More

    ಕಾವೇರಿಗೆ 149ನೇ ಮಹಾ ಆರತಿ

    ಕುಶಾಲನಗರ: ಕರ್ನಾಟಕ-ತಮಿಳುನಾಡು ನಡುವೆ ನಡೆಯುತ್ತಿರುವ ನೀರಿನ ತಿಕ್ಕಾಟಕ್ಕೆ ಕಾವೇರಿ ಮಾತೆಯ ಮೂಲಕವೇ ಶಾಶ್ವತ ಪರಿಹಾರ ಸಿಗಬೇಕು ಎಂದು ಉದ್ಯಮಿ ಶಶಿಕುಮಾರ್ ಗೌಡ ಹೇಳಿದರು.

    ಕುಶಾಲನಗರದಲ್ಲಿ ಮಾತೆ ಕಾವೇರಿ ಮಹಾ ಆರತಿ ಬಳಗದ ವತಿಯಿಂದ ಶನಿವಾರ ನಡೆದ 149ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಪ್ರತಿಯೊಬ್ಬರೂ ಪ್ರಕೃತಿಯ ಆರಾಧನೆ ಮಾಡಬೇಕು. ಪ್ರಕೃತಿ ಉಳಿದಲ್ಲಿ ಮಾತ್ರ ಮಾನವನ ಸಂಕುಲ ಉಳಿಯಲು ಸಾಧ್ಯ. ಜಲಮೂಲಗಳ ರಕ್ಷಣೆಗೆ ಪ್ರತಿಯೊಬ್ಬರೂ ಪಣತೊಡಬೇಕು ಎಂದು ಹೇಳಿದರು.

    ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕಿ ಲೀಲಾವತಿ ಮಾತನಾಡಿ, ಸ್ವಚ್ಛ ಕಾವೇರಿ ಹರಿಯುವ ಸಂದರ್ಭ ಕಲುಷಿತ ಆಗದಂತೆ ಎಚ್ಚರವಹಿಸಬೇಕು. ನದಿಯ ನೀರನ್ನು ಸಂರಕ್ಷಿಸಲು ಪ್ರತಿಯೊಬ್ಬರೂ ಜವಾಬ್ದಾರಿ ವಹಿಸಬೇಕು ಎಂದು ಕರೆ ನೀಡಿದರು.

    ಕಾವೇರಿ ನದಿ ಸ್ವಚ್ಛತಾ ಅಭಿಯಾನದ ರಾಜ್ಯ ಸಂಚಾಲಕ ಚಂದ್ರಮೋಹನ್ ಮಾತನಾಡಿ, ಅಕ್ಟೋಬರ್ 20 ರಂದು ನಡೆಯುವ 150ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ವಿವಿಧ ಸಾಧು ಸಂತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

    ಅರ್ಚಕ ಕೃಷ್ಣಮೂರ್ತಿ ಭಟ್ ಕುಂಕುಮಾರ್ಚನೆ, ಅಷ್ಟೋತ್ತರ ಪೂಜೆ ನೆರವೇರಿಸಿದರು. ನಂತರ ಸಾಮೂಹಿಕ ಮಹಾ ಆರತಿ ಬೆಳಗಲಾಯಿತು. ಕಾವೇರಿ ನದಿ ನೀರಿನ ಗೊಂದಲ ಶೀಘ್ರವಾಗಿ ಬಗೆ ಹರಿಯುವಂತೆ ಪ್ರಾರ್ಥಿಸಲಾಯಿತು. ಪುರಸಭೆ ಸದಸ್ಯೆ ರೂಪ ಉಮಾಶಂಕರ್, ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಪ್ರಧಾನ ಕಾರ್ಯದರ್ಶಿ ಮಂಡೆಪಂಡ ಬೋಸ್ ಮೊಣ್ಣಪ್ಪ, ಪ್ರಮುಖರಾದ ಕೆ.ಜಿ. ಮನು, ಮಂಜುನಾಥ್, ಉಮಾಶಂಕರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts