ಪುಣೆ: ಓಮಿಕ್ರಾನ್ ಹೊಸ ತಳಿಯ ಮತ್ತೆರಡು ಸೋಂಕು ಪತ್ತೆಯಾಗಿದ್ದು, ಭಾರೀ ಆತಂಕ ಸೃಷ್ಟಿಸಿದೆ.
ಕೋವಿಡ್ -19 ಹಾಗೂ ಓಮಿಕ್ರಾನ್ ಹೊಸ ರೂಪಾಂತರಿ ವೈರಸ್ ಬಿಎ.4 ಮತ್ತು ಬಿಎ.5 ಸೋಂಕು ತಗುಲಿರುವುದನ್ನು ಶನಿವಾರ ಮಹಾರಾಷ್ಟ್ರ ಆರೋಗ್ಯಾಧಿಕಾರಿಗಳು ಖಚಿತಪಡಿಸಿದ್ದು, 7 ಮಂದಿಗೆ ತಗುಲಿದೆ ಎಂದು ಹೇಳಿದ್ದಾರೆ.
ಆರೋಗ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿರುವ ಡಾ.ಪ್ರದೀಪ್ ವ್ಯಾಸ್ ಅವರು, ಇನ್ನೂ ಹಲವರಲ್ಲಿ ಸೋಂಕು ತಗುಲಿದೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಲು ಎಲ್ಲಾ ಜಿಲ್ಲೆಗಳಿಗೂ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಹೈದರಾಬಾದ್ನಲ್ಲಿ ಮೊದಲ ಬಾರಿಗೆ ಇದರ ಲಕ್ಷಣ ಕಂಡುಬಂದಿತ್ತು. ಒಬ್ಬ ವ್ಯಕ್ತಿಯಲ್ಲಿ ಸೋಂಕು ದೃಢವಾಗಿರುವುದು ಪತ್ತೆಯಾಗಿತ್ತು. ದಕ್ಷಿಣ ಆಫ್ರಿಕಾದಿಂದ ಬಂದ ಈತನಿಂದ ಇತರರಿಗೂ ಹರಡಿದೆ. ತಮಿಳುನಾಡು ಮತ್ತು ತೆಲಂಗಾಣದಲ್ಲೂ ಈ ಸೋಂಕು ಪತ್ತೆಯಾಗಿದೆ ಎಂದಿದ್ದಾರೆ. ಸದ್ಯ ಸೋಂಕು ತಗುಲಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.ಇದು ಯಾವ ರೀತಿ ಪರಿಣಾಮ ಬೀರಲಿದೆ ಎಂದು ಇನ್ನಷ್ಟೇ ತಿಳಿಯಬೇಕಿದೆ ಎಂದು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)