More

    ರಸ್ತೆ ನಿಯಮ ತಪ್ಪದೆ ಪಾಲಿಸಿ

    ಮಹಾಲಿಂಗಪುರ: ನಿಮ್ಮ ಮತ್ತು ಕುಟುಂಬದವರ ರಕ್ಷಣೆಗಾಗಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಂಚರಿಸಬೇಕು ಎಂದು ಠಾಣಾಧಿಕಾರಿ ಗಿರಮಲ್ಲಪ್ಪ ಉಪ್ಪಾರ ಹೇಳಿದರು.

    ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿ ಸ್ಥಳೀಯ ಪೊಲೀಸ್ ಠಾಣೆ, ಲಯನ್ಸ್ ಕ್ಲಬ್ ಆಫ್ ಗ್ರೀನ್ ಬೇಸಿನ್, ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಕೀಲರ ಬಳಗದ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಮತ್ತು ರಸ್ತೆ ಸುರಕ್ಷತಾ ಜಾಗೃತಿ ಸಪ್ತಾಹ ಜಾಥಾದಲ್ಲಿ ಮಾತನಾಡಿದರು.

    ವಾಹನ ಚಲಾಯಿಸುವಾಗ ಎಲ್ಲ ಕಾಗದ ಪತ್ರಗಳನ್ನು ಇಟ್ಟುಕೊಳ್ಳಬೇಕು. ಕಾರು ಚಾಲಕರು ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿರಬೇಕು. ಸಂಚಾರ ನಿಯಮಗಳನ್ನು ಅನುಸರಿಸಿ ವಾಹನ ಚಲಾಯಿಸಬೇಕು. ಏಕಮುಖ ರಸ್ತೆಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಬಾರದು. ಕಬ್ಬು ಸಾಗಿಸುವ ಟ್ರಾೃಕ್ಟರ್‌ಗಳಿಗೆ ನಂಬರ್ ಪ್ಲೇಟ್, ಹಿಂದೆ ಮತ್ತು ಮುಂದೆ ಕೆಂಪು ಬಣ್ಣದ ರೇಡಿಯಂ, ಎರಡೂ ಬದಿಗೆ ಹಳದಿ ಬಣ್ಣದ ರೇಡಿಯಂ ಇರಬೇಕು. ಚಾಲಕ, ಡ್ರೈವಿಂಗ್ ಲೈಸನ್ಸ್ ಹಾಗೂ ಇನ್ಶೂರೆನ್ಸ್ ಹೊಂದಿರಬೇಕು. ಜೋರಾಗಿ ಟೇಪ್ ರಿಕಾರ್ಡ್‌ರ ಹಚ್ಚಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡಬಾರದು. ಮದ್ಯಪಾನ ಮಾಡಿ ವಾಹನ ಓಡಿಸಬಾರದು. ಜನರು ಸರಗಳ್ಳರ ಬಗ್ಗೆ ಎಚ್ಚರವಾಗಿರಬೇಕು. ಮನೆ ಬಿಟ್ಟು ಬೇರೆ ಊರಿಗೆ ಹೋಗುವವರು ಕಡ್ಡಾಯವಾಗಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.

    ಇದಕ್ಕೂ ಮುನ್ನ ರಸ್ತೆ ಸುರಕ್ಷತೆ ಬಿಂಬಿಸುವ ನಾಮಲಕಗಳನ್ನು ಹಿಡಿದು ಪಟ್ಟಣದ ರಾಣಿ ಚನ್ನಮ್ಮ ವೃತ್ತದಿಂದ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಡಬಲ್ ರಸ್ತೆ, ನಡುಚೌಕಿ, ಜವಳಿ ಬಜಾರ್ ಮುಖಾಂತರ ಮರಳಿ ಠಾಣೆಯವರೆಗೆ ಬೈಕ್ ರ‌್ಯಾಲಿ ನಡೆಸಲಾಯಿತು.

    ಲಯನ್ಸ್ ಕ್ಲಬ್ ವತಿಯಿಂದ ಪೊಲೀಸರು ಹಾಗೂ ಅವರ ಕುಟುಂಬದವರಿಗೆ ಮಧುಮೇಹ ಮತ್ತು ರಕ್ತದೊತ್ತಡ (ಬಿ.ಪಿ.) ಉಚಿತ ಪರೀಕ್ಷೆ ನಡೆಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಎಸ್. ಚನ್ನಾಳ, ಕಾರ್ಯದರ್ಶಿ ಎಸ್.ಎಸ್. ಉಳ್ಳೇಗಡ್ಡಿ, ಖಜಾಂಚಿ ಎಚ್.ಎ. ವಡ್ಡರ, ನ್ಯಾಯವಾದಿ ಸಿದ್ಧಲಿಂಗೇಶ್ವರ ನಕಾತಿ, ಕಾನಿಪ ಅಧ್ಯಕ್ಷ ಎಸ್.ಎಸ್. ಈಶ್ವರಪ್ಪಗೋಳ, ಡಾ.ವಿಶ್ವನಾಥ ಗುಂಡಾ, ಡಾ.ಅಶೋಕ ದಿನ್ನಿಮನಿ, ಡಾ.ಎಂ.ಎಂ. ಮೇದಾರ, ಡಾ.ಜೆ.ಎನ್. ಯಕ್ಸಂಬಿ, ಸಂಜು ಶಿರೋಳ, ವಿಷ್ಣುಗೌಡ ಪಾಟೀಲ, ರಾಜು ಕೋಳಿಗುಡ್ಡ, ಸಿದ್ದು ನಕಾತಿ, ಎಎಸ್‌ಐ ಎಸ್.ಬಿ. ಹಿರೇಕುರುಬರ, ಸಾಗರ ಅವರಾದಿ, ಜಗದೀಶ ಪಾಟೀಲ, ಎಂ.ಎಂ. ಬೆಳಕುಡ, ಮಂಜು ಸಣ್ಣಕ್ಕಿ, ಶ್ರೀಶೈಲ ಔರಸಂಗ, ಲೋಕೇಶ ಹುಕುಮನವರ, ವೈ.ವೈ. ಗಚ್ಚನ್ನವರ ಹಾಗೂ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts