More

    ಎನ್​​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಜಾತಿ ತನಿಖೆಗೆ ಸಿದ್ಧ ಎಂದ ಮಹಾ ಸರ್ಕಾರ

    ಮುಂಬೈ: ಬಾಲಿವುಡ್​ ನಟ ಶಾರುಖ್​ ಖಾನ್​ ಪುತ್ರ ಬಂಧಿಸಲ್ಪಟ್ಟಿರುವ ಮುಂಬೈ ಕ್ರೂಸ್​ ಶಿಪ್​ ಡ್ರಗ್ಸ್​ ಕೇಸಿನ ಮೇಲ್ವಿಚಾರಣೆ ನಡೆಸುತ್ತಿರುವ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೇಡೆ ವಿರುದ್ಧ ಮಹಾರಾಷ್ಟ್ರ ಸಚಿವ ನವಾಬ್​ ಮಲಿಕ್ ಹಲವು ಆರೋಪಗಳನ್ನು ಮಾಡಿದ್ದಾರೆ. ವಾಂಖೆಡೆ ಮುಸಲ್ಮಾನನಾಗಿದ್ದರೂ ಎಸ್​ಸಿ ಕ್ಯಾಟಗರಿಗೆ ಸೇರಿರುವುದಾಗಿ ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಮೀಸಲಾತಿಯಡಿ ಸರ್ಕಾರಿ ಸೇವೆಗೆ ಸೇರಿದ್ದಾರೆಂಬುದು ಪ್ರಮುಖ ಆರೋಪ.

    ಇದೀಗ ಈ ಬಗ್ಗೆ ಮಾತನಾಡಿರುವ ರಾಜ್ಯ ಸಾಮಾಜಿಕ ನ್ಯಾಯ ಸಚಿವ ಧನಂಜಯ ಮುಂಡೆ, ವಾಂಖೆಡೆಯ ಜಾತಿ ಪ್ರಮಾಣ ಪತ್ರದ ಸಿಂಧುತ್ವವನ್ನು ಯಾರಾದರೂ ಪ್ರಶ್ನಿಸಿ ತಮ್ಮ ಇಲಾಖೆಗೆ ದೂರು ನೀಡಿದಲ್ಲಿ ಅದರ ತನಿಖೆ ನಡೆಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.

    ಇದನ್ನೂ ಓದಿ: ಹಸು ಮೇಯಿಸಲು ಹೋದ ಅಮ್ಮ-ಮಗ ನೀರುಪಾಲು

    ಈ ಬಗ್ಗೆ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದ್ದು, ವಾಂಖೆಡೆಯನ್ನು ಟಾರ್ಗೆಟ್ ಮಾಡುವುದು ರಾಜ್ಯ ಸರ್ಕಾರದ ಏಕೈಕ ಅಜೆಂಡಾ ಇದ್ದ ಹಾಗಿದೆ ಎಂದಿದೆ. “ರಾಜ್ಯ ಸಾಮಾಜಿಕ ನ್ಯಾಯ ಇಲಾಖೆಗೆ ದೂರು ಬಂದಲ್ಲಿ ತನಿಖೆ ನಡೆಸುವ ಹಕ್ಕಿದೆ. ವಾಂಖೆಡೆ ನಮ್ಮ ಪಕ್ಷದ ಕಾರ್ಯಕರ್ತನಲ್ಲ ಅಥವಾ ಯಾವುದೇ ಬಿಜೆಪಿ ನಾಯಕನ ಸಂಬಂಧಿಕನಲ್ಲ. ಆದರೆ, ಡ್ರಗ್​ ಪೆಡ್ಲರ್​ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿರುವ ಅಧಿಕಾರಿಯನ್ನು ಟಾರ್ಗೆಟ್​ ಮಾಡುತ್ತಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಬಿಜೆಪಿ ನಾಯಕ ಪ್ರವೀಣ್ ದರೆಕರ್​ ಹೇಳಿದ್ದಾರೆ. (ಏಜೆನ್ಸೀಸ್)

    ನ್ಯಾಯಬೆಲೆ ಅಂಗಡಿಗಳಿಂದ ಹಣ ವಸೂಲಿ! ಎಸಿಬಿ ದಾಳಿಯಲ್ಲಿ 5.61 ಲಕ್ಷ ರೂ. ಪತ್ತೆ

    VIDEO| ಶಿವಣ್ಣನನ್ನು ತಬ್ಬಿ ಕಣ್ಣೀರಿಟ್ಟ ತೆಲುಗು ಸ್ಟಾರ್​ ಚಿರಂಜೀವಿ… ದುಃಖದಿಂದ ನೀರಾದ ಶಿವಣ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts