವರಾಜ ಬಿ.ಕೆ., ರಜಾಕ ಕಾಖಂಡಕಿ, ಮಲ್ಲು ಮದರಿ , ಸಂತೋಷ ಮಡಿಕೇಶ್ವರ, ಸಂಗು ಮ್ಯಾಗೇರಿ, ಸಂತೋಷ ಹಿರೇಕುರಬರ, ಸಂದೀಪ ಮಡಿಕೇಶ್ವರ, ಡಿ.ಎಸ್.ಪೀರಜಾದೆ, ದಸ್ತಗೀರ ಶಾನೆವಾಲೆ ಮುಂತಾದವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts