More

    ಮಹಾಜನ್ ವರದಿಯೇ ಅಂತಿಮ

    ಮೂಡಲಗಿ: ರಾಜಕೀಯ ಸ್ವಾರ್ಥಕ್ಕಾಗಿ ಯಾರೋ ಪ್ರಚೋದನಕಾರಿ ಹೇಳಿಕೆ ಕೊಟ್ಟ ಮಾತ್ರಕ್ಕೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರದು. ಎಂದೆಂದಿಗೂ ಬೆಳಗಾವಿ ಕರ್ನಾಟಕದ್ದೇ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಮೂಡಲಗಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇರೆ ಭಾಷೆ ಕಲಿತರೂ, ಕನ್ನಡ ಮರೆಯಬಾರದು. ನೆಲ, ಜಲ, ಭಾಷೆ ವಿಚಾರವಾಗಿ ಪಕ್ಷಭೇದ ಮರೆತು ಒಂದಾಗಿ ಹೋರಾಡಬೇಕು. ಕನ್ನಡ ಉಳಿಸಿ, ಬೆಳೆಸಲು ಪಣ ತೊಡಬೇಕು. ಗಡಿ ವಿವಾದ ಈಗ ಮುಗಿದ ಅಧ್ಯಾಯ. ಮಹಾಜನ್ ವರದಿಯೇ ಅಂತಿಮ ಎಂದರು.

    ಜಾಗೃತಿ ಮೂಡಿಸಿ: ಗಡಿನಾಡಿನಲ್ಲಿ ಸರ್ವಭಾಷಿಕರು ಸಹೋದರರಂತೆ ಬದುಕುತ್ತಿದ್ದೇವೆ. ನಮ್ಮಲ್ಲಿ ಭಿನ್ನಾಭಿಪ್ರಾಯ ಮೂಡಿಸಲು ಕೆಲವರು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಮಹಾ ಸಿಎಂ ಉದ್ಧವ್ ಠಾಕ್ರೆಗೆ ಟಾಂಗ್ ನೀಡಿದರು. ಯಾರದೋ ಅಸಂಬದ್ಧ ಹೇಳಿಕೆಗೆ ಕಿವಿಗೊಡದೆ ಎಲ್ಲರೂ ಒಗ್ಗಟ್ಟಾಗಿಯೇ ಇರಬೇಕು. ಈ ಬಗ್ಗೆ ಕನ್ನಡ ಸಂಘಟನೆಗಳು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

    ನಿಮ್ಮೊಂದಿಗಿದ್ದೇನೆ: ಹೊಸದಾಗಿ ರಚನೆಯಾದ ಮೂಡಲಗಿ ತಾಲೂಕಿನಲ್ಲಿ 2020ರ ಮಾರ್ಚ್‌ನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಅದು ಮುಂದೂಡಿಕೆಯಾಗಿತ್ತು. ಈಗ ಅಚ್ಚುಕಟ್ಟಾಗಿ ಸಮ್ಮೇಳನ ಆಯೋಜಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಕನ್ನಡಪರ ಕಾರ್ಯಕ್ರಮಗಳನ್ನು ಇನ್ನೂ ಅದ್ದೂರಿಯಾಗಿ ಮಾಡೋಣ. ಕನ್ನಡ ಕಟ್ಟುವ ನಿಟ್ಟಿನಲ್ಲಿ ಸದಾ ನಿಮ್ಮೊಂದಿಗೆ ಇದ್ದೇನೆ ಎಂದು ಭರವಸೆ ನೀಡಿದರು.

    ಮೂಡಲಗಿಗೆ ಅಗತ್ಯ ಕಚೇರಿ: ಮೂಡಲಗಿಯಲ್ಲಿ ಹಂತ ಹಂತವಾಗಿ ಎಲ್ಲ ಇಲಾಖೆಗಳ ಕಚೇರಿ ಆರಂಭಗೊಳ್ಳುತ್ತಿವೆ. ಶೀಘ್ರ ಉಪನೋಂದಣಾಧಿಕಾರಿ ಕಚೇರಿಯೂ ಆರಂಭಗೊಳ್ಳಲಿದೆ. ಬೆಳಗಾವಿ ಜಿಲ್ಲೆಯಲ್ಲೇ ಮಾದರಿ ತಾಲೂಕಾಗಿ ಮೂಡಲಗಿ ಹೊರಹೊಮ್ಮಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts