More

    10 ಆಕ್ಸಿಜನ್ ಬೆಡ್ ಶೀಘ್ರ ಅಳವಡಿಕೆ

    ಮಹಾಲಿಂಗಪುರ: ಕರೊನಾ ನಿಯಂತ್ರಣಕ್ಕಾಗಿ ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಈ ವಾರದಿಂದ ರೋಗಿಗಳಿಗಾಗಿ ಎರಡು ಆಂಬುಲೆನ್ಸ್ ಪ್ರಾರಂಭಿಸಿದ್ದೇವೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

    ರೋಗಿಗಳಿಗೆ, ಭಿಕ್ಷುಕರಿಗೆ ಹಾಗೂ ಅಮಾಯಕರಿಗೆ ನಿತ್ಯ 500 ಆಹಾರದ ಕಿಟ್ ನೀಡುತ್ತಿದ್ದೇವೆ. ಆಕ್ಸಿಜನ್ ಬೆಡ್‌ಗಳ ಕೊರತೆ ಮನಗಂಡು ಬನಹಟ್ಟಿಯಲ್ಲಿ 10 ತಾತ್ಕಾಲಿಕ ಆಕ್ಸಿಜನ್ ಬೆಡ್ ತಯಾರು ಮಾಡಿದ್ದೇವೆ. ಗೋದಾವರಿ ಸಕ್ಕರೆ ಕಾರ್ಖಾನೆಯವರಿಗೆ 10 ಆಕ್ಸಿಜನ್ ಬೆಡ್ ಕೊಡಲು ಹೇಳಿದ್ದು, ಶೀಘ್ರದಲ್ಲೇ ಮಹಾಲಿಂಗಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಅಳವಡಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಗ್ರಾಮಗಳಲ್ಲಿ ಹಾಗೂ ಪಟ್ಟಣಗಳಲ್ಲಿ ಮನೆ ಮನೆಗೆ ತೆರಳಿ ಔಷಧ ಕಿಟ್ ವಿತರಣೆ ಮಾಡಿದ್ದರಿಂದ ಕರೊನಾ ಕಡಿಮೆಯಾಗುತ್ತಿದೆ. ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಲಾಗುವುದು. ಕರೊನಾ ಶೂನ್ಯ ಮಟ್ಟಕ್ಕೆ ಇಳಿಸುವುದೆ ನಮ್ಮ ಗುರಿ ಎಂದರು.

    ಮುಖಂಡರಾದ ಬಸನಗೌಡ ಪಾಟೀಲ, ಮಹಾಲಿಂಗ ಕುಳ್ಳೋಳ್ಳಿ, ಜಿ.ಎಸ್.ಗೊಂಬಿ, ಶಿವಾನಂದ ಅಂಗಡಿ, ಮನೋಹರ ಶಿರೋಳ, ಶೇಖರ ಅಂಗಡಿ, ಪ್ರಕಾಶ ಅರಳಿಕಟ್ಟಿ, ಶಿವಬಸು ಗೌಂಡಿ, ಶಿವಲಿಂಗ ಘಂಟಿ, ರಾಜು ಚಮಕೇರಿ, ಚನಬಸು ಯರಗಟ್ಟಿ, ಭೀಮಶಿ ಗೌಂಡಿ, ಶಂಕರಗೌಡ ಪಾಟೀಲ, ಆನಂದ ಖೋತ.ಬಸವರಾಜ ಚಮಕೇರಿ .ಮಹಾಲಿಂಗಪ್ಪ ಮುದ್ದಾಪುರ, ಶಿವಾನಂದ ಹುಣಶ್ಯಾಳ, ವಿಕ್ರಮ ಕುಳ್ಳೂರ ಅನೇಕರು ಇದ್ದರು.

    ಪಾವರ್‌ಲೂಮ್ ನೇಕಾರರಿಗೂ ಪರಿಹಾರ ಪ್ಯಾಕೇಜ್ ನೀಡಬೇಕೆಂದು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇವೆ. ಮುಂದಿನ ದಿನಗಳಲ್ಲಿ ಪ್ಯಾಕೇಜ್ ನೀಡುವುದಾಗಿ ಹೇಳಿದ್ದಾರೆ. ಕೆಎಚ್‌ಡಿಸಿ ನೇಕಾರರು ಈಗ ಸಂತೋಷದಿಂದಿದ್ದಾರೆ. ಅವರ ಮಜೂರಿ ಹೆಚ್ಚಿಸಲಾಗಿದೆ. ಕರೊನಾ ನಿವಾರಣೆಯಾದ ನಂತರ ಅವರು ನೇಯ್ದ ಬಟ್ಟೆಗಳ ಬೆಲೆ ಹೆಚ್ಚಿಗೆ ಮಾಡಿ ವಿದ್ಯಾ ವಿಕಾಸ ಯೋಜನೆಯಡಿ ಖರೀದಿಸಲಾಗುವುದು.
    ಸಿದ್ದು ಸವದಿ ತೇರದಾಳ ಶಾಸಕ

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts