More

    ಕರೊನಾ ಹಾವಳಿ ನಡುವೆಯೂ ಮಹಾರಾಷ್ಟ್ರದಲ್ಲಿ ಭಾರಿ ರಾಜಕೀಯ ಬಿಕ್ಕಟ್ಟು

    ಮುಂಬೈ: ಮಹಾರಾಷ್ಟ್ರದ ವಿಧಾನ ಪರಿಷತ್​ನ 9 ಸ್ಥಾನಗಳಿಗೆ ಶೀಘ್ರವೇ ಚುನಾವಣೆ ನಡೆಸುವಂತೆ ರಾಜ್ಯಪಾಲರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

    ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಪರಿಹರಿಸಲು ಕೂಡಲೇ ಆಯೋಗ ಚುನಾವಣೆ ನಡೆಸಬೇಕು ಎಂದು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಕೋರಿದ್ದಾರೆ.

    ಮಹಾರಾಷ್ಟ್ರದ ವಿಧಾನ ಪರಿಷತ್​ನ 9 ಸ್ಥಾನಗಳು ಏ.24ರಿಂದ ತೆರವಾಗಿವೆ. ಅಲ್ಲದೆ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರು 2 ಸದನದ ಸದ್ಯರಲ್ಲದ ಹಿನ್ನೆಲೆಯಲ್ಲಿ ಅವರು ಮೇ 27ಕ್ಕೂ ಮೊದಲು ಯಾವುದಾದರೂ ಒಂದು ಸದನದ ಸದ್ಯರಾಗಬೇಕಿದೆ. ಇಲ್ಲದಿದ್ದರೆ ರಾಜಕೀಯ ಬಿಕ್ಕಟ್ಟು ಉಲ್ಬಣಗೊಳ್ಳಲಿದೆ.

    ಚುನಾವಣಾ ಮುಂದೂಡಿಕೆ: ಮಹಾರಾಷ್ಟ್ರದಲ್ಲಿ ಕರೊನಾ ಸೋಂಕು ತೀವ್ರವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ವಿಧಾನ ಪರಿಷತ್​ನ 9 ಸ್ಥಾನಗಳ ಚುನಾವಣೆಯನ್ನು ತಡೆ ಹಿಡಿದಿತ್ತು. ಇದರಿಂದ ವಿಚಲಿತಗೊಂಡು ಸಿಎಂ ಉದ್ಧವ್​ ಠಾಕ್ರೆ ಅವರು ರಾಜ್ಯಪಾಲರಿಗೆ ಮನವಿ ಮಾಡಿ ಚುನಾವಣೆ ನಡೆಸುವಂತೆ ಕೋರಿದ್ದರು. ಆದರೆ ರಾಜ್ಯಪಾಲರು ಮನ್ನಣೆ ನೀಡಿರಲಿಲ್ಲ. ಹೀಗಾಗಿ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದ್ದ ಸಿಎಂ ಉದ್ಧವ್​ ಠಾಕ್ರೆ ಅವರು ಏ.29ರ ಬುಧವಾರ ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿ ರಾಜಕೀಯ ಬಿಕ್ಕಟ್ಟು ನಿವಾರಿಸುವಂತೆ ಕೋರಿದ್ದರು. ಪ್ರಧಾನಿ ಮೋದಿ ಅವರು ಸ್ಪಂದಿಸಿದ್ದರು. ನಂತರ ರಾಜ್ಯಪಾಲರು ಚುನಾವಣಾ ಆಯೋಗಕ್ಕೆ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದಾರೆ. (ಏಜೆನ್ಸೀಸ್​)

    ತನ್ನ ಹುಟ್ಟುಹಬ್ಬಕ್ಕೆ ಅಪರಿಚಿತ ಗ್ರಾಹಕ ಕೇಕ್​ ಆರ್ಡರ್​ ಮಾಡಿದಾಗ… ಚೀನಾದಲ್ಲೊಂದು ಮನಕಲಕುವ ದೃಶ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts