More

    ಮಹಾಲಿಂಗಪುರ ಪುರಸಭೆ ಸದಸ್ಯನಿಂದ ಧರಣಿ

    ಮಹಾಲಿಂಗಪುರ: ತಮ್ಮ ವಾರ್ಡ್‌ನಲ್ಲಿ ಬೋರ್‌ವೆಲ್ ಕೆಟ್ಟಿದ್ದನ್ನು ಸರಿಪಡಿಸುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಪುರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆಪಾದಿಸಿ ಸ್ಥಳೀಯ ವಾರ್ಡ್ ನಂ.7ರ ಸದಸ್ಯ ರವಿ ಜವಳಗಿ ಶನಿವಾರ ಪುರಸಭೆ ಆವರಣದಲ್ಲಿ ಧರಣಿಗೆ ಮುಂದಾದರು.

    ಪುರಸಭೆಯಲ್ಲಿ ನನ್ನ ಮಾತಿಗೆ ಕವಡೆ ಕಿಮ್ಮತ್ತು ನೀಡುತ್ತಿಲ್ಲ. ವಾರ್ಡ್‌ನಲ್ಲಿ ಹಲವಾರು ದಿನಗಳಿಂದ ನೀರಿನ ಸಮಸ್ಯೆಯಾಗಿದ್ದು, ನಿವಾಸಿಗಳು ಪ್ರತಿದಿನ ನನ್ನ ಮನೆಗೆ ಆಗಮಿಸಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಬೋರ್‌ವೆಲ್ ದುರಸ್ತಿ ಮಾಡುವಂತೆ ಅನೇಕ ಬಾರಿ ತಿಳಿಸಿದ್ದರೂ ಸರಿಪಡಿಸುತ್ತಿಲ್ಲ. ಅಧಿಕಾರಿಗಳು ತಮ್ಮ ಆಪ್ತ ಸದಸ್ಯರ ವಾರ್ಡ್‌ಗಳಲ್ಲಿ ಕೂಡಲೇ ಕೆಲಸ ಪ್ರಾರಂಭಿಸುತ್ತಾರೆ. ಆದರೆ, ನನ್ನ ವಾರ್ಡ್‌ನಲ್ಲಿ ಅನಗತ್ಯ ವಿಳಂಬ ಮಾಡುತ್ತಾರೆ. ವಾರ್ಡ್‌ನಲ್ಲಿ 4ಕ್ಕಿಂತ ಹೆಚ್ಚು ಮರ್ಕ್ಯೂರಿ ಬಲ್ಬ್‌ಗಳು ಕಳ್ಳತನವಾಗಿದ್ದು, ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದು ರವಿ ಜವಳಗಿ ಅಸಮಾಧಾನ ವ್ಯಕ್ತಪಡಿಸಿದರು.

    ಮುಖ್ಯಾಧಿಕಾರಿ ಎಚ್.ಎಸ್. ಚಿತ್ತರಗಿ ಮಾತನಾಡಿ, ಈಗಾಗಲೇ ವಾರ್ಡ್‌ನಲ್ಲಿ ಬೋರ್‌ವೆಲ್ ದುರಸ್ತಿ ಕೆಲಸ ಪ್ರಾರಂಭಿಸಿದ್ದು, ಕೂಡಲೇ ನೀರಿನ ವ್ಯವಸ್ಥೆ ಮಾಡಲಾಗುವುದು. ಸ್ವಲ್ಪ ಸಮಯಾವಕಾಶ ನೀಡಿದರೆ ನಿಮ್ಮ ವಾರ್ಡ್‌ನ ಎಲ್ಲ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದು ಹೇಳಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ರವಿ ಜವಳಗಿ ಧರಣಿ ಹಿಂಪಡೆದರು.

    ಪುರಸಭೆ ಮಾಜಿ ಉಪಾಧ್ಯಕ್ಷ ಚನಬಸು ಹುರಕಡ್ಲಿ, ಶಿವಾನಂದ ಅಂಗಡಿ, ಮುಖ್ಯ ಇಂಜಿನಿಯರ್ ಡಿ.ಬಿ. ಪಠಾಣ್, ಕಚೇರಿ ವ್ಯವಸ್ಥಾಪಕ ರಾಘು ನಡುವಿನಮನಿ, ಮಹಾಲಿಂಗ ಸಮೇರ, ಸಿಬ್ಬಂದಿ ವಿ.ಜಿ. ಕುಲಕರ್ಣಿ, ಬಿ.ವೈ. ಮರ್ದಿ, ರಾಜು ಹೂಗಾರ, ರವಿ ಹಲಸಪ್ಪಗೋಳ, ಮಹಾಲಿಂಗ ಗಸ್ತಿ, ಮಹಾಲಿಂಗ ಮಾದರ ಮುಂತಾದವರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts