More

    ಸೇವಾಸಿಂಧು ವೆಬ್‌ಸೈಟ್ ಆರಂಭಿಸಿ

    ಮಹಾಲಿಂಗಪುರ: ರಾಜ್ಯ ಸರ್ಕಾರ ಕಟ್ಟಡ ಕಾರ್ಮಿರಿಕಗಾಗಿ ಯಾವುದೇ ಸರ್ಕಾರಿ ಸೇವೆಯ ಲಾನುಭವಿಯಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಸಿದ್ದ ಸೇವಾ ಸಿಂಧು ವೆಬ್‌ಸೈಟ್ ಬಂದಾಗಿರುವುದನ್ನು ಸರಿಪಡಿಸಬೇಕೆಂದು ಸರ್.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದವರು ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದಾರೆ.

    ಈ ಬಗ್ಗೆ ಇಲಾಖೆಗೆ ಬರೆದ ಪತ್ರವನ್ನು ಪುರಸಭೆ ಕಚೇರಿ ವ್ಯವಸ್ಥಾಪಕ ರಾಘು ನಡುವಿನಮನಿ ಅವರಿಗೆ ಸಲ್ಲಿಸಿದರು. ಅಧ್ಯಕ್ಷ ಅರ್ಜುನ ಬಂಡಿವಡ್ಡರ ಮಾತನಾಡಿ, ವೈಬ್‌ಸೈಟ್ ಕಾರ್ಯವೈಖರಿ ನೋಡಿದರೆ ಇದು ಕಾಟಾಚಾರದ ಪ್ರಕ್ರಿಯೆ ಎಂಬತೆ ಭಾಸವಾಗುತ್ತಿದೆ. ತುಂಬಾ ದಿನಗಳಿಂದ ರಾಜ್ಯಾದ್ಯಂತ ವೆಬ್‌ಸೈಟ್ ಸ್ಥಗಿತಗೊಂಡಿದೆ. ಇದರಿಂದ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಕೊಂಡಿಯೇ ಕಳಚಿದಂತಾಗಿದೆ. ತಿಂಗಳಲ್ಲಿ 4 ದಿನ ಕಾರ್ಯ ನಿರ್ವಹಿಸಿ ಮೂರು ವಾರ ಸ್ಥಗಿತಗೊಂಡಿದೆ. ಕೇವಲ ತಾಂತ್ರಿಕ ದೋಷದ ನೆಪ ಹೇಳಿ ಸ್ಥಗಿತಗೊಳಿಸುವುದು ಸರಿಯಲ್ಲ. ಬಹುತೇಕ ಜನರ ಆಧಾರ್ ಕಾರ್ಡ್ ಸಮಸ್ಯೆ ಇದೆ. ಆಧಾರ್ ಕೇಂದ್ರಗಳೂ ಸ್ಥಗಿತಗೊಂಡಿವೆ. ಒಟಿಪಿ ಸಮಸ್ಯೆಯೂ ಜಾಸ್ತಿ ಇದೆ. ಕಾರ್ಮಿಕ ಕಾರ್ಡ್ ರಿನಿವಲ್, ಶಿಷ್ಯವೇತನ ಹಾಗೂ ಇತರ ಪರಿಹಾರಗಳನ್ನು ಪಡೆಯಲು ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸ್ವಲ್ಪ ಬದಲಾವಣೆ ಮಾಡಿಕೊಂಡು ಒಟಿಪಿ ಸಿಸ್ಟಂ ಸರಳೀಕರಣಗೊಳಿಸಬೇಕು. ಆದಷ್ಟು ಬೇಗನೇ ಎಲ್ಲ ಸಿದ್ಧತೆಯೊಂದಿಗೆ ಸೇವಾ ಸಿಂಧು ವೈಬ್‌ಸೈಟ್ ಆರಂಭಗೊಳ್ಳಬೇಕು. ಆದ್ದರಿಂದ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ವೈಬ್‌ಸೈಟ್ ರಿಪೇರಿ ಮಾಡಿ ಚಾಲ್ತಿಗೊಳಿಸಬೇಕು ಎಂದು ಆಗ್ರಹಿಸಿದರು.

    ಬಂದು ಪಕಾಲಿ, ಟಿ.ಕೆ. ಬಂಡಿವಡ್ಡರ, ಶ್ರೀಶೈಲ ದೊಡಮನಿ, ಮಧು ಮಾವಿನಹಿಂಡಿ, ಚನ್ನಪ್ಪ ಮುಖೆನ್ನವರ, ಯಂಕಪ್ಪ ಬಂಡಿವಡ್ಡರ ಮುಂತಾದವರು ಇದ್ದರು.



    ಸೇವಾಸಿಂಧು ವೆಬ್‌ಸೈಟ್ ಆರಂಭಿಸಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts